ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿ ಬಗ್ಗುಬಡಿದು, ಯುರೋ ಕಪ್ ಗೆದ್ದ ಸ್ಪೇನ್

By Mahesh
|
Google Oneindia Kannada News

ಕೀವ್‌, ಜು.1: ಯುರೋಪಿನಲ್ಲಿ ಫುಟ್ಬಾಲ್ ಹಬ್ಬ ರೋಚಕ ಅಂತ್ಯ ಕಂಡಿದೆ. ಅನೀರಿಕ್ಷಿತವಾಗಿ ಫೈನಲ್ ಮುಟ್ಟಿದ್ದ ಇಟಲಿ ತಂಡ ಹಾಲಿ ಚಾಂಪಿಯನ್ ಸ್ಪೇನ್ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಅಂತಿಮ ಹಣಾಹಣಿಯಲ್ಲಿ ಸ್ಪೇನ್ ತಂಡ 4-0 ಅಂತರದಿಂದ ಇಟಲಿಯನ್ನು ಭರ್ಜರಿಯಾಗಿ ಸೋಲಿಸಿದೆ.

ಯುರೋ 2012 ರ ಫೈನಲ್ ಪಂದ್ಯದಲ್ಲಿ ಡೆವಿಡ್ ಸಿಲ್ವಾ(14ನೇ ನಿಮಿಷ), ಜೋರ್ಡಿ ಆಲ್ಬಾ(41ನೇ ನಿಮಿಷ) ಫರ್ನಾಂಡೋ ಟೊರೆಸ್ (84ನೇ ನಿಮಿಷ) ಹಾಗೂ ಜುವಾನ್ ಮಾಠ(88ನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ಇಟಲಿ ತಂಡ ತಲೆ ಎತ್ತದಂತೆ ಮಾಡಿದರು.

ವಿನ್ಸೆಂಟ್ ಡೆಲ್ ಬೊಸ್ಕೋ ತಂಡ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಯುರೋ ಚಾಂಪಿಯನ್ ಶಿಪ್ ಪ್ರಶಸ್ತಿ ಉಳಿಸಿಕೊಂಡಿದೆ. ಸತತವಾಗಿ 3 ಜಾಗತಿಕ ಮಟ್ಟದ ಪ್ರಶಸ್ತಿ ಗಳಿಸಿದ ಮೊದಲ ತಂಡವಾಗಿ ಸ್ಪೇನ್ ಹೊರಹೊಮ್ಮಿದೆ. 2008ರ ಯುರೋ ಕಪ್, 2010ರ ವಿಶ್ವಕಪ್ ನಂತರ 2012ರ ಯುರೋ ಕಪ್ ಸ್ಪೇನ್ ಮುಡಿಗೆ ಬಿದ್ದಿದೆ.

1964 ಹಾಗೂ 2008 ರಲ್ಲಿ ಯುರೋ ಕಪ್ ಗೆದ್ದಿದ್ದ ಸ್ಪೇನ್ ಮತ್ತೊಮ್ಮೆ ಯುರೋ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ತಲೆ ಕೆಳಗಾದ ಪ್ರಾಂಡೆಲ್ಲಿ ತಂತ್ರ: ಬಲೊಟೆಲ್ಲಿ, ಕಸ್ಸಾನೊ ಮೇಲೆ ಅತಿಯಾದ ಆತ್ಮವಿಶ್ವಾಸವಿರಿಸಿದ್ದ ಇಟಲಿ ಕೋಚ್ ಪ್ರಾಂಡೆಲ್ಲಿ ತಂತ್ರಗಳೆಲ್ಲ ವಿಫಲವಾಯಿತು. ಜರ್ಮನಿ ವಿರುದ್ಧ ಭರ್ಜರಿ ಆಟವಾಡಿದ್ದ ಬಲೊಟೆಲ್ಲಿ ಸ್ಪೇನ್ ರಕ್ಷಣಾ ವ್ಯೂಹ ಒಳ ಕಾಲಿಡಲು ಆಗದೆ ಒದ್ದಾಡಿದರು.

ಅಲ್ಲದೆ, ದ್ವಿತೀಯಾರ್ಧದಲ್ಲಿ ಗಾಯಾಳು ಥಿಯೋಗೊ ಮೊಟ ಅವರನ್ನು ಕಣಕ್ಕಿಳಿಸಿದ ಪ್ರಾಂಡೆಲ್ಲಿಗೆ ಭಾರಿ ಹೊಡೆತ ಬಿತ್ತು. ಕೆಲ ನಿಮಿಷಗಳ ನಂತರ ಮೊಟ ಡಗ್ ಔಟ್ ಗೆ ಹಿಂತಿರುಗಿದ್ದರು. ಯಾವುದೇ ಬದಲಾವಣೆ ಮಾಡುವ ಅವಕಾಶ ಇಲ್ಲದೆ 10 ಜನರ ತಂಡವಾದ ಇಟಲಿ 90ನಿಮಿಷವಾದರೆ ಸಾಕು ಎಂಬಂತೆ ಆಡಿದರು.

ಬಲ್ಜಾರೆಟ್ಟಿ ಸೇರಿದಂತೆ ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ಇಟಲಿ ಪ್ರದರ್ಶನ ಮಂಕಾಯಿತು. ಮಿಡ್ ಫೀಲ್ಡ್ ಹೀರೋ ಪಿರ್ಲೋ ಪಾಸ್ ಗಳನ್ನು ಗೋಲ್ ಆಗಿಸುವ ಮುಂಪಡೆ ಆಟಗಾರರಿಲ್ಲದೆ ಇಟಲಿ ಒದ್ದಾಡಿತು.

ಸ್ಪೇನ್ 4 - 0 ಇಟಲಿ
9(5) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 6(5)
3 ಕಾರ್ನರ್ಸ್ 3
17 ಫೌಲ್ಸ್ 10
3 ಆಫ್ ಸೈಡ್ 3
1 ಹಳದಿ ಕಾರ್ಡ್ 1
0 ಕೆಂಪು ಕಾರ್ಡ್ 0

ಸ್ಪೇನ್ ನಿರೀಕ್ಷಿತ ಆಟ: ನಾಯಕ ಐಕರ್ ಕ್ಯಾಸಿಯಸ್ ಅವರ ಅದ್ಭುತ ಗೋಲ್ ಕೀಪಿಂಗ್ ಮೂಲಕ ಇಟಲಿ ತಂಡದ ಆರಂಭಿಕ ದಾಳಿ ತಡೆಯಲಾಯಿತು. ಕಸ್ಸಾನೋ, ಬಲೊಟೆಲ್ಲಿ ಪ್ರಥಮಾರ್ಧದಲ್ಲಿ ಕ್ಯಾಸಿಯಾಸ್ ಗೆ ಕಾಟ ಕೊಟ್ಟಿದ್ದರು. ಆದರೆ, ನಂತರ ಸ್ಪೇನ್ ತಂಡಕ್ಕೆ ಆಟವಾಯಿತು.ಮೊದಲ ಅರ್ಧದಲ್ಲಿ ಗೋಲು ಬಾರಿಸಿದ್ದು ಸ್ಪೇನ್ ನೆರವಿಗೆ ಬಂತು. ಬದಲಿ ಆಟಗಾರನಾಗಿ ಬಂದ ಟೊರೆಸ್ ಯರೋ 2008ರ ಫೈನಲ್ ಹಾಗೂ 2012ರ ಫೈನಲ್ ನಲ್ಲಿ ಗೋಲು ಬಾರಿಸಿದ ವಿಶಿಷ್ಟ ದಾಖಲೆ ಬರೆದರು. ಸ್ಪೇನ್ ಇತಿಹಾಸ ನಿರ್ಮಿಸಿತು.

English summary
Vicente del Bosque's team became the first side to successfully defend a European Championship title, as well as the first to win three consecutive major tournaments after their triumphs at Euro 2008 and the 2010 World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X