ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12-12-12ಕ್ಕೆ ಜಗತ್ತು ಮಾಯವಾಗುವುದು ನಿಜ

By Srinath
|
Google Oneindia Kannada News

maya-indicates-dec-21-2012-end-date-of-world
ಬೆಂಗಳೂರು, ಜುಲೈ 3: ಇದೇ ವರ್ಷಾಂತ್ಯ ಜಗತ್ತು ಅಂತ್ಯ ಕಾಣಲಿದೆ ಎಂಬ ಭವಿಷ್ಯವಾಣಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಪುರಾತತ್ವ ಪರಿಣತರು 1,300 ವರ್ಷಗಳಷ್ಟು ಹಳೆಯದಾದ ಮಾಯಾ ಕ್ಯಾಲೆಂಡರ್ ಅನ್ನು ಪತ್ತೆಹಚ್ಚಿದ್ದು, 2012 ಡಿಸೆಂಬರ್ 12ಕ್ಕೆ ಇಡೀ ಜಗತ್ತೇ ಕಣ್ಮರೆಯಾಗಲಿದೆ ಎಂಬ ವಾದಕ್ಕೆ ಎರಡನೆಯ ಪುರಾವೆ ಒದಗಿಸಿದ್ದಾರೆ.

La Corona inGuatemala ಎಂಬ ಸ್ಥಳದಲ್ಲಿ ಭೂ ಸರ್ವೇಕ್ಷಣೆ ನಡೆಯುತ್ತಿದ್ದಾಗ ಈ ಮಹತ್ವದ ಅಂಶದ ಬಗ್ಗೆ ಬೆಳಕು ಚೆಲ್ಲುವಂತಹ ಮಾಹಿತಿ ಲಭ್ಯವಾಗಿದೆ. ಗ್ವಾಟೆಮಾಲಾದಲ್ಲಿರುವ National Palace ನಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

'ಈಗ ದೊರೆತಿರುವ ಮಹತ್ವದ ಮಾಹಿತಿತಯು ಇತರೆ ಭವಿಷ್ಯವಾಣಿಗಳಂತೆ ತನ್ನ ವಾದವನ್ನು ಮಂಡಿಸುವುದಿಲ್ಲ. ಇದೊಂದು ಪುರಾತನ ರಾಜನೀತಿಯ ಇತಿಹಾಸವಾಗಿದೆ' ಎಂದು ಟ್ಯುಲೇನ್ ನ ಮಧ್ಯ ಅಮೆರಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಮಾರ್ಕೆಲ್ಲೊ ಎ ಕ್ಯಾನುಟೊ ಹೇಳಿದ್ದಾರೆ.

ಅಂದಹಾಗೆ, 2008 ರಿಂದಲೂ ಈ ಉತ್ಖನನ ನಡೆಯುತ್ತಿತ್ತು. ಈ ಮಧ್ಯೆ, ಲೂಟಿಕೋರರು ಆಗಾಗ್ಗೆ ಈ ಸ್ಥಳಕ್ಕೆ ಬಂದು ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದರು. ಆದರೆ ಜಗತ್ತು ಅಂತ್ಯ ಕಾಣುವ ಮಾಹಿತಿ ಕುರಿತಾದ ನಿರ್ದಿಷ್ಟ ಕಲ್ಲುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರು. ಅದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದಾಗ ಈ ಮಾಹಿತಿ ಸಿಕ್ಕಿದೆ ಎಂದು ನಿರ್ದೇಶಕ ಮಾರ್ಕೆಲ್ಲೊ ಹೇಳಿದ್ದಾರೆ.

ಇದು ಗ್ವಾಟೆಮಾಲಾ ಸ್ಥಳದಲ್ಲಿ ದೊರೆತ ದೊಡ್ಡ ಮಾಹಿತಿಯಾಗಿದೆ. ಇದು ಮೆಟ್ಟಿಲುಗಳಿಗೆ ಬಳಸಲಾದ ಕಲ್ಲುಗಳ ಮೇಲೆ ಕಮಡುಬಂದಿದೆ. La Coronaದ 200 ವರ್ಷಗಳ ಇತಿಹಾಸವನ್ನು ಇದರಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2012 ಡಿಸೆಂಬರ್ 12ಕ್ಕೆ ಜಗತ್ತು ಅಂತ್ಯ ಎಂಬ ಮಾಹಿತಿಯು 56ನೆಯ ಮೆಟ್ಟಿಲಿನ ಮೇಲೆ ಉಲ್ಲೇಖವಾಗಿದೆ. ಕ್ರಿ.ಶ. 696 ರಲ್ಲಿ La Coronaಗೆ ಮಾಯಾ ರಾಜ್ಯದ ಬಲಿಷ್ಠ ರಾಜ Yuknoom Yich'aak K'ahk' of Calakmul ಭೇಟಿ ನೀಡಿದ ಸಂದರ್ಭದಲ್ಲಿ ಈ ಮಾಹಿತಿಯನ್ನು ಕೆತ್ತಲಾಗಿದೆ ಎಂಬುದು ಗಮನಾರ್ಹ.

English summary
Maya indicates December 21, 2012 'end date' of world. Archaeologists have discovered a 1,300-year-old Maya tet that provides only the second known reference to the so-called "end date" of the Maya calendar, December 21, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X