ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೀಶ್ ಶೆಟ್ಟರ್ ಮೇಲೆ ಅಕ್ರಮ ಡಿನೋಟಿಫೈ ಆರೋಪ

By Mahesh
|
Google Oneindia Kannada News

Jagadish Shettar
ಬೆಂಗಳೂರು, ಜು.10: ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮೇಲೆ ಭೂ ಹಗರಣ ಆರೋಪಗಳು ಕೇಳಿ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರವಿದ್ದ ಕಾಲದಲ್ಲಿ ಅಕ್ರಮವಾಗಿ ಡಿ ನೋಟಿಫೈ ಮಾಡಿದ ಆರೋಪವನ್ನು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಅವರ ಮೇಲೆ ಕರ್ನಾಟಕ ಜನ ಜಾಗೃತಿ ವೇದಿಕೆಯ ತಲಕಾಡು ಚಿಕ್ಕರಂಗೇಗೌಡ ಎಂಬುವರು ಆರೋಪಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ದಾಸನಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮ ವಾಗಿ ಡಿನೋಟಿ ಫೈ ಮಾಡಿಸಿಕೊಂಡು ಖಾಸಗಿ ಅವರಿಗೆ ಮಾರಾಟ ಮಾಡಿರುವ ಆರೋಪವನ್ನು ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮೇಲೆ ಹೊರೆಸಲಾಗಿದೆ.

ಸದ್ಯದಲ್ಲೇ ಈ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗುವುದು ಎಂದಿರುವ ರಂಗೇಗೌಡ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹುನ್ನಾರವಿಲ್ಲ. ನಮಗೆ ಅಗತ್ಯವಾದ ದಾಖಲೆಗಳು ಸಿಕ್ಕಿರಲಿಲ್ಲ. ಹೀಗಾಗಿ ಇಷ್ಟು ದಿನ ಮಾಧ್ಯಮಗಳ ಮುಂದೆ ವಿಷಯ ಮುಂದಿಡಲು ಆಗಿರಲಿಲ್ಲ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗೇಗೌಡ, 2004ರಲ್ಲಿ ಸರ್ಕಾರ ದಾಸನಪುರದಲ್ಲಿ 188 ಎಕರೆ ಜಮೀನನ್ನು ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆಂದು ವಶಪಡಿಸಿಕೊಂಡಿತ್ತು ಎಂದು ಹೇಳಿದರು.

ನಂತರ 2006ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಜಗದೀಶ್ ಶೆಟ್ಟರ್ ದಾಸನಪುರದಲ್ಲಿರುವ 188 ಎಕರೆ ಜಮೀನನ್ನು ಡಿ ನೋಟಿಫೈ ಮಾಡಿದ್ದಾರೆ. ಈಗ ಅಲ್ಲಿ ಖಾಸಗಿ ಅವರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.

ಈ ಜಮೀನನ್ನು ಮೂಲ ಮಾಲೀಕರಿಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಅದು ಬಿಟ್ಟು ಖಾಸಗಿಯವರಿಗೆ ನೀಡಿರುವುದು ಸರಿಯಿಲ್ಲ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ತಲಕಾಡು ಚಿಕ್ಕರಂಗೇಗೌಡ ಅವರು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಮೇಲೆ ಲೋಕಾಯುಕ್ತ ಸಂಸ್ಥೆ ದೂರು ನೀಡಿ, ತನಿಖೆಗೆ ಆದೇಶಿಸುವ ಹೊತ್ತಿಗೆ ಸಿಎಂ ಕುರ್ಚಿಯಲ್ಲಿ ಕೂತಿರುತ್ತಾರೆಯೇ? ಗೊತ್ತಿಲ್ಲ. ಅಲ್ಲದೆ, ಇದು ಸಣ್ಣ ಪ್ರಮಾಣದ ಹಗರಣ ಎನ್ನಬಹುದು. ಬಿಜೆಪಿ ಸರ್ಕಾರದ ಮುಖಂಡರ ಅಕ್ರಮಗಳ ಅಸಮಗ್ರ ಪಟ್ಟಿಯತ್ತ ಕಣ್ಣು ಹಾಯಿಸಿ. ಇದರಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಲೋಕೋಪಯೋಗಿ ಕಾಮಗಾರಿಗಳ ಮೂಲಕ ಜಗದೀಶ್ ಶೆಟ್ಟರ್ ಅವರು ಗಳಿಸಿದ ಲಾಭ ಗಳಿಯ ಮೊತ್ತವೂ ಸೇರಿದೆ. ಇದೆಲ್ಲವೂ ಅಂದಾಜು ಮೊತ್ತವಾದರೂ ಹಗರಣಗಳಲ್ಲಿ ಈ ಮಹಾನ್ ನಾಯಕರು ಭಾಗಿಯಾಗಿರುವುದಂತೂ ನಿಜ.

* ಯಡಿಯೂರಪ್ಪ : 3000 ಕೋಟಿ ರು ಅಕ್ರಮ ಗಣಿಗಾರಿಕೆ ಮತ್ತು ಡಿ ನೋಟಿಫಿಕೇಷನ್ ಪ್ರಕರಣ
* ಎಂಪಿ ರೇಣುಕಾಚಾರ್ಯ: 1800 ಕೋಟಿ ರು ಅಬಕಾರಿ ಇಲಾಖೆ ಭ್ರಷ್ಟಾಚಾರ
* ಕರುಣಾಕರ ರೆಡ್ಡಿ: 2000 ಕೋಟಿ ಗಣಿ ಹಗರಣ
* ಸಿಎಂ ಉದಾಸಿ: 300 ಕೋಟಿ ಲೋಕೋಪಯೋಗಿ ಇಲಾಖೆ ಹಗರಣ
* ಜಗದೀಶ್ ಶೆಟ್ಟರ್ : 350 ಕೋಟಿ ಗ್ರಾಮೀಣಾಭಿವೃದ್ಧಿ ಮತ್ತು ನೀರು ಸರಬರಾಜು
* ಶೋಭಾ ಕರಂದ್ಲಾಜೆ: 400 ಕೋಟಿ ರು ಕೊಡಗಿನ ಕಾಫಿ ಎಸ್ಟೇಟ್ ಹಗರಣ
* ಮುರುಗೇಶ್ ನಿರಾಣಿ : 1200 ಕೋಟಿ ರು ಸಕ್ಕರೆ ಕಾರ್ಖಾನೆ ಲೈಸನ್ಸ್ ಹಾಗೂ ಕೈಗಾರಿಕಾ ಭೂ ಹಗರಣ
* ವಿ ಸೋಮಣ್ಣ: 900 ಕೋಟಿ ರು ವಸತಿ, ಬಿಡಿಎ ನಿವೇಶನ ಹಾಗೂ ಕಬ್ಬಿಣ ಅದಿರು ಹಗರಣ
* ಬಸವರಾಜ್ ಬೊಮ್ಮಾಯಿ: 600 ಕೋಟಿ ಭದ್ರಾ ಮೇಲ್ಡಂಡೆ ಯೋಜನೆ, ಲೋಕೋಪಯೋಗಿ ಇಲಾಖೆ

English summary
Jagadish Shettar has illegally de notified 188 acres of land belonging to APMC in Banaglore North Dasanapura Taluk alleged Karnataka Janajagruti Vedike Talakadu chikkarange Gowda. TC Gowda said soon he will submit complaint to Lokayukta about this land scam during BJP JDS 20-20 Government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X