• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೋಭಾ: ಮಾನಸ ಸರೋವರದಲ್ಲಿ ನೀನೇ ಸಾಕಿದ ಗಿಣಿ

By Srinath
|
has-shobha-karandlaje-yeddyurappa-relation-strained
ಬೆಂಗಳೂರು, ಜುಲೈ 7: ರಾಜ್ಯ ಬಿಜೆಪಿ ಗುದ್ದಾಟದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಅತ್ಯಾಪ್ತ ಇಂಧನ ಸಚಿವೆ ಶೋಭಾ ಕರಂದ್ಲಾಜೆ ನಡುವಣ ಸುಮಧುರ ಬಾಂಧವ್ಯ ಹಳಸಿದೆಯೇ !?

ಬಿಜೆಪಿ ತಿಕ್ಕಾಟದಿಂದ ಬೇಸತ್ತು ದೂರದ ಸ್ವಚ್ಚಂದ ಮಾನಸ ಸರೋವರದಲ್ಲಿ ನೀನೇ ಸಾಕಿದ ಗಿಣಿಯಂತೆ ಶೋಭಾ ಹಲಬುತ್ತಿದ್ದಾರಾ? ಆರೇಳು ತಿಂಗಳಿಂದ ಯಡಿಯೂರಪ್ಪನವರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸದಾನಂದ ಗೌಡರು ಇಲ್ಲೂ ಯಡಿಯೂರಪ್ಪಗೆ ಖಳನಾಯಕರಾದರಾ? ಹೀಗೆ ಇದ್ದೊಬ್ಬ ಮಹಿಳಾ ಸಚಿವೆಯು, ಪಕ್ಷ ಅಂಗಾತ ಮಲಗಿರುವಾಗ ಸಂತೈಸದೆ, ಕೋಪ ಮಾಡಿಕೊಂಡು ಬಹುದೂರ ಹೋಗಿರುವುದು ಅನೇಕ ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಿಸ್ ಮಿನಿಸ್ಟರ್, ಮಿಸ್ಸಿಂಗ್ ಆಗಿದ್ದೇ ಮಾಧ್ಯಮಗಳೂ ಸೇರಿದಂತೆ ನಾಡಿನ ಜನತೆಗೆ ಮೇಡಂ ಶೋಭಾ ಅವರು ಊಹೆಗೆ ಸರಕಾಗಿದ್ದಾರೆ? ಇಷ್ಟಾಗಿಯೂ ಮೇಡಂ ಇನ್ನೂ ಹೊರಬಂದು ಹೀಗ್ಹೀಗೆ ಎಂದು ವಸ್ತುಸ್ಥಿತಿಯನ್ನು ಹೇಳಿಲ್ಲ. ಈ ಮಧ್ಯೆ...

ಅವರಿಬ್ಬರೂ ಮೊದಲ ಭೇಟಿಯಲ್ಲೇ ಹತ್ತಿರವಾದವರು. ಪುತ್ತೂರಿನಲ್ಲಿ ಬಿಜೆಪಿ ಧ್ವಜ ಆಡಿಸುತ್ತಿದ್ದ ಶೋಭಾ ಕರಂದ್ಲಾಜೆ ಎಂಬ ಹೆಣ್ಣುಮಗಳು ಮುಂದೆ ಪಕ್ಷದ ಅಧಿನಾಯಕನನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ವಿಜೃಂಭಿಸಿದವರು. ಆರ್ ಎಸ್ಎಸ್ ಕಚೇರಿಯಲ್ಲಿ ಸ್ಟೆನೋ ಆಗಿದ್ದ ಕುಮಾರಿ ಶೋಭಾ ಮುಂದೆ ವಿಧಾನಸೌಧ ಕಾರಿಡಾರಿನಲ್ಲಿ ಢಾಳಾಗಿ ಅಡ್ಡಾಡಿದವರು.

ಇಂತಿಪ್ಪ ಶೋಭಾ ಮೇಡಂಗೆ ಆರಂಭದಲ್ಲೇ ರಾಜಕೀಯ ಆಶ್ರಯ ಕಲ್ಪಿಸಿದವರು ಸನ್ಮಾನ್ಯ ಯಡಿಯೂರಪ್ಪನವರು. ಆದರೆ ಅವರ ಯುಗಳ ಗೀತೆಯಲ್ಲಿ ಈಗ ಅಪಸ್ವರ ಕೇಳಿ ಬಂದಿದೆಯಂತೆ. ಯಡಿಯೂರಪ್ಪನವರ ಅತ್ಯಾಪ್ತರೇ ಇದಕ್ಕೆ ಹಿಮ್ಮೇಳ ಒದಗಿಸಿದ್ದಾರೆ. ಯಡಿಯೂರಪ್ಪನವರಿಗೂ ಪುಟ್ಟಣ್ಣ ಕಣಗಾಲ್ ಜ್ಞಾಪಕಕ್ಕೆ ಬರುತ್ತಿದ್ದಾರೆ ಅನಿಸುತ್ತಿದೆ.

ಶೋಭಾ ಅವರ ತವರೂರಿನ ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲೇ ಬೇಕು ಎಂದು ಯಡಿಯೂರಪ್ಪನವರು ನಿರ್ಣಾಯಕ ಯುದ್ಧ ಸಾರಿದ ಬೆನ್ನಲ್ಲೇ ಈ ಅಪಸ್ವರ ಕೇಳಿಬಂದಿದೆ. ಅದಕ್ಕೂ ಮುನ್ನ ಸದಾನಂದ ಗೌಡರು ಮುಖ್ಯಮಂತ್ರಿ ಗಾದಿಗೇರಿದ ದಿನಗಳನ್ನು ಮೆಲುಕು ಹಾಕಿದಾಗ... 2011ರ ಆಗಸ್ಟಿನಲ್ಲಿ ತಾವು ಅನಿವಾರ್ಯವಾಗಿ ಅಧಿಕಾರ ತ್ಯಜಿಸಿದಾಗ ಅದೇ ಕುರ್ಚಿಯಲ್ಲಿ ಇದೇ ಶೋಭಾರನ್ನು ಕೂಡಿಸಬೇಕು ಎಂದು ಕೊನೆಯ ಘಳೆಗೆಯವರೆಗೂ ಪ್ರಯತ್ನಪಟ್ಟವರು ಯಡಿಯೂರಪ್ಪ.

ಆದರೆ ಕೆಲವು ಶಾಸಕರು ಇದಕ್ಕೆ ಸೊಪ್ಪುಹಾಕಲಿಲ್ಲ; ಶೋಭಾ ಮುಖ್ಯಮಂತ್ರಿ ಪಟ್ಟಕ್ಕೇರುವುದು ಬೇಡವೆಂದು ಪಟ್ಟು ಹಿಡಿದರು. 'ಆಯ್ತು, ಲಿಂಗಾಯತರನ್ನು ಬಿಟ್ಟು ಬೇರೆ ಯಾರನ್ನಾದರೂ ಸಿಎಂ ಮಾಡುವ' ಎಂದು ಯಡಿಯೂರಪ್ಪನವರು ಸೂಚಿಸಿದರು. ಅದಕ್ಕೆ ಶೋಭಾ ಮೇಡಂ 'ನಮ್ಮೂರಿನವರೇ ಆದ ಸದಾನಂದರು ಇದ್ದಾರಲ್ಲಾ ಅವರನ್ನೇ ಸಿಎಂ ಮಾಡಿಬಿಡಿ' ಎಂದು ಅಲವತ್ತುಕೊಂಡರು.

ಆದರೆ ಹೆಚ್ಚು ಕಾಲವೇನು ಹಿಡಿಸಲಿಲ್ಲ; ಕೆಲವೇ ದಿನಗಳಲ್ಲಿ 'ಸದಾನಂದ ಗೌಡ ತನ್ನ ಬೆನ್ನಿಗೆ ಚೂರಿ ಹಾಕುತ್ತಿದ್ದಾನೆ' ಎಂದು ಶೋಭಾ ಮುಂದೆ ಯಡಿಯೂರಪ್ಪನವರು ಆಗಾಗ ಬೆನ್ನು ಮುಟ್ಟಿ ನೋಡಿಕೊಂಡರು. one fine day 'ಇನ್ನು ನನ್ನಿಂದ ತಡೆಯೋಕಾಗೊಲ್ಲ' ಎಂದು ಶೋಭಾ ಎದುರು ತಮ್ಮ ದುಃಖ ತೋಡಿಕೊಂಡ ಯಡಿಯೂರಪ್ಪನವರು 'ಸದಾನಂದನನ್ನು ಕೆಳಗಿಳಿಸಲೇಬೇಕು' ಎಂದು ಘೋಷಿಸಿದರು.

ಆಗ ಅವರ ಮನಸಿನಲ್ಲಿ ಮತ್ತೆ ಶೋಭಾ ಮೆರವಣಿಗೆ ಹಾದುಹೋಯಿತು. ಆದರ ಹಿಂದಿನಿಂದಲೇ ಯಡಿಯೂರಪ್ಪ ಬಣದ ಅನೇಕ ಶಾಸಕರು ಮತ್ತೆ ವಕ್ಕಲಿಗರನ್ನೇ ಸಿಎಂ ಖುರ್ಚಿಯಲ್ಲಿ ಕೂಡಿಸಿ, ತಪ್ಪು ಮಾಡಬೇಡಿ. ಲಿಂಗಾಯತರ ಕಡೆಗೂ ಸ್ವಲ್ಪ ನೋಡಿ' ಎಂದು ಅಲವತ್ತುಕೊಂಡರು. ಜ್ಞಾನೋದಯಗೊಂಡವರಂತೆ ಯಡಿಯೂರಪ್ಪನವರೂ 'ಸರಿ, ಹಾಗಾದರೆ ಜಗದೀಶನಿಗೇ ಪಟ್ಟ ಕಟ್ಟೋಣ' ಎಂದರು.

'ಈ ಬಾರಿಯೂ ಪಟ್ಟ ತಪ್ಪಿತಲ್ಲ' ಎಂಬುದನ್ನು ತಕ್ಷಣ ಗ್ರಹಿಸಿದ ಶೋಭಾ ಮೇಡಂ ತಮ್ಮ ಹೆಜ್ಜೆಗಳನ್ನು ಮೆಲ್ಲಗೆ ಹಿಂದಿಕ್ಕತೊಡಗಿದರು. ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅತ್ತ ಯಡಿಯೂರಪ್ಪ ನಿಷ್ಠರಿಗೂ ಇಷ್ಟ ಇಲ್ಲ, ಇತ್ತ ಯಡಿಯೂರಪ್ಪಗೂ ನನ್ನ ಬಗ್ಗೆ ನಿಷ್ಠೆಯಿಲ್ಲ ಎಂದು ಮುನಿಸಿಕೊಂಡರು. ನಿಂತ ನಿಲುವಿನಲ್ಲೇ ಕೈಲಾಸ ಮಾನಸ ಸರೋವರಕ್ಕೆ ಟಿಕೆಟ್ ಬುಕ್ ಮಾಡಿಸಿಬಿಟ್ಟರು.

ಯಡಿಯೂರಪ್ಪನವರು ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವಲ್ಲಿ ಯಶಸ್ಸು ಕಾಣುತ್ತಿರಬಹುದು ಆದರೆ ಈ ಜಂಜಾಟದಲ್ಲಿ ಶೋಭಾ ಅವರನ್ನು ಕಳೆದುಕೊಂಡರಾ? ಎಂದು ಶೋಭಾ ಕರಂದ್ಲಾಜೆ ಅವರ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to grapevine the Karnataka Power Minister Shobha karandlaje and Ex CM BS Yeddyurappa relationship is now strained.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more