ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲಿನ ಬೆಲೆ ರು.3 ಏರಿಕೆ ಸಂಭವ

By Mahesh
|
Google Oneindia Kannada News

ಬೆಂಗಳೂರು, ಜು.5: ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರಿಗೆ 3 ರೂ. ಹೆಚ್ಚಳ ಮಾಡಲು kMF ನಿರ್ಧರಿಸಿದೆ. ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ನಂತರ ಪರಿಷ್ಖೃತ ದರಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ವರ್ಷದಲ್ಲಿ ಈಗಾಗಲೇ ಎರೆಡೆರಡು ಬಾರಿ ಬೆಲೆ ಏರಿಕೆ ಮಾಡಲಾಗಿದೆ.

ನೀಲಿ ಹಾಗೂ ಹಸಿರು ಪ್ಯಾಕೆಟ್‌ನಲ್ಲಿ ಮಾರಾಟವಾಗುವ ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಬರದ ಹಿನ್ನೆಲೆಯಲ್ಲಿ ಮೇವು ಮತ್ತು ಇತರ ವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ.

ಬೆಲೆ ಏರಿಕೆ ಕುರಿತು ಜೂ.27 ರಂದು ನಡೆದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ನಂದಿನಿ ಹಾಲು ಲೀಟರ್ ಗೆ 3 ರು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಜನವರಿ 2012ರಲ್ಲಿ ಬೆಲೆ ಏರಿಕೆ ಮಾಡಿದ್ದಾಗ ನೀಲಿ ಹಾಗೂ ಹಸಿರು ಪ್ಯಾಕೆಟ್‌ನಲ್ಲಿ ಮಾರಾಟವಾಗುವ ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳವಾಗಿತ್ತು. ಈ ಮೂಲಕ ನೀಲಿ ಪ್ಯಾಕೆಟ್‌ ಹಾಲಿನ ಬೆಲೆ 24 ರೂ.ಗೆ ಹಾಗೂ ಹಸಿರು ಪ್ಯಾಕೆಟ್‌ ಹಾಲಿನ ಬೆಲೆ 27 ರೂ. ಗೆ ಏರಿಕೆಯಾಗಿದೆ. KMF ಪ್ರತಿ ಲೀಟರಿಗೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಕಳೆದ ನಾಲ್ಕು ತಿಂಗಳಿಂದ ದಾಖಲೆ ಪ್ರಮಾಣದಲ್ಲಿ ಹಾಲು ಖರೀದಿ ಪ್ರಮಾಣ ಹೆಚ್ಚಿರುವುದರಿಂದ ಕರ್ನಾಟಕ ಹಾಲು ಫೆಡರೇಶನ್ (ಕೆಎಂಎಫ್) ತನ್ನ ಮಾರಾಟದ ದ್ರವೀಕೃತ ಹಾಲು ಮಾರಾಟದ ಗುರಿ ಶೇ 20ರಷ್ಟು ಹೆಚ್ಚಿಸಿಕೊಂಡಿದೆ ಎಂದು ಕೆಎಂಎಫ್(ಮಾರುಕಟ್ಟೆ) ವಿಭಾಗದ ಮುಖ್ಯಸ್ಥ ಡಿ ಶ್ರೀನಾಥ್ ಹೇಳಿದ್ದಾರೆ.

ಈಗ ದಿನನಿತ್ಯ 4ರಿಂದ 5 ಲಕ್ಷ ಲೀಟರ್ ಹಾಲು ಹೆಚ್ಚು ಉಳಿಕೆಯಾಗುತ್ತಿತ್ತು, ಖರೀದಿಯಲ್ಲಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ 14 ಲಕ್ಷ ಲೀಟರ್ ಹಾಲು ಒಂದೆಡೆ ಶೇಖರಣೆಯಾಗುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 43 ಲಕ್ಷ ಕಿಲೋ ಹಾಲು ಖರೀದಿ ಮಾಡಲಾಗುತ್ತಿದ್ದರೆ, ಈಗ 52 ಲಕ್ಷ ಕಿಲೋಗೆ ಹೆಚ್ಚಿದೆ ಎಂದು ಫೆಡರೇಶನ್ ವರದಿ ಮಾಡಿದೆ.

English summary
KMF Milk price in the state is set to undergo one more reverse this year, as Karnataka Milk Federation (KMF) is asking the state government permission to hike the price of milk by Rs 3 a litre. Earlier in Jan 2012 price of Nandini Milk, toned Milk hiked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X