ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಸಂತೋಷನಿಗೆ ಕೋರ್ಟ್ ಏನು ಹೇಳಿತು ಗೊತ್ತಾ?

By Srinath
|
Google Oneindia Kannada News

nityananda-disciple-santosh-case-hc-observations
ಬೆಂಗಳೂರು, ಜುಲೈ 6: ಇದ್ದ ಒಬ್ಬೇ ಮಗನನ್ನು ಸಾಕಿಸಲುಹಿದ್ದ ತಪ್ಪಿಗೆ ಆ ಮಗ ಅಪ್ಪನ ಎದೆ ಮಟ್ಟಕ್ಕೆ ಬೆಳೆದುನಿಂತಾಗ ಸರ್ವಸಂಗ ಪರಿತ್ಯಾಗಿಯಂತೆ ವಿವಾದಿತ ಸ್ವಾಮಿಯ ತೆಕ್ಕೆಗೆ ಸೇರಿಕೊಂಡರೆ ಆ ವೃದ್ಧ ಅಪ್ಪ-ಅಮ್ಮನ ಗತಿಯೇನಾಗಬೇಡ.

ಹೌದು ನಿನ್ನೆ ನಾಡಿನ ಜನ ಹಾಗಂತ ಮಾತನಾಡಿಕೊಂಡಿದ್ದಾರೆ. ಅದೇ ವೇಳೆ ಹಾಗೆ ಮಗನನ್ನು ಪೋಷಕರಿಂದ ಕಿತ್ತುಕೊಂಡ ಕಳ್ಳ ಸ್ವಾಮಿಯ ಬಗ್ಗೆಯೂ ಅಸಹ್ಯಪಟ್ಟುಕೊಂಡು ಮಾತನಾಡಿದ್ದಾರೆ. ಈ ಬಗ್ಗೆ ಕೋರ್ಟ್ ಸಹ ತೀವ್ರ ಅಸಮಾಧಾನವ್ಯಕ್ತಪಡಿಸಿದೆ.

ವ್ಯವಸ್ಥೆ ಹೇಗಿದೆಯೆಂದರೆ ಕೊನೆಗೆ ಆ ಉಚ್ಛ ನ್ಯಾಯಾಲಯವೇ ಅಸಹಾಯಕವಾಗಿ 'ಸಾರಿ ಅಮ್ಮಾ. ಈ ವಿಷಯದಲ್ಲಿ ನಾವು ಹೆಚ್ಚಿನದೇನು ಮಾಡುವುದಕ್ಕೆ ಆಗುವುದಿಲ್ಲ. ಕಾನೂನೇ ನಮ್ಮ ಕೈಗಳನ್ನು ಕಟ್ಟಿ ಹಾಕಿದೆ' ಎಂದು ಆ ಮಹಾತಾಯಿಗೆ ಕೈಮುಗಿದಿದೆ. ಆದರೆ ದೇವಮಾನವ ನಿತ್ಯಾನಂದ ಪ್ರಭುಗಳು ಒಳಗೊಳಗೇ ನಕ್ಕಿದ್ದಾರೆ.

ಆದರೆ ಕೋರ್ಟ್ ಹಾಗೆ ಅಪ್ಪ-ಅಮ್ಮನಿಗೆ 'ನ್ಯಾಯ' ಒದಗಿಸಿಕೊಡಲು ನಿಸ್ಸಹಾಯಕವಾಗುವ ಮುನ್ನ ಏನೆಲ್ಲ ಹೇಳಿದೆ ಎಂಬುದನ್ನು ನಾಡಿನ ಪ್ರತಿಯೊಬ್ಬ ಅಪ್ಪ-ಅಮ್ಮ, ಮಕ್ಕಳು ಕೇಳಿ ತಿಳಿದುಕೊಳ್ಳಬೇಕಾದ ಜರೂರತ್ತು ಇದೆ. ಹಾಗಂತ ನಮ್ಮ ಮಕ್ಕಳು ಹಾಗೇನೂ ಅಲ್ಲ, ಹೋಗ್ರೀರೀ ಎಂದು ಎಗರಾಡಬೇಡಿ. ಯಾವಾಗ, ಯಾರ ಬುದ್ಧಿ ಹೇಗೋ ಏನೋ? ಏಕೆಂದರೆ ನಿತ್ಯಾನಂದಗಳ ಮಧ್ಯೆ ಕಾಲ ಹಾಗಿದೆ. ದಯವಿಟ್ಟು ಇದನ್ನು ಸ್ವಲ್ಪ ಗಟ್ಟಿಯಾಗಿಯೇ ಓದಿಕೊಳ್ಳಿ...

ತಂದೆ-ತಾಯಿಯನ್ನು ತೊರೆದು ಬಿಡದಿಯ ನಿತ್ಯಾನಂದ ಸ್ವಾಮಿಯ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಶಿವಮೊಗ್ಗದ ಮನ್ನೂರು ಕೃಷ್ಣಮೂರ್ತಿ ಮತ್ತು ಜಯಂತಿ ದಂಪತಿಯ ಪುತ್ರ ಸಂತೋಷ್‌ ಎಂಬುವನನ್ನು ಹೈಕೋರ್ಟ್‌ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸಂತೋಷ ಸಂಕಟಗಳೇನೋ?: 'ಮೊದಲು ಅಪ್ಪ-ಅಮ್ಮನ ಕಣ್ಣಿರು ಒರೆಸಲು ಸಿದ್ಧನಾಗು' ಎಂದು ಹೈಕೋರ್ಟ್‌ ಹಿತವಚನ ಹೇಳಿದ ನಂತರವೂ 'ನಿತ್ಯಾನಂದ ಸೇವೆಗೆ ನನ್ನ ಜೀವನ ಮುಡಿಪು' ಎಂದು ಆ ಪುತ್ರ ರತ್ನ ಸಂತೋಷದಿಂದ ಕೋರ್ಟಿಗೆ ಹೇಳಿದ. ಆದರೆ ಆತ ಹಾಗೆ ನಿತ್ಯಾನಂದನ ಮೋಡಿಗೆ ಸಿಲುಕಲು ಸಂತೋಷನಿಗಿದ್ದ ಸಂಕಟಗಳೇನೋ, ಬಲ್ಲವರಾರು?
ಹಾಗಾಗಿ ಒಲ್ಲದ ಮಗನನ್ನು ಒತ್ತಾಯಪೂರ್ವಕವಾಗಿ ತಂದೆ-ತಾಯಿಗೆ ಒಪ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಬೇಸರದಿಂದಲೇ ನ್ಯಾಯಪೀಠ ಹೇಳಿತು.

ಕೋರ್ಟ್‌ನಲ್ಲಿ ನಡೆದಿದ್ದೇನು?
ಸಂತೋಷ್‌ ಗುರುವಾರ ನ್ಯಾ. ಡಿ.ಬಿ. ಬೋಸ್ಲೆ ಹಾಗೂ ನ್ಯಾ. ಬಿ.ವಿ. ಪಿಂಟೋ ಅವರ ವಿಭಾಗೀಯಪೀಠದ ಎದುರು ಗುರುವಾರ ಹಾಜರಾದ. 'ತಾನು ಸ್ವಯಂಪ್ರೇರಿತವಾಗಿ ಆಶ್ರಮ ಸೇರಿದ್ದು, ಅಲ್ಲಿನ 150 ಮಂದಿಗೆ ಊಟೋಪಚಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಸದ್ಯ ಯಾವುದೇ ಕಾರಣಕ್ಕೂ ತನ್ನ ತಂದೆ ತಾಯಿಯೊಂದಿಗೆ ಹೋಗಲಾರೆ, ಸಂಪಾದಿಸಿದ ಹಣವನ್ನು ಅವರಿಗೇ ನೀಡಿದ್ದು, ಅವರು ಸುಖವಾಗಿ ಜೀವನ ನಡೆಸಲಿ' ಎಂದು ಹೇಳಿಬಿಟ್ಟ.

ಇದನ್ನು ಆಕ್ಷೇಪಿಸಿದ ನ್ಯಾಯಾಲಯ, 'ಆಶ್ರಮದಲ್ಲಿ 150 ಜನರಿಗೆ ಊಟಪೋಚಾರ ಮಾಡುವ ನೀನು, ನಿನ್ನ ಅಪ್ಪ-ಅಮ್ಮನ ಪರಿಸ್ಥಿತಿಯನ್ನು ನೋಡಲಾಗುವುದಿಲ್ಲವೇ? ಅವರು ನಿನ್ನಂತಹ ಮಗನನ್ನು ಹೆತ್ತು, ಸಾಕಿ-ಸಲುಹಿದ್ದಾರೆ. ಇದೀಗ ನಿನ್ನ ಅಗಲಿಕೆಯಿಂದ ಏಕಾಂಗಿಯಾಗಿದ್ದಾರೆ. ತಂದೆ-ತಾಯಿ ಸೇವೆಯೇ ಶ್ರೇಷ್ಠವಾದ ಕಾರ್ಯ. ಮೊದಲು ಅವರ ಕಣ್ಣೀರು ಒರೆಸು'ಎಂದು ಬುದ್ಧಿ ಹೇಳಿತು.

ಹೈಕೋರ್ಟ್‌ ಬುದ್ದಿಮಾತಿಗೆ ಕಿಡಿಗೊಡದ ಸಂತೋಷ್‌, 'ಸ್ವಾಮಿ ವಿವೇಕಾನಂದ ಮನೆ-ಮಠ ತೊರೆದು ಜನಸೇವೆ ಮಾಡಿದ್ದರಿಂದಲೇ ಅವರು ಶೇಷ್ಠ ವ್ಯಕ್ತಿಯಾದರು. ಹೀಗಾಗಿ, ಅವರಂತೆಯೇ ನಾನು ಜನರ ಸೇವೆ ಮಾಡುವೆ' ಅಂದುಬಿಟ್ಟ! ಆಗ ಕೆರಳಿತು ಕೋರ್ಟ್.

'ಸ್ವಾಮಿ ವಿವೇಕಾನಂದರ ಕುರಿತಾದ ಎಷ್ಟು ಪುಸ್ತಕ ಓದಿರುವೆ?, ಅವರೊದಿಗೆ ನಿನ್ನನ್ನು ಹೋಲಿಕೆ ಮಾಡಿಕೊಳ್ಳಬೇಡ. ಸಾಧಕರ ಹೆಸರನ್ನು ನಿಮ್ಮಂತಹವರು ಮಾತನಾಡುವುದೇ ತಪ್ಪು. ವಿವೇಕನಂದರು ಆಶ್ರಮದಲ್ಲಿ ಕಟ್ಟಿಕೊಂಡು ಬಾಳಿದವರಲ್ಲ. ಅವರ ಶೇ. 1ರಷ್ಟು ಕೂಡ ನೀನು ನಿನ್ನ ಜೀವಿತಾವಧಿಯಲ್ಲಿ ಸಾಧಿಸಲಾರೆ. ಅವರ ಹೆಜ್ಜೆ ಗುರುತುಗಳು ಸಾವಿರಾರು ವರ್ಷ ಕಾಲ ಉಳಿಯುವಂತಹವು. ಅವರ ಎತ್ತರವನ್ನೂ ಊಹಿಸಲು ಸಾಧ್ಯವೇ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿತು.

ಮಾಧ್ಯಮದವನ್ನು ಕೇಳಿ ಹೆತ್ತಳೆ, ನಿಮ್ಮಮ್ಮ?: 'ಮನೆಗೆ ಬರುವೆ ಎಂದು ಹಲವು ಬಾರಿ ತಂದೆ-ತಾಯಿಗೆ ಹೇಳಿರುವೆ. ಆದರೆ, ಅವರು ಮಾಧ್ಯಮದವರ ಬಳಿ ಹೋದರು. ಹೀಗಾಗಿ, ಅವರು ನೋವು ಅನುಭವಿಸಲಿ, ಅವರ ಕರ್ಮ' ಎಂದು ಸಂತೋಷ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಮಾತನಾಡಿದ. ಅದಕ್ಕೆ ಕೋರ್ಟ್ ಹೇಳಿದ್ದೇನು ಗೊತ್ತೆ!?

'ಈ ವಿಚಾರದಲ್ಲಿ ಮೂರನೆಯವರನ್ನು (ಮಾಧ್ಯಮದವರನ್ನು) ಎಳೆದು ತರಬೇಡ. ಮಾಧ್ಯಮದವರಿಗೆ ಮಸಾಲ ಸುದ್ದಿ ನೀಡುತ್ತೇನೆ ಎಂದು ಮಾಧ್ಯದವರಿಗೆ ಹೇಳಿ ನಿನ್ನ ತಾಯಿ ನಿನ್ನನ್ನು ಹೆತ್ತಳೇ? ತಂದೆ-ತಾಯಿ ಕೊರಗಿಸಲು ನಿಮಗೆ ಯಾರು ಹಕ್ಕು ನೀಡಿದರು?' ಎಂದು ಕೆಂಡವಾಯಿತು ಕೋರ್ಟ್. ಆಗಲೂ ಸಂತೋಷ ಕರಗಲಿಲ್ಲ. ಬದಲಿಗೆ ಪೋಷಕರ ದುಃಖದ ಖೋಡಿ ಹರಿಯಿತು. ಸಂತೋಷ ಪೋಷಕರೊಂದಿಗೆ ಹೋಗಲು ನಿರಾಕರಿಸಿಬಿಟ್ಟ.

English summary
Munnur Krishnamurthy and Jayanthi couple had submitted through habeas corpus in High Court that their son Santhosh, a hotel management graduate, had become a disciple of Nithyananda and was staying at his ashram in Bidadi near here since 2009. But Santhosh didint yeild to plea of his parents. High Court observations here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X