ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರದಲ್ಲಿ ಹುಲಿ, ಸಕಲೇಶಪುರದಲ್ಲಿ ಜಾನುವಾರು ಸಾವು

By Mahesh
|
Google Oneindia Kannada News

ಮೈಸೂರು, ಜು.4: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿ ಸುಮಾರು 2 ವರ್ಷದ ಗಂಡು ಹುಲಿ ಸಾವಿಗೀಡಾಗಿದೆ. ಗುಂಡ್ರೆ ಪ್ರದೇಶದಲ್ಲಿ ಹುಲಿ ಸ್ವಾಭಾವಿಕ ಸಾವಿಗೀಡಾಗಿದೆ ಎಂದ್ ಉಹುಲಿ ಯೋಜನೆ ನಿರ್ದೇಶಕ ಬಿಜೆ ಹೊಸಮಠ ಅವರು ಹೇಳಿದ್ದಾರೆ.

ಜುಲೈ 2ರಂದು ಹುಲಿಯ ಮೃತದೇಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದೊಂದು ಸಹಜ ಸಾವಾಗಿದ್ದು ಮತ್ತೊಂದು ಹುಲಿಯ ಜತೆ ಕಾದಾಟದಲ್ಲಿ ಗಾಯ ಗೊಂಡು ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಹುಲಿ ಯೋಜನೆಯ ಎಪಿಸಿಸಿಎಫ್ ಬಿ.ಜೆ.ಹೊಸಮಠ್, ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯದ ನಿರ್ದೇಶಕ ಕುಮಾರ್ ಪುಷ್ಕರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
***
ವಿಷಾಹಾರಕ್ಕೆ ಜಾನುವಾರುಗಳು ಬಲಿ
ಸಕಲೇಶಪುರ, ಜು.4: ವಿಷಮಿಶ್ರಿತ ಹಲಸಿನ ಹಣ್ಣನ್ನು ತಿಂದು 11 ಜಾನುವಾರುಗಳು ಮೃತಪಟ್ಟಿರವ ದಾರುಣ ಘಟನೆ ಮಂಗಳವಾರ ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನೂ ಹಲವು ರಾಸುಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ಸಮೀಪದ ಕಪ್ಪಿನಕೋಡಿ ಎಸ್ಟೇಟ್ ಹಾಗೂ ದೇವರಾಜ್ ಎಂಬವರಿಗೆ ಸೇರಿದ ಕಾಫಿ ತೋಟದ ಸಮೀಪದ ಸರ್ಕಾರಿ ಗೋಮಾಳವಿದೆ. ಕೌಡಳ್ಳಿ ಗ್ರಾಮದ ದೀಪಕ್ ಎಂಬವರಿಗೆ ಸೇರಿದ 8 ಹಸುಗಳು ಹಾಗೂ ಕುಮಾರ್ ಎಂಬವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಗಿರಿಯಪ್ಪ ಎಂಬವರ ಒಂದು ಎತ್ತು ವಿಷಪ್ರಾಶನಕ್ಕೆ ಬಲಿಯಾಗಿವೆ. ಜಾನುವಾರುಗಳ ಶವಗಳು ಸರ್ಕಾರಿ ಗೋಮಾಳದ ಸಮೀಪ ಪತ್ತೆಯಾಗಿದೆ.

ಹಲಸಿನ ಹಣ್ಣಿಗೆ ವಿಷ ಮಿಶ್ರಣ ಮಾಡಿದವರು ಯಾರು ಎಂಬುದು ತಿಳಿದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಹಸುಗಳನ್ನು ಕಳೆದುಕೊಂಡ ರೈತರು ತೀವ್ರವಾಗಿ ದುಃಖಿತರಾಗಿದ್ದಾರೆ.

English summary
A male tiger cub has been found dead deep inside the Bandipur National Park in Gundre range. This is second death of a tiger in Bandipur in five weeks. On May 30, a male tiger was found dead in Moolehole range bordering Kerala. 11 Cattles found dead in koudalli near Sakaleshpur, Hassan. reports confirms Cattles dead due to food poision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X