ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಮಾನವ ನಿತ್ಯಾನ 10 ಕೋಟಿ ಮಾನ ಬಿದ್ಹೋಯ್ತು

By Srinath
|
Google Oneindia Kannada News

nityananda-demand-for-10-cr-disposed-high-court
ಬೆಂಗಳೂರು, ಜುಲೈ 10: 'ನನ್ನ ಆಶ್ರಮಕ್ಕೆ ಬೀಗ ಹಾಕಿಸುವ ಮುಖ್ಯಮಂತ್ರಿ ಸದಾನಂದರ ತಪ್ಪು ಆದೇಶದಿಂದದಾಗಿ ಅಪಾರ ನಷ್ಟವುಂಟಾಗಿದೆ' ಎಂದು ಬೊಬ್ಬೆ ಹಾಕಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾಂನದನ ಬಾಯಿಗೆ ಹೈಕೋರ್ಟ್ ಬೀಗ ಹಾಕಿದೆ. ಹೀಗಾಗಿ ನಿತ್ಯಾನಂದ ಪ್ರಭುಗಳ 10 ಕೋಟಿ ರು ಮಾನ ಹೈಕೋರ್ಟ್ ಅಂಗಳದಲ್ಲಿ ಬಿದ್ಹೋಗಿದೆ.

ಆದರೆ 'ಸದಾನಂದ ತಮ್ಮ ಗುರುಗಳಾದ ನಿತ್ಯಾನಂದರನ್ನು ಅಟಕಾಯಿಸಿಕೊಂಡಿದ್ದಕ್ಕೇ ಅವರಿಗೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿತು. ನೋಡಿ ನಮ್ಮ ಗುರುಗಳ ಮಹಿಮೆ' ಎಂದು ಆತನ ಶಿಷ್ಯೋತ್ತಮರು ಪಕಪಕನೆ ನಕ್ಕಿದ ಸುದ್ದಿ ವರದಿಯಾಗಿಲ್ಲ!

'ತನ್ನ ಜನಪ್ರಿಯತೆ ಸಹಿಸಲಾರದೆ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ' ಎಂದು ಆರೋಪಿಸಿ, ರಾಜ್ಯದ ಮುಖ್ಯಮಂತ್ರಿಯ ವಿರುದ್ಧವೇ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ದಾಷ್ಟ್ಯವನ್ನು ನಿತ್ಯಾನಂದ ಕಡೆಯವರು ತೋರಿದ್ದರು. ಧ್ಯಾನಪೀಠಕ್ಕೆ ಬೀಗಮುದ್ರೆ ಹಾಕಿದ್ದನ್ನು ಪ್ರಶ್ನಿಸಿದ್ದ ನಿತ್ಯಾನಂದ ಶಿಷ್ಯರು ಅದರಿಂದ ತಮ್ಮ ಗುರುಗಳಿಗೆ ಅಪಾರ ಮಾನ ನಷ್ಟವಾಗಿದೆ ಎಂದೂ petition ಇಟ್ಟಿದ್ದರು.

'ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ತಮ್ಮ ಧ್ಯಾನಪೀಠಕ್ಕೆ ಕಳೆದ ಜೂನ್ ತಿಂಗಳಲ್ಲಿ ಬೀಗಮುದ್ರೆ ಹಾಕಲು ಮುಖ್ಯಮಂತ್ರಿಗಳು ಕಾನೂನು ಬಾಹಿರವಾಗಿ ಆದೇಶ ಹೊರಡಿಸಿದ್ದಾರೆ. ತನ್ನ ಬಂಧನಕ್ಕೆ ಆದೇಶ ನೀಡಿರುವ ಮುಖ್ಯಮಂತ್ರಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾನನಷ್ಟ ಪರಿಹಾರವಾಗಿ 10 ಕೋಟಿ ರು. ತುಂಬಿಕೊಡಬೇಕು' ಎಂದು ದೂರಿ ಸರ್ಕಾರದಿಂದ 10 ಕೋಟಿ ರೂಪಾಯಿ ಪರಿಹಾರದ ಬೇಡಿಕೆ ಒಡ್ಡಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

'ಆಶ್ರಮಕ್ಕೆ ಹಾಕಲಾಗಿದ್ದ ಬೀಗಮುದ್ರೆಯನ್ನು ಬಹಳ ಮುಂಚೆಯೇ ಸರ್ಕಾರ ತೆಗೆದಿದೆ. ಹಾಗೂ ಎಲ್ಲ ಕೊಠಡಿಗಳನ್ನು ನಿತ್ಯಾನಂದನ ಭಕ್ತರಿಗೆ ನೀಡಲಾಗಿದೆ' ಎಂದು ರಾಜ್ಯ ಸರಕಾರ ತಿಳಿಸಿದ್ದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಸುಭಾಷ್ ಬಿ. ಆದಿ ಆದೇಶ ಹೊರಡಿಸಿದ್ದಾರೆ. ಈ ಮನವಿಯನ್ನು ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾದರೆ ಅಲ್ಲೂ ಅದಕ್ಕೂ ಮಾನ್ಯತೆ ಇರುವಿದಿಲ್ಲ ಎಂದು ನ್ಯಾ. ಆದಿ ಅಭಿಪ್ರಾಯಪಟ್ಟರು.

English summary
The self-styled godman Swami Nithyananda plea demanding Rs 10 crore is disposed in the Karnataka High Court on Monday. The controversial godman sought Rs 10 crore as damages to his ashram property from the state government during search and seizures carried out in his Bidari ashram in Jun 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X