ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಅಶ್ಲೀಲತೆ: ಕೇರಳಕ್ಕೆ ಅಗ್ರತಾಂಬೂಲ

By Srinath
|
Google Oneindia Kannada News

obscene-postings-on-internet-kerala-leads-india
ನವದೆಹಲಿ, ಜುಲೈ 3: ಕೇರಳ ಹೆಚ್ಚು ವಿದ್ಯಾವಂತರನ್ನು ಹೊಂದಿರುವ ಸರಸ್ವತಿ ನಾಡು. ಜತೆಗೆ, ದೇವರ ನಾಡು ಎಂಬ ಹೆಗ್ಗಳಿಕೆಯೂ ಇದೆ. ಆದರೆ ಅದೇ ನಾಡು ವಾತ್ಸಾಯನನ್ನೂ ನಾಚಿಸುವಂತೆ ಇಂದಿನ ಇಂಟರ್ನೆಟ್ ತಂತ್ರಜ್ಞಾನನವನ್ನು ಬಿಗಿದಪ್ಪಿಕೊಂಡಿದೆ.

ಅಂದರೆ ಅಂತರ್ಜಾಲದಲ್ಲಿ ಅಶ್ಲೀಲ ಚಿ6ತ್ರಗಳನ್ನು ತುರುಕುವುದಾಗಲಿ ಅಥವಾ ಅಶ್ಲೀಲ ಸಾಹಿತ್ಯವನ್ನು ಪ್ರಚೋದಿಸುವುದಾಗಲಿ ಯಾವುದೇ ಎಗ್ಗಿಲ್ಲದೆ ಕೇರಳದಲ್ಲಿ ನಡೆಯುತ್ತಿದೆ. ಇದರಿಂದ ಇಂಟರ್ನೆಟ್ ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಶ್ಲೀಲತೆ ಸರಿದಾಡುತ್ತದೆ ಎಂಬ ಕುಖ್ಯಾತಿಯೂ ಕೇರಳಕ್ಕೆ ಈಗ ಅಂಟಿಕೊಂಡಿದೆ.

ಇಂಟರ್ನೆಟ್ ನಲ್ಲಿ ಅಶ್ಲೀಲತೆ ಪ್ರಕರಣಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಕಳೆದ ವರ್ಷ ಒಟ್ಟು 496 ಕೇಸುಗಳು ದಾಖಲಾಗಿದ್ದವು. ಅದರಲ್ಲಿ ಶೇ. 27ರಷ್ಟು ಅಂದರೆ 136 ಇಂಥವೇ ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಇದು ರಾಜ್ಯವೊಂದರ ಅಗ್ರ ಕ್ರಮವಾಗಿದೆ. ಇನ್ನು 245 ಸೈಬರ್ ಕ್ರೈಂಗಳ ಪೈಕಿ ಶೇ. 55ರಷ್ಟು ಕೇರಳದಲ್ಲಿಯೇ ದಾಖಲಾಗಿದ್ದವು.

National Crime Records Bureau (NCRB) ಇತ್ತಿಚೆಗೆ ಬಿಡುಗಡೆ ಮಾಡಿರುವ Crime in India 2011 ಅಧ್ಯಯನದ ಪ್ರಕಾರ ಆಂಧ್ರ ಪ್ರದೇಶ ನಂತರದ ಸ್ಥಾನದಲ್ಲಿದೆ. ರಾಜಸ್ಥಾನ, ಮಧ್ಯ ಪ್ರದೇಶ ಮುಂದಿನ ಸ್ಥಾನಗಳನ್ನು ಅಲಂಕರಿಸಿವೆ.

ಆಯ್ದ 53 ನಗರಗಳ ಪೈಕಿ ಕೇರಳದ ವಾಣಿಜ್ಯ ರಾಜಧಾನಿ ಕೊಚ್ಚಿ (ಒಟ್ಟು 12 ಪ್ರಕರಣಗಳು) ನಾಲ್ಕನೇ ಸ್ಥಾನದಲ್ಲಿದೆ. ಅದಕ್ಕಿಂತ ಮುಂದಿನ ಸ್ಥಾನದಲ್ಲಿ ನಮ್ಮ ರಾಜಧಾನಿ ಬೆಂಗಳೂರು (ಒಟ್ಟು 19 ಪ್ರಕರಣಗಳು) ಸೇರ್ಪಡೆಯಾಗಿದೆ.

ಯುವತಿಯರ ಚುಡಾಯಿಸುವುದು ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ 85 ಪ್ರಕರಣಗಳೂ ಕೇರಳದ ಸೈಬರ್ ಪ್ರಪಂಚದಲ್ಲಿ ದಾಖಲಾಗಿದೆ. ಇದರಲ್ಲಿ 13 ಪ್ರತೀಕಾರವಾಗಿ ಕೂಡಿದ್ದರೆ 32 ಹಣಕ್ಕಾಗಿ ದಾಖಲಾದ ಪ್ರಕರಣಗಳಾಗಿವೆ. ಒಟ್ಟಾರೆಯಾಗಿ ದೇಶದಲ್ಲಿ ಕಳೆದ ವರ್ಷ ಸೈಬರ್ ಕ್ರೈಂ ಪ್ರಮಾಣ ಶೇ. 67ರಷ್ಟು ವೃದ್ಧಿಯಾಗಿದೆ.

English summary
Obscene postings on Internet Kerala leads India: Kerala is the most literate state in the country but when it comes to posting obscene articles or photos on the Internet, people from God's own country seem to be also on top, if one goes by government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X