ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೇ! ಅಡ್ವಾಣಿಯೂ ಕೈಹಿಡಿಯಲಿಲ್ವೇ ಸದಾನಂದಜೀ?

By Srinath
|
Google Oneindia Kannada News

ಬೆಂಗಳೂರು, ಜುಲೈ 11: ರಾಜ್ಯ ರಾಜಕಾರಣದಲ್ಲಿ ದಿಢೀರನೆ ಅಪಾರ ಬೆಂಬಲಿಗರು ಅದರಲ್ಲೂ ಜಾತೀ ಬಾಂಧವ್ಯದಲ್ಲಿ ಒಕ್ಕಲಿಗರ ಬೆಂಬಲವನ್ನು ದಕ್ಕಿಸಿಕೊಂಡ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಂದು ರಾಜ್ಯಪಾಲರ ಅಂಗಳದಲ್ಲಿ ಕಾಣಿಸಿಕೊಂಡಾಗ ಅವರನ್ನು ಹಿಸ್ ಎಕ್ಸಲೆನ್ಸಿ ರಾಜ್ಯಪಾಲ ಭಾರದ್ವಾಜ್ ಅವರು ಆತ್ಮೀಯವಾಗಿಯೇ ಮಾತನಾಡಿಸಿ ಕಳಿಸಿದ್ದಾರೆ.

sadananda-gowda-resigns-governor-bhardwaj-prices
ಜನ್ಮಜನ್ಮಾಂತರದ ಬಂಧುವೋ ಎಂಬಂತೆ ಮಾತನಾಡಿರುವ ರಾಜ್ಯಪಾಲರು ಸದಾನಂದರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದ್ದಾರೆ. ಜತೆಗೆ ಒಂದಷ್ಟು ಕಿಚ್ಚೂ ಹಚ್ಚಿದ್ದಾರೆ - 'ಛೇ, ಸದಾನಂದಜೀ! ಯಾಕೆ ಹೀಗ್ಹಾಗೋಯ್ತು? ಅಡ್ವಾಣಿಜೀಯೂ ನಿಮ್ಮ ಕೈಹಿಡಿಯಲಿಲ್ಲವಲ್ಲ. ಅಡ್ವಾಣಿಜೀ ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತನನ್ನು ಕೈಹಿಡಿಯುತ್ತಾರೆ ಅಂತ ಅಂದ್ಕೋಂಡಿದ್ದೆ. Any way ನಿಮ್ಮಂಥ ಒಬ್ಬ ಉತ್ತಮ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಳೆದುಕೊಂಡಿದ್ದಾರೆ' ಎಂದು ಸದಾನಂದರ ಬೆನ್ನು ಸವರಿದ್ದಾರೆ.

ಹಾಗೆ ನೋಡಿದರೆ 'ಮುಖ್ಯಮಂತ್ರಿ ಸದಾನಂದ' ಮತ್ತು ಭಾರದ್ವಾಜ್ ಅವರ ನಡುವೆ ಕಳೆದ 11 ತಿಂಗಳಲ್ಲಿ ಸುಮಧುರ ಬಾಂಧವ್ಯವೇ ಇತ್ತು. ಹೇಳಬೇಕು ಅಂದರೆ ಹಿಸ್ ಎಕ್ಸಲೆನ್ಸಿ ರಾಜ್ಯಪಾಲ ಭಾರದ್ವಾಜ್ ಅವರು ಯಡಿಯೂರಪ್ಪ ಅವರನ್ನು ಗೋಳುಹೊಯ್ದುಕೊಂಡಷ್ಟು ತಮ್ಮ ಜೀವನದಲ್ಲಿ ಬೇರೆ ಯಾರನ್ನೂ ಗೋಳುಹೊಯ್ದುಕೊಂಡಿಲ್ಲ ಎಂದೇ ಹೇಳಬಹುದು. ಇದಕ್ಕೆ ಯಡಿಯೂರಪ್ಪ ಎಷ್ಟು ಕಾರಣೀಭೂತರು ಎಂಬುದು ಬೇರೆ ವಿಷಯವಾದರೂ ಒಬ್ಬ ರಾಜ್ಯಪಾಲರಾಗಿ ರಾಜಭವನದ ಅಂಗಳದಾಚೆಗೂ ಆಟವಾಡಿದರು ಇದೇ ಭಾರದ್ವಾಜರು.

ಅಂದಹಾಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರೊಡಗೂಡಿ ಸದಾನಂದರು ಬೆಳಗ್ಗೆ 12 ಗಂಟೆ ಸುಮಾರಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕೈಗೆ ರಾಜೀನಾಮೆ ಪತ್ರ ನೀಡಿದರು.

ರಾಜೀನಾಮೆಗೂ ಮೊದಲು ವಿಧಾನ ಸೌಧದಲ್ಲಿರುವ ಬಸವೇಶ್ವರ ಪ್ರತಿಮೆಗೆ ಸದಾನಂದರು ಮಾಲಾರ್ಪಣೆ ಮಾಡಿದರು. 2011 ಆಗಸ್ಟ್ 4 ರಂದು ರಾಜ್ಯದ 20ನೆಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸದಾನಂದ ಗೌಡರು ರಾಜ್ಯಕ್ಕೆ ಸುಮಾರು 11 ತಿಂಗಳ ಆಡಳಿತ ನೀಡಿದ್ದಾರೆ.

English summary
Even as Karnataka CM Sadananda Gowda resigns, Governor HR Bhardwaj prices him for his good administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X