• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದಾನಂದ ಗೌಡ ಅವರ ರಾಜೀನಾಮೆ ಅಂಗೀಕೃತ

By Mahesh
|
ನವದೆಹಲಿ, ಜು.8: ಪಕ್ಷದ ಹಿತದೃಷ್ಟಿಯಿಂದ ಸದಾನಂದ ಗೌಡರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ದೆಹಲಿಯಲ್ಲಿ ಭಾನುವಾರ(ಜು.8) ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಮುಂಬರುವ ಚುನಾವಣಾ ದೃಷ್ಟಿಯಲ್ಲಿ ಬದಲಾವಣೆ ಅನಿವಾರ್ಯವಾಗಿತ್ತು. ಸದಾನಂದ ಗೌಡರ 11 ತಿಂಗಳ ರಾಜ್ಯಭಾರ ಹೈಕಮಾಂಡ್ ಗೆ ತೃಪ್ತಿ ತಂದಿದೆ. ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ಸ್ಥಾನದಲ್ಲೂ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದರು ಎಂದು ನಿತಿನ್ ಗಡ್ಕರಿ, ಗೌಡರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪ್ರಮಾಣ ವಚನ ಕುರಿತಂತೆ ಪಕ್ಷದ ವರಿಷ್ಠರು ಸೋಮವಾರ ಬೆಂಗಳೂರಿನಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಲಿದ್ದಾರೆ.ನೂತನ ಮುಖ್ಯಮಂತ್ರಿಯ ಪ್ರಮಾಣವಚನವು ಸೋಮವಾರ ಕೈಗೂಡುವ ಸಂಭವವಿದೆ.

ನಾಯಕತ್ವದ ಹಸ್ತಾಂತರ ವಿಧಿ ವಿಧಾನಗಳನ್ನು ಪರಾಂಭರಿಸುವುದರ ಜೊತೆಗೆ ಉಭಯ ಬಣಗಳ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ರಾಜನಾಥ್ ಸಿಂಗ್ ಸೋಮವಾರವೇ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಆಯ್ತು. ಆದರೆ, ಉಪ ಮುಖ್ಯಮಂತ್ರಿ ಸ್ಥಾನದ ಸೃಷ್ಟಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆ ನಿತಿನ್ ಗಡ್ಕರಿ ಗುಟ್ಟು ಬಿಟ್ಟುಕೊಡಲಿಲ್ಲ.ಬೆಂಗಳೂರಿಗೆ ಸೋಮವಾರ ತೆರಳುವ ಪಕ್ಷದ ವರಿಷ್ಠರು, ಶಾಸಕರು ಮತ್ತು ಪಕ್ಷದ ಮುಖಂಡರೊಡನೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದರು.

ಈ ನಡುವೆ ಒಂದೇ ಒಂದು ಕಳಂಕವಿಲ್ಲದೆ ರಾಜ್ಯಭಾರ ನಡೆಸಿಕೊಂಡು ಹೋಗುತ್ತಿದ್ದ ಸದಾನಂದ ಗೌಡರನ್ನು ಕೆಳಗಿಳಿಸಿರುವುದರ ಬಗ್ಗೆ ರಾಜ್ಯ ಒಕ್ಕಲಿಗರ ಸಮುದಾಯದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಒಕ್ಕಲಿಗರ ಪರ ಸಂಘಟನೆಗಳು, ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶದ ಧ್ವನಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ಸದಾನಂದ ಗೌಡರನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ನೇಮಿಸಿ, ಉಪಮುಖ್ಯಮಂತ್ರಿ ಕುರ್ಚಿಯಲ್ಲಿ ಮಾನ್ಯ ಕೆಎಸ್ ಈಶ್ವರಪ್ಪ ಅವರನ್ನು ಕೂರಿಸುವ ಪ್ರಯತ್ನಗಳು ನಡೆದಿದೆ. ಉಪ ಮುಖ್ಯಮಂತ್ರಿ ರೇಸ್ ನಲ್ಲಿ ಆರ್ ಅಶೋಕ್ ಕೂಡಾ ಇದ್ದಾರೆ. ಆದರೆ, ಈಗಾಗಲೇ ಎರಡು ಮಜಬೂತು ಖಾತೆಗಳನ್ನು ಹೊಂದಿರುವ ಅಶೋಕ್ ಗೆ ಅಷ್ಟು ಅಧಿಕಾರ ಸಾಕು ಎಂಬ ಮಾತುಗಳು ಗಡ್ಕರಿ ಮನೆ ಕಂಪೋಡಿನಲ್ಲಿ ಕೇಳಿಬಂದವು.

ಈಗ ಮುಂದಿನ ಪ್ರಶ್ನೆ ಎಂದರೆ, ಜಗದೀಶ್ ಶೆಟ್ಟರ್ ಮಂತ್ರಿ ಮಂಡಲ ಪುನರಾಚನೆ ಯಾವಾಗ ಮಾಡುತ್ತಾರೆ? ಅದರಲ್ಲಿ ಯಾರು ಯಾರಿಗೆ ಪ್ರಾತಿನಿಧ್ಯ ಸಿಗುತ್ತದೆ? ಈಗಿರುವ ಸಚಿವರ ಸ್ಥಾನ ಕಳೆದುಕೊಳ್ಳುವವರು ಯಾರು? ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯುವ ಹೊಸ ಮುಖಗಳು ಯಾವುವು? ಇವೇ ಮುಂತಾದ ಜಿಜ್ಞಾಸೆಗಳನ್ನು ಬಿಜೆಪಿ ಹೇಗೆ ನಿಭಾಯಿಸಿಕೊಂಡು ಹೋಗುತ್ತದೆ ಎನ್ನುವುದು ರಾಜಕೀಯ ವಲಯಗಳಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸದಾನಂದ ಗೌಡ ಸುದ್ದಿಗಳುView All

English summary
BJP High Command accepts Sadananda Gowda's resignation. CM designate Jagadish Shettar is likely to take oath on Monday(Jul.9). Arun Jaitley, Rajanath Singh to visit Bangalore to supervise smooth transition of power and sort out other nagging issues in the BJP Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more