ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಡರರ್ ಗೆ ಶಾಕ್ ನೀಡಲು ಮರ್ರೆ ಭರ್ಜರಿ ತಯಾರಿ

By Mahesh
|
Google Oneindia Kannada News

Roger Federer confident of getting his 7th Wimbledon title
ಲಂಡನ್, ಜು.8: ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ ವಿರುದ್ಧ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡಿನ ಮರ್ರೆ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನ ಭಾನುವಾರ ಸಂಜೆ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆಯಲಿದೆ. ಫೈನಲ್ ನಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾನಿರ್ಮಾಣವಾಗಲಿದೆ..

ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಏಳನೇ ಹಾಗೂ ವೃತ್ತಿಜೀವನದ 17ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. 1936ರ ಬಳಿಕೆ ಫೈನಲ್ ತಲುಪಿದ ಬ್ರಿಟಿಷ್ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿರುವ ಆಂಡ್ರೆ ಮರ್ರೆಗೆ ವೃತ್ತಿಜೀವನದ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸಿದೆ.

1936 ರಲ್ಲಿ ಫ್ರೆಡ್ ಪೆರ್ರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು. ಆ ಬಳಿಕ ಇಂಗ್ಲೆಂಡ್‌ನ ಆಟಗಾರರು ಪ್ರಶಸ್ತಿ ಜಯಿಸಿಲ್ಲ. ಟಿಮ್ ಹೆನ್ಮನ್, ರೋಜರ್ ಟೇಲರ್ ಹಾಗೂ ಮೈಕ್ ಸಂಗ್ಟರ್ ಎಲ್ಲರೂ ಸೆಮಿಫೈನಲ್ ಹಂತ ತಲುಪಿದ್ದೇ ಸಾಧನೆಯಾಗಿತ್ತು. ಹೀಗಾಗಿ ಸ್ಕಾಟ್ಲೆಂಡಿನ ಮರ್ರೆ ಮೇಲೆ ಇಂಗ್ಲೆಂಡಿನ ಟೆನಿಸ್ ಪ್ರೇಮಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈವರೆಗೂ 4 ಗ್ರಾಂಡ್ ಸ್ಲಾಮ್ ಫೈನಲ್ ತಲುಪಿದ್ದಾರೆ. 2008 ಹಾಗೂ 2010ರಲ್ಲಿ ರೋಜರ್ ಫೆಡರರ್ ವಿರುದ್ಧವೇ ಸೋತಿದ್ದಾರೆ. ಇನ್ನೊಂದರಲ್ಲಿ ಜೋಕವಿಕ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದರು. 4ನೇ ಫೈನಲ್ ನಲ್ಲಿ ಜಯದ ನಿರೀಕ್ಷೆ ಹೊತ್ತಿದ್ದಾರೆ.

ಇನ್ನೊಂದೆಡೆ ಈ ಬಾರಿ ವಿಂಬಲ್ಡನ್ ಗೆದ್ದರೆ ರೋಜರ್ ಫೆಡರರ್ ಅವರು 7 ಪ್ರಶಸ್ತಿ ಗೆದ್ದ ಪೀಟ್ ಸಾಂಪ್ರಾಸ್ ದಾಖಲೆ ಸರಿಗಟ್ಟುತ್ತಾರೆ. ಜೊತೆಗೆ ವಿಶ್ವದ 3ನೇ ಶ್ರೇಯಾಂಕದ ಆಟಗಾರ ಫೆಡರರ್ ಈ ಗೆಲುವಿನಿಂದ ಮತ್ತೊಮ್ಮೆ ನಂ.1 ಪಟ್ಟಕ್ಕೇರಬಹುದಾಗಿದೆ.

ಮಿಶ್ರ ಡಬಲ್ಸ್ ಫೈನಲ್ ಗೆ ಪೇಸ್ ಜೋಡಿ: ನಾಲ್ಕನೇ ಶ್ರೇಯಾಂಕಿತರಾದ ಭಾರತದ ಲಿಯಾಂಡರ್ ಪೇಸ್ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಆಲ್ ಇಂಗ್ಲೆಂಡ್ ಕ್ಲಬ್‌ನವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.

ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅಮೆರಿಕಾದ ಬಾಬ್ ಬ್ರ್ಯಾನ್ ಹಾಗೂ ಲಿಜೆಲ್ ಹ್ಯೂಬರ್ ವಿರುದ್ಧ 7-5, 3-6, 6-3ರ ಅಂತರದ ಗೆಲುವು ದಾಖಲಿಸಿದರು. ಭಾನುವಾರ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಎರಡನೇ ಶ್ರೇಯಾಂಕಿತರಾದ ಅಮೆರಿಕದ ಮೈಕ್ ಬ್ರ್ಯಾನ್ ಹಾಗೂ ಲಿಸಾ ರೇಮಾಂಡ್ ವಿರುದ್ಧ ಪೇಸ್-ವೆಸ್ನಿನಾ ಜೋಡಿ ಆಡಲಿದೆ.

ಸೆರೆನಾಗೆ 5ನೇ ವಿಂಬಲ್ಡನ್: ಸೆರೆನಾ ವಿಲಿಯಮ್ಸ್ ಅವರು ಪೋಲಂಡಿನ ಅಗ್ನೀಸ್ಕಾ ರಾದ್ವಂಸ್ಕಾ ಅವರನ್ನು 122 ನಿಮಿಷಗಳಲ್ಲಿ 6-1,5-7,6-2 ಅಂಕಗಳ ಮೂಲಕ ಸೋಲಿಸಿ, 14ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗಳಿಸಿದ್ದಾರೆ.

30 ವಯೋಮಾನದ ಆಟಗಾರಲ್ಲಿ 1990 ರಲ್ಲಿ ಮಾರ್ಟನಾ ನವ್ರಾಟಿಲೋವಾ ಪ್ರಶಸ್ತಿ ಗೆದ್ದ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ಕೀರ್ತಿ ಸೆರೆನಾಗೆ ಸಲ್ಲುತ್ತದೆ.

ಸೆರೆನಾಳಿಗೆ 9.89 ಕೋಟಿ ರು ಬಹುಮಾನ ಪ್ರಶಸ್ತಿ ಲಭಿಸಿದೆ.ಈ ಗೆಲುವಿನೊಂದಿಗೆ 5 ಬಾರಿ ವಿಂಬಲ್ಡನ್ ಗೆದ್ದ ಸಾಧನೆ ಮಾಡಿರುವ ಅಕ್ಕ ವೀನಸ್ ದಾಖಲೆಯನ್ನು ಸೆರೆನಾ ಸರಿ ಗಟ್ಟಿದ್ದಾರೆ. ಸೆರಾನಾ 5 ವಿಂಬಲ್ಡನ್, 5 ಆಸ್ಟ್ರೇಲಿಯನ್, 1 ಫ್ರೆಂಚ್ ಹಾಗೂ 3 ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ.

English summary
Roger Federer confident of getting his 7th Wimbledon title at all England club. Murray has already lost two big finals against Federer, in US Open 2008 and Australian Open 2010. But with huge support from the crowd, the Scotsman can set the record straight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X