ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಬರ: ಟ್ಯಾಂಕರ್ ನೀರು ತುಟ್ಟಿ

By Srinath
|
Google Oneindia Kannada News

bangalore-dry-no-rain-pvt-tankers-mint-money
ಬೆಂಗಳೂರು, ಜುಲೈ 11: ರಾಜಧಾನಿಯ ಜನ ತೊಟ್ಟು ನೀರಿಗಾಗಿ ಪರದಾಡುತ್ತಿದ್ದಾರೆ. ನಮ್ಮೂರ ಮಂದಿಯ ಮೇಲೆ ಮಳೆ ಸಿಂಚನಗೈಯುವ ಬದಲು ಮಳೆರಾಯ ಯಾಕೋ ಶ್ಯಾನೆ ಬೇಸರಪಟ್ಟುಕೊಂಡಿದ್ದಾನೆ. ಮುಂಗಾರು ಮಳೆ ಜೋರಾಗಿಯೇ ಮುನಿಸಿಕೊಂಡಿದೆ. ಬೆಂಗಳೂರಿನಲ್ಲಿ ಪ್ರತಿದಿನ 500 ದಶಲಕ್ಷ ಲೀಟರ್ ನೀರಿನ ಕೊರತೆ ಕಾಡುತ್ತಿದೆ.

ಖಾಸಗಿ ಜಲ ಸನ್ನಿಧಿಯಲ್ಲಿ: ಅಧಿಕಾರಸ್ಥ ಜನ ಬೀದಿಬೀದಿಯಲ್ಲಿ ಜಗಳವಾಡುತ್ತಿದ್ದರೆ ಜನ ನೀರಿಗಾಗಿ ಕಂಡಕಂಡವರ ಮೇಲೆ ಹರಿಹಾಯುತ್ತಿದ್ದಾರೆ. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಖಾಸಗಿ ನೀರು ಸರಬರಾಜುದಾರರು ತುಂಬಾ ತುಟ್ಟಿಯಾಗಿದ್ದಾರೆ.

ಗಾಳಿ ಬಂದಾಗ ತೂರಿಕೋ ಎಂಬಂತೆ ಖಾಸಗಿ ನೀರು ಸರಬರಾಜುದಾರರು ಟ್ಯಾಂಕರ್ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಆಷಾಢದ ಗಾಳಿಯಲ್ಲಿ ಮಳೆ ಕೈಕೊಟ್ಟಿರುವಾಗ ಟ್ಯಾಂಕರ್ ನೀರಿನ ಬೆಲೆ ದುಬಾರಿಯಾಗಿದೆ. ಸಾಮಾನ್ಯವಾಗಿ 6,000 ಮತ್ತು 3,000 ಲೀಟರ್ ಟ್ಯಾಂಕರುಗಳಲ್ಲಿ ಖಾಸಗಿಯವರು ಗ್ರಾಹಕರಿಗೆ ಒದಗಿಸುತ್ತಾರೆ. ಮಾಮೂಲಿ ಸಂದರ್ಭಗಳಲ್ಲಾದರೆ 3,000 ಲೀಟರ್ ನೀರು ಸಾಮರ್ಥ್ಯದ ಟ್ಯಾಂಕರಿನ ಬೆಲೆ 300 ರು. ಇರುತ್ತಿತ್ತು. ಆದರೆ ಈಗ ಅದರ ಬೆಲೆ 600 ರು. ನಿಂದ 1,000 ರು. ಆಗಿದೆ.

ಇದು ಯಾವುದೋ ಒಂದು ಬಡಾವಣೆಯ ಪರಿಸ್ಥಿತಿಯಲ್ಲ. ಪ್ರತಿಷ್ಠಿತ, ಸುರಕ್ಷಿತ, ಪುರಾತನ ಬಡಾವಣೆಗಳಲ್ಲೂ ಹನಿ ಹನಿ ನೀರಿಗೂ ಬವಣೆ ಪಡುವಂತಾಗಿದೆ. ಜೂನ್ ತಿಂಗಳಲ್ಲಿ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು. ಇನ್ನು ಈ ಬಾರಿ ಮಳೆಗಾಲದಲ್ಲಿ ಮಳೆ ಬಾರದಿದ್ದರೆ ಬೆಂಗಳೂರು ಜನರ ಗೋಳು ಬತ್ತಿದ ಮೋಡಗಳನ್ನು ತಲುಪುವುದು ನಿಶ್ಚಿತ.

ಅಷ್ಟು ದುಡ್ಡು ಕೊಟ್ಟರೂ ನೀರು ಸಿಗುತ್ತಿಲ್ಲ. ಹಿಂದಿನ ದಿನವೇ ಬುಕ್ ಮಾಡಿಸಬೇಕು. ಮಾರನೆಯ ದಿನ ಬಂದರೆ ಪುಣ್ಯ. ಇಲ್ರಾಂದ್ರೆ regular customer ಗಳಿಗೆ ಮೊದಲು ನೀರು ಹಾಕಿ, ನಂತರ ಸಮಯ, ನೀರು ಉಳಿದರೆ ದಿಢೀರ್ ಬೇಡಿಕೆಯಿಡುವ ಜನರಿಗೆ ತಲುಪಿಸುತ್ತಿದ್ದಾರೆ ಈ ಖಾಸಗಿ ಮಂದಿ.

ಇನ್ನು ಜಲಮಂಡಳಿಯಂತೂ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದೆ. ಕಚೇರಿಗೆ ಹೋದರೆ ದೂರು ಕೇಳುವವರೇ ಇರುವುದಿಲ್ಲ. ಇದ್ದರೂ ಇದೆಲ್ಲ ಮಾಮೂಲಿ. ಈ ಬಾರಿ ಮಳೆಯೇ ಬಂದಿಲ್ಲ. ನಾವು ತಾನೆ ಏನು ಮಾಡುವುದು. ನಮ್ಮಲ್ಲೂ ಸ್ಟಾಕಿಲ್ಲ. ಖಾಸಗಿಯವರತ್ರ ನೀರು ಹಾಕಿಸಿಕೊಂಡು ಅಡ್ಜಸ್ಟ್ ಮಾಡಿಕೊಳ್ಳಿ ಎಂದು 'ಉಚಿತ' ಸಲಹೆ ನೀಡುತ್ತಾರೆ.

English summary
Bangalore goes dry no rain- Tankers mint money. With the monsoon remaining weak and water levels low, Bangalore is paying for it big time with a steep rise in price of water supplied by private tankers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X