ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಗೌಡರಿಗೆ ಅನ್ಯಾಯ, ಒಕ್ಕಲಿಗರ ಪ್ರತಿಭಟನೆ

By Mahesh
|
Google Oneindia Kannada News

Sadananda Gowda
ಮೈಸೂರು, ಜು.8: ಸದಾನಂದ ಗೌಡ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೇಳಿ ಬಿಜೆಪಿ ಹೈ ಕಮಾಂಡ್ ದೊಡ್ಡ ತಪ್ಪು ಮಾಡಿದೆ. ಜಾತಿ ರಾಜಕೀಯಕ್ಕೆ ದಕ್ಷ ಆಡಳಿತಗಾರನೊಬ್ಬನನ್ನು ರಾಜ್ಯ ಕಳೆದುಕೊಂಡಿದೆ ಎಂದು ಸದಾನಂದ ಗೌಡರನ್ನು ಬೆಂಬಲಿಸಿ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ.

ಇದೀಗ ಬಂದ ಸುದ್ದಿ : ಪಕ್ಷದ ರಾಷ್ಟ್ರೀಯ ಮುಖಂಡರಾದ ಅರುಣ್ ಜೇಟ್ಲಿ,, ರಾಜನಾಥ್ ಸಿಂಗ್ ಹಾಗೂ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೋಟೆಲ್ ಕ್ಯಾಪಿಟಲ್ ನಲ್ಲಿ ನಡೆಯಲು ಉದ್ದೇಶಿಸಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ನಾಯಕನೆಂದು ಪ್ರಕಟಿಸಲಿದ್ದಾರೆ.

ಬಿಜೆಪಿಯ ಮುಂದಿನ ಶಾಸಕಾಂಗ ಪಕ್ಷದ ನಾಯಕನೆಂದು ಬಿಂಬಿತರಾಗಿರುವ ಜಗದೀಶ್ ಶೆಟ್ಟರ್ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸಮಾರಂಭ ಬುಧವಾರ ಬೆಳಗ್ಗೆ 11.45 ರಿಂದ 12 ಗಂಟೆಯೊಳಗೆ ನಡೆಯಲಿದೆ ಎಂದು ದೆಹಲಿ ಹೈಕಮಾಂಡ್ ಕಚೇರಿ ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ.

ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್ ವಿರುದ್ಧ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಗೌಡರ ರಾಜೀನಾಮೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮೈಸೂರಿನಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದು, ರಸ್ತೆ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದರು.

ಮೈಸೂರಿನ ಸಿದ್ಧಾರ್ಥ ನಗರ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ಡಿವಿಎಸ್ ರನ್ನು ಅಧಿಕಾರದಿಂದ ಕೆಳಗಿಳಿಸದಂತೆ ಆಗ್ರಹಿಸಿದ್ದಾರೆ.

ಸದಾನಂದ ಗೌಡರನ್ನು ಬದಲಾಯಿಸುವುದನ್ನು ರಾಜ್ಯದ ಒಕ್ಕಲಿಗ ಸಮುದಾಯವು ವಿರೋಧಿಸಿತ್ತು. ಸದಾನಂದ ಗೌಡ ರಕ್ಷಿಸಿ ಅಭಿಯಾನವೊಂದನ್ನು ಒಕ್ಕಲಿಗರ ಸಂಘ ಈಗಾಗಲೇ ಆರಂಭಿಸಿದೆ. ಈ ನಡುವೆ ಬೆಳವಣಿಗೆಗಳು ಯಾವ ರೀತಿಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

ಮಠಾಧೀಶರ ಬೆಂಬಲ: ಡಿವಿ ಸದಾನಂದ ಗೌಡರನ್ನು ಮುಖ್ಯಮಂತ್ರ್ರಿ ಸ್ಥಾನದಿಂದ ಅನಗತ್ಯವಾಗಿ ಪದಚ್ಯುತಗೊಳಿಸಿದ್ದಕ್ಕೆ ಬಿಜೆಪಿಗೆ ತಕ್ಕ ಉತ್ತರ ಸಿಗಲಿದೆ. ಯಾವ ಕಾರಣಕ್ಕೆ ಸದಾನಂದ ಗೌಡರನ್ನು ಕೆಳಗಿಳಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟಣೆ ಬೇಕು ಎಂದು ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಅವರು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಶೇ 17ರಷ್ಟು ಒಕ್ಕಲಿಗರ ಮತದಾರರಿದ್ದಾರೆ. 13 ರಿಂದ 15 ಜಿಲ್ಲೆಗಳಲ್ಲಿ ಒಕ್ಕಲಿಗರಿದಾರೆ. 13೦ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ.

ಆದರೆ, ಸದಾ ಕಾಲ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಒಕ್ಕಲಿಗ ಸಮುದಾಯ ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿದೆ. ಪೇದೆಯಿಂದ ಹಿಡಿದು ಐಎಎಸ್ ಅಧಿಕಾರಿಗಳ ತನಕ ಎಲ್ಲರೂ ಕಿರುಕುಳಕ್ಕೆ ಒಳಗಾಗಿದ್ದಾರೆ.

ಇಂಥ ಸಂದರ್ಭದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲುವಂಥ ಕ್ರಮಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದಿರುವುದು ಸರಿಯಿಲ್ಲ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಮುಂದಿನ ಹಂತವಾಗಿ ಒಕ್ಕಲಿಗ ಶಾಸಕರ ರಾಜೀನಾಮೆ ನೀಡಿ ಹೊರಬರುವಂತೆ ಕರೆ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.

English summary
DV Sadananda Gowda supporters protest over BJP High command decision over Sadananda Gowda step down as CM. Ex CM Sadananda's supporters in siddartha Nagar mysore held protest and slammed high command for playing caste politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X