• search

ಸನ್ನಿ ಲಿಯೋನ್ ಹುಚ್ಚಿನಲ್ಲಿ ಮುಳುಗಿದ್ದ ಜಗತ್ತಿನ ಅತ್ಯುಗ್ರ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಜು.8: ಜಗತ್ತನ್ನೇ ನಡುಗಿಸಿದ ಭಯಾನಕ ಉಗ್ರ ಮಾದಕ ಕನ್ಯೆ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಹುಚ್ಚಿನಲ್ಲಿ ಮುಳುಗಿಬಿಟ್ಟಿದ್ದ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ವರ್ಮಾ ಹೇಳುತ್ತಿರುವುದು ದೊಡ್ಡಣ್ಣ ಅಮೆರಿಕಕ್ಕೆ ನಡುಕ ಹುಟ್ಟಿಸಿದ ಅಲ್ ಖೈದಾ ಮುಖ್ಯಸ್ಥ ದಿವಂಗತ ಒಸಾಮಾ ಬಿನ್ ಲಾಡೆನ್ ಬಗ್ಗೆ.


    ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ವಿಡಿಯೋಸ್ ನೋಡದಿದ್ದರೆ ಲಾಡೆನ್ ಗೆ ನಿದ್ದೆ ಬರುತ್ತಿರಲಿಲ್ಲ. ಸನ್ನಿ ಮಾದಕ ದೇಹಕ್ಕೆ ಬಿನ್ ಲಾಡೆನ್ ಮನಸೋತಿದ್ದ. ಒಸಾಮಾ ಬಿನ್ ಲಾಡೆನ್ ಅಡಗುದಾಣದ ಮೇಲೆ ಪಾಕಿಸ್ತಾನಿ ಪೊಲೀಸರು ದಾಳಿ ಮಾಡಿದಾಗ ಸನ್ನಿ ಲಿಯೋನ್ ವಿಡಿಯೋ ಸಿಡಿಗಳು ಸಿಕ್ಕಿದೆ ಎಂದು ವರ್ಮಾ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

    ಅದರೆ, ಈ ಬಗ್ಗೆ ಸ್ಪಷ್ಟವಾಗಿ ಹೇಳದ ವರ್ಮಾ"Is it true tht osama hd a stack of sunny leone videos in his Abbotobad compound?" ಎಂದು ಪ್ರಶ್ನಿಸಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಸನ್ನಿ ವಿಡಿಯೋ ನೋಡುವುದರಲ್ಲಿ ಬಿನ್ ಲಾಡೆನ್ ತಲ್ಲೀನನಾಗಿದ್ದ ಎಂದು ವರ್ಮಾ ಹೇಳಿದ್ದಾರೆ.

    ಬಿನ್ ಲಾಡೆನ್ ಅಡುಗುತಾಣದ ಮೇಲೆ ದಾಳಿ ನಡೆಸಿದ ನಂತರ ಅನೇಕ ಸಿಡಿಗಳು, ಪುಸ್ತಕಗಳು ಸಿಕ್ಕಿರುವುದು ನಿಜವಾದರೂ ಅದರಲ್ಲಿ ಸನ್ನಿ ಲಿಯೋನ್ ವಿಡಿಯೋ ಸಿಡಿಗಳು ಇದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ವರ್ಮಾ ಮಾತ್ರ ಸನ್ನಿ ಸಿಡಿಗಳು ಇದೆ ಎಂದು ತಮಗೆ ತಿಳಿದಿದೆ ಎಂದು ಟ್ವೀಟ್ ಮಾಡಿದೆ.

    2011ರ ಮೇ ನಲ್ಲಿ ಬಿನ್ ಲಾಡೆನ್ ಹತ್ಯೆ ನಂತರ ಅನೇಕ ಊಹಾ ಪೋಹ ಸುದ್ದಿಗಳು ಹಬ್ಬಿರುವುದು ನಿಜ. ಲಾಡೆನ್ ಸೇರಿದಂತೆ ಅನೇಕ ಉಗ್ರರು ಪೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದರು ಎಂದು ಪಾಕಿಸ್ತಾನ ಮಾಧ್ಯಮಗಳು ಸುದ್ದಿ ಪ್ರಕಟಿಸಿದೆ.

    ಬಿನ್ ಲಾಡೆನ್ ಹೆಸರಿನಲ್ಲಿ $55,000 ಕ್ಕೂ ಅಧಿಕ ಹಣವಿರಲಿಲ್ಲ. $50,000ಕ್ಕೂ ಅಧಿಕ ಹಣವನ್ನು ಕೀನ್ಯಾ ಹಾಗೂ ತಾಂಜಾನಿಯಾಗೆ ರವಾನಿಸಲು ಹೇಳಿದ್ದವಿದ್ಯುತ್ಛಕ್ತಿ ಬಳಕೆ ಬಗ್ಗೆ ಲಾಡೆನ್ ಗೆ ಬೇಸರವಿತ್ತು.

    ನೈಜ ಜೀವನಕ್ಕೆ ಇದು ಅಡ್ಡಿ ಎಂದು ಆಗಾಗ ಗೊಣಗುತ್ತಿದ್ದ ಎಂದು ಎಂದು ಲಾಡೆನ್ ಉತ್ತರಾಧಿಕಾರಿ ಅಯ್ಮಾನ್ ಅಲ್ ಜವಹಾರಿ ಹೇಳಿದ್ದಾನೆ. ಹೀಗಿರುವಾಗ ಲಾಡೆನ್ ಹೇಗೆ ಸನ್ನಿ ವಿಡಿಯೋ ಹುಚ್ಚಿಗೆ ಬಿದ್ದಿದ್ದ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ವರ್ಮಾ ಅವರೇ ಉತ್ತರಿಸಬೇಕು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Famous Bollywood director Ram Gopal Verma shocked all with his tweet saying that the slain al-Qaeda chief Osama bin Laden was addicted to Sunny Leone's videos.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more