ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಬಿ ಸ್ಪಿರಿಟ್ಸ್ ಉಳಿಸಲು ಆರ್ ಸಿಬಿ ಮಾರಾಟ : ಕಿಂಗ್ ಮಲ್ಯ

By Mahesh
|
Google Oneindia Kannada News

Vijay Mallya
ಬೆಂಗಳೂರು, ಜು.10 : ಕಿಂಗ್ ಫಿಷರ್ ಏರ್ ಲೈನ್ಸ್ ಆರ್ಥಿಕ ಸಮಸ್ಯೆ ಹೊರಬರಬೇಕಾದರೆ ಉನ್ನತ ಅಧಿಕಾರಿಗಳ ಷೇರುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ಸಿಇಒ ಸಂಜಯ್ ಅಗರವಾಲ್ ಹೇಳಿದ್ದು ನಿಜವಾಗುತ್ತಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ನಂತರ ಯುನೈಟೆಡ್ ಸ್ಪಿರಿಟ್ಸ್ ಸಾಲಬಾಧೆ ತೀರಿಸಿಕೊಳ್ಳಲು ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ವಿಜಯ್ ಮಲ್ಯ ಮುಂದಾಗಿದ್ದಾರೆ.

ವೈಟ್ ಅಂಡ್ ಮ್ಯಾಕೆ ಬ್ರಾಂಡ್ ಖರೀದಿಸಿದ ಮೇಲೆ ಯುನೈಟೆಡ್ ಸ್ಪಿರಿಟ್ಸ್ ಜಾಗತಿಕವಾಗಿ ಉನ್ನತ ಸ್ಥಾನಕ್ಕೇರಿತ್ತು. ಆದರೆ, ಸುಮಾರು 7,000 ಕೋಟಿ ರು ಸಾಲ ಉಳಿಸಿಕೊಂಡಿರುವ ಯುನೈಟೆಡ್ ಸ್ಪಿರಿಟ್ಸ್ ಗೆ ರಿಲೀಫ್ ನೀಡಲು ಆಸ್ತಿ ಮಾರಾಟ, ಷೇರು ಮಾರಾಟಕ್ಕೆ ಕಿಂಗ್ ಮಲ್ಯ ಮುಂದಾಗಿದ್ದಾರೆ.

ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,5000 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದೆ.

ಸಾಲದ ಪ್ರಮಾಣ ತಗ್ಗಿಸಲು ಮೂಲ ಬಂಡವಾಳವಲ್ಲದ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಆರ್ ಸಿಬಿ ಷೇರುಗಳು, ಯುಬಿಎಲ್ ಷೇರುಗಳು ಇದರಲ್ಲಿ ಸೇರಿದೆ. ಆದರೆ, ಸದ್ಯಕ್ಕೆ ಒಳ್ಳೆ ಬೆಲೆ ಸಿಗುವ ತನಕ ಕಾಯಲಾಗುವುದು ಎಂದು ಯುನೈಟೆಡ್ ಸ್ಪಿರಿಟ್ಸ್ ಲಿ.ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೂಪರ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ 120 ಮಿಲಿಯನ್ ಕೇಸ್ ಗಳನ್ನು ಮಾರಾಟ ಮಾಡಿದ್ದ ಯುಸಿಎಲ್, FY16ರ ಹೊತ್ತಿಗೆ 200 ಮಿಲಿಯನ್ ಕೇಸುಗಳನ್ನು ಮಾರಾಟ ಮಾಡುವ ಗುರಿ ಹೊಂದಿತ್ತು, ಯುಸಿಎಲ್ ತನ್ನ ಗುರಿ ತಲುಪಬೇಕಾದರೆ ತನ್ನ ಬ್ರಾಂಡ್ ಮೌಲ್ಯವನ್ನು ಉಳಿಸಿಕೊಳ್ಳಬೇಕಿದೆ.

ಎಣ್ಣೆ ಕಂಪನಿ ಕಥೆ: ಕೊಂಕಣಿ ಸಮುದಾಯಕ್ಕೆ ಸೇರಿದ ವಿಜಯ್ ಮಲ್ಯರ ಖಾಸಗಿ ಆಸ್ತಿ ಮೊತ್ತ 1.4 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ವರದಿ ಹೇಳುತ್ತದೆ. ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಕರೆಯಲ್ಪಡುವ ಮಲ್ಯ ಮದ್ಯದ ದೊರೆಯಾಗಿ ಈಗಲೂ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ ಕೂತಿದ್ದಾರೆ.

ಮಲ್ಯಗೆ ಇಂದಿಗೂ ಯುಬಿಗೇ ಆಧಾರ: ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೌಲಯ್ 464 ಕೋಟಿ ರೂ. ಇದ್ದದ್ದು ಷೇರುಗಳ ಮೌಲ್ಯವನ್ನು 1200 ಕೋಟಿಗೆ ಹೆಚ್ಚಿಸಿಕೊಂಡಿದೆ. ಅಲ್ಲದೆ ಐಪಿಎಲ್ ನಲ್ಲಿ ಆರ್ ಸಿಬಿ ಕಪ್ ಗೆಲ್ಲದಿದ್ದರೂ ಮಲ್ಯ ಬುದ್ಧಿವಂತ.

ಆಟಗಾರರು, ಅಂಪೈರ್, ಅಧಿಕಾರಿಗಳಿಗೆ ಕಿಂಗ್ ಫಿಷರ್ ವಿಮಾನ ಕಳಿಸುತ್ತಿದ್ದ. ಡೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ನಲ್ಲೂ ಒಂದಿಷ್ಟು ಷೇರು ಹಾಕಿ ಹಣ ಗಳಿಸಿಕೊಂಡ. ಎಫ್ 1 ಟೀಮ್ ಅನ್ನು 610.2 ಕೋಟಿ ರು ಕೊಟ್ಟು ಖರೀದಿಸಿದ. ಕುದುರೆ ಬೆನ್ನಿಗೂ ದುಡ್ದು ಕಟ್ಟುವುದರಲ್ಲಿ ನಿಸ್ಸೀಮನಾಗಿರುವ ಮಲ್ಯ ಸುಮಾರು 200 ರೇಸ್ ಗೆಲ್ಲುವ ಕುದುರೆಗಳನ್ನು ಸಾಕಿಕೊಂಡಿದ್ದಾನೆ.

English summary
After Kingfisher Airlines debt trap, Chairman Vijay Mallya's United Spirits is looking at reducing its debt by selling its stake in its Indian Premier League (IPL) team Royal Challenges Bangalore (RCB). United Spirits debt has surpassed Rs 7,000 crore. Royal Challengers Bangalore stake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X