ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರ ನಿಲೇಕಣಿ ಪುತ್ರಿ ಜಾಹ್ನವಿ ಮದುವೆ

By Srinath
|
Google Oneindia Kannada News

nandan-nilekani-daughter-janhavi-to-wed-next-week
ಬೆಂಗಳೂರು‌, ಜುಲೈ 6: ಜಗದ್ವಿಖ್ಯಾತ ಇನ್ಫೋಸಿಸ್ ಕಂಪನಿಯ ಸಹ-ಸಂಸ್ಥಾಪಕ, ಪ್ರಸ್ತುತ ಆಧಾರ್ ಯೋಜನೆಯ ಚುಕ್ಕಾಣಿ ಹಿಡಿದಿರುವ ನಂದನ್ ನಿಲೇಕಣಿ ಅವರ ಪುತ್ರಿ ಜಾಹ್ನವಿ ನಿಲೇಕಣಿಗೆ ಮುಂದಿನ ವಾರ ಕಂಕಣ ಭಾಗ್ಯ. ಜಾಹ್ನವಿ ನಿಲೇಕಣಿಯನ್ನು ಶ್ರೇಯ್ ಚಂದ್ರ ಎಂಬುವವರು ವರಿಸಲಿದ್ದಾರೆ.

ಜಾಹ್ನವಿ ಮತ್ತು ಶ್ರೇಯಚಂದ್ರ ಯೇಲ್ ಯೂನಿವರ್ಸಿಟಿಯಲ್ಲಿ ಸಹಪಾಠಿಗಳು. ಕಳೆದ ವರ್ಷ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ನಂದನ್ ನಿಲೇಕಣಿ ಅವರ ಸ್ವಗೃಹದಲ್ಲಿ ಹೆಚ್ಚೇನು ಆಡಂಬರವಿಲ್ಲದೆ ಮುಂದಿನ ವಾರದಲ್ಲಿ ಈ ಜೋಡಿ ಮದುವೆಯಾಗಲಿದೆ.

ಜಮ್ಷೆಡ್ ಪುರ ಮೂಲದ ಶ್ರೇಯಚಂದ್ರ ಶಾಲಾ ಶಿಕ್ಷಕಿ ರೀಟಾ ಮತ್ತು ಸಂಜಯ್ ಚಂದ್ರ ಅವರ ಸುಪುತ್ರ. ಸಂಜಯ್ ಟಾಟಾ ಸ್ಟೀಲ್ ಕಂಪನಿಯಲ್ಲಿದ್ದಾರೆ. ಅಂದಹಾಗೆ, ಜಾಹ್ನವಿ ನಿಲೇಕಣಿ ವ್ಯಾಲಿ ಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದಾರೆ. 2010ರಲ್ಲಿ ಯೇಲ್ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಮುಂದೆ ಹಾರ್ವರ್ಡ್ ಕೆನೆಡಿ ಸ್ಕೂಲಿನಲ್ಲಿ ಪಿಎಚ್. ಡಿ ಮಾಡಿದರು.

ಕುತೂಹಲದ ಸಂಗತಿಯೆಂದರೆ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯಲ್ಲಿ ಅತಿ ಹೆಚ್ಚು ಷೇರು ಪಾಲು ಹೊಂದಿರುವವರು ಇದೇ ಜಾಹ್ನವಿ ನಿಲೇಕಣಿ. ಅವರ ಪಾಲು ಕೇವಲ ಶೇ. 0.29ರಷ್ಟು. ಆದರೆ ಅದರ ಮೌಲ್ಯ ಪ್ರಸಕ್ತ ಮಾರುಕಟ್ಟೆಯಲ್ಲಿ ಬರೋಬ್ಬರಿ 400 ಕೋಟಿ ರುಪಾಯಿ! ನಂದನ್-ರೋಹಿಣಿ ನಿಲೇಕಣಿ ಅವರಿಗೆ ನಿಹಾರ್ ಎಂಬ ಪುತ್ರನಿದ್ದು, ಆತ ಯೇಲ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಹಾರ್ವರ್ಡ್ ಕೆನೆಡಿ ಸ್ಕೂಲ್ ವ್ಯಾಸಂಗದಿಂದ ಒಂದು ವರ್ಷದ break ತೆಗೆದುಕೊಂಡಿರುವ ಜಾನು, ಮತ್ತೆ ಅಮೆರಿಕಕ್ಕೆ ಮರಳಲಿದ್ದಾರೆ. ಮದುಮಗ ಶ್ರೇಯಚಂದ್ರ ಸಹ ಅದೇ ಹಾರ್ವರ್ಡ್ ಕೆನೆಡಿ ಸ್ಕೂಲಿನಲ್ಲಿ ಎಂಬಿಎ ವ್ಯಾಸಂಗ ಮಾಡಲಿದ್ದಾರೆ.

ಜಾನುರನ್ನು ವರಿಸಲಿರುವ ಶ್ರೇಯಚಂದ್ರ ಬೆಂಗಳೂರು ಮೂಲದ ಕಂಪನಿಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದ್ದಾರೆ. ಜಾನು, ತಮ್ಮ ತಾಯಿ ರೋಹಿಣಿ ನಿಲೇಕಣಿ ಅವರು ನಡೆಸುತ್ತಿರುವ ಅರ್ಘ್ಯಂ ಎಂಬ NGOನಲ್ಲಿ ಟ್ರಸ್ಟಿಯಾಗಿದ್ದಾರೆ. ಅರ್ಘ್ಯಂ NGO, ನೈರ್ಮಲ್ಯೀಕರಣ ಮತ್ತು ಕುಡಿಯುವ ನೀರು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

English summary
Ex Infosys chairman and presently Adhar Chief Nandan Nilekani's daughter, Janhavi, will marry Shray Chandra next week in Bangalore. The couple met while studying at Yale University and got engaged last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X