ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ 2012: ಇಟಲಿ ಪಿರ್ಲೋ vs ಸ್ಪೇನ್ ಮಿಡ್ ಫೀಲ್ಡರ್ಸ್

By Mahesh
|
Google Oneindia Kannada News

ಕೀವ್‌, ಜು.1: ಯುರೋಪಿನಲ್ಲಿ ಫುಟ್ಬಾಲ್ ಹಬ್ಬ ಅಂತಿಮ ಹಂತ ತಲುಪಿದೆ. ಅನೀರಿಕ್ಷಿತವಾಗಿ ಫೈನಲ್ ಮುಟ್ಟಿರುವ ಇಟಲಿ ವಿರುದ್ಧ ಹಾಲಿ ಚಾಂಪಿಯನ್ ಸ್ಪೇನ್ ತಂಡ ಇತಿಹಾಸ ನಿರ್ಮಿಸಲು ಹೊರಟಿದೆ.

ಪೋರ್ಚುಗಲ್‌ ತಂಡವನ್ನು 4-2 ಪೆನಾಲ್ಟಿ ಶೂಟೌಟ್ ನಲ್ಲಿ ಸೋಲಿಸಿ ಸ್ಪೇನ್ ತಂಡವನ್ನು ಜರ್ಮನಿಯನ್ನು ಗುರುವಾರ 2-1 ಗೋಲುಗಳಿಂದ ಸೋಲಿಸಿದ ಇಟಲಿ ಎದುರಿಸಲಿದೆ. ಇಟಲಿಯ ಅನುಭವಿ ಮಿಡ್ ಫೀಲ್ಡರ್ ಪಿರ್ಲೋ vs ಸ್ಪೇನ್ ನ ನಾಲ್ವರು ಮಿಡ್ ಫೀಲ್ಡರ್ ಗಳ ಆಟವೇ ಪಂದ್ಯದ ಫಲಿತಾಂಶ ನಿರ್ಣಯಿಸಲಿದೆ ಎಂದು ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

Euro 2012 final: Its Pirlo vs Spain's 'fantastic four'

1982, 2006ರಲ್ಲಿ ವಿಶ್ವ ವಿಜೇತ ತಂಡವಾಗಿದ್ದ ಇಟಲಿ ಮೇಲೆ ಈಗ ಮ್ಯಾಚ್‌ಫಿಕ್ಸಿಂಗ್‌ ಆರೋಪ ಹೊತ್ತಿದ್ದು, ಯುರೊ ಕಪ್ ಎತ್ತುವ ಮೂಲಕ ತಕ್ಕ ಉತ್ತರ ನೀಡಲು ಕೋಚ್‌ ಸೀಸರ್‌ ಪ್ರಾಂಡೆಲ್ಲಿ ನಿರ್ಧರಿಸಿದ್ದಾರೆ.

ಸ್ಪೇನ್ ಶಿಸ್ತುಬದ್ಧ ಆಟ: ಪ್ರತಿ ಪಂದ್ಯದಲ್ಲೂ 700-900 ಪರಿಪೂರ್ಣ ಪಾಸ್ ಗಳನ್ನು ನೀಡುವ ಸ್ಪೇನ್ ತಂಡ, ದಾಳಿ ಮುಖ್ಯ ರಣತಂತ್ರ 4-3-3-1 ದೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಕ್ಸಾವಿ, ಇನಿಯಾಸ್ಟಾ, ಸಿಲ್ವ, ಕ್ಸಾವಿ ಅಲಾನ್ಸೋ ಮಿಡ್ ಫೀಲ್ಡ್ ನಲ್ಲಿ ಉತ್ತಮ ಲಯದಲ್ಲಿದ್ದಾರೆ. ಮುಂಪಡೆಯಲ್ಲಿ ಫೆಬ್ರಿಗಾಸ್ ಹಾಗೂ ಟೊರೆಸ್ ಇಬ್ಬರನ್ನು ಕೋಚ್ ವಿನ್ಸೆಂಟ್ ಡೆಲ್ ಬಾಸ್ಕೊ ಇಳಿಸಿದರೆ ಅಚ್ಚರಿ ಏನಿಲ್ಲ.

ಪಿರ್ಲೋ ಮೇಲೆ ಕಣ್ಣು: ಇಟಲಿಯ ಸಾಧನೆಗೆ ಬಲೋಟೆಲ್ಲಿ ಹೇಗೆ ಮುಖ್ಯವೋ ಅದೇ ರೀತಿ 32 ವರ್ಷದ ಯುವೆಂಟಸ್ ಆಟಗಾರ ಅದ್ಭುತ ಫಾರ್ಮ್ ಲ್ಲಿದ್ದು, ಇಟಲಿ ಸಿರಿಯಾ ಎ ನಲ್ಲಿ 9 ವರ್ಷ ಕಪ್ ಎತ್ತಲು ಕಾರಣರಾಗಿದ್ದಾರೆ. ಮಿಡ್ ಫೀಲ್ಡ್ ನಲ್ಲಿ ಅದ್ಭುತ್ ಪಾಸ್,ಕ್ರಾಸ್ ಹೊಡೆತ ಹಾಗೂ ಫ್ರೀ ಕಿಕ್ ಹೊಡೆಯುವುದರಲ್ಲಿ ನಿಪುಣನಾದ ಪಿರ್ಲೋ ಮಿಂಚಿದರೆ ಬಲೊಟೆಲ್ಲಿ, ಕಸ್ಸಾನೋ ಮುಂಪಡೆಯಲ್ಲಿ ಗೋಲುಗಳ ಮಳೆಗೆರೆಯಬಹುದು.

ಬೊನುಚ್ಚಿ, ಮಾರ್ಚಿಸಿಯೊ,ಮಾಜ್ಜಿಯೋ ರಕ್ಷಣಾ ಪಡೆ ಹೆಚ್ಚಿನ ದಾಳಿ ಎದುರಿಸಬೇಕಾಗುತ್ತದೆ. ಇಟಲಿಯ ಅನುಭವಿ ಗೋಲ್ ಕೀಪರ್ ಗಿಗಿ ಬುಫನ್ ಆಟದ ಮೇಲೆ ಪಂದ್ಯ ನಿಂತಿದೆ.ಅದೇ ರೀತಿ ಸ್ಪೇನ್ ತಂಡಕ್ಕೂ ಗೋಲ್ ಕೀಪರ್ ಕಾಸಿಯಾಸ್ ಆಧಾರವಾಗಿದ್ದಾರೆ.

ಹೆಚ್ಚುವರಿ ಅವಧಿಯೊಳಗೆ ಪಂದ್ಯ ನಿರ್ಣಯವಾದರೆ ಇಟಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದರೆ, ಪೆನಾಲ್ಟಿ ಶೂಟೌಟ್ ಬಂದರೆ ಸ್ಪೇನ್ ಕಪ್ ಎತ್ತಲಿದೆ.ಸ್ಪೇನ್ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಉಮ್ಮಸ್ಸಿನಲ್ಲಿದೆ. ಆದರೆ, ಸ್ಪೇನ್ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಇಟಲಿ ರಕ್ಷಣಾ ವ್ಯೂಹ ಸಿದ್ಧವಾಗಿದೆ.

ಸ್ಪೇನ್ : ಕಾಸಿಯಾಸ್-ಅರ್ಬೆಲೊ, ರಮೊಸ್, ಪಿಕ್ಯೂ, ಅಲ್ಬಾ-ಕ್ಸಾಬಿ ಅಲಾನ್ಸೊ, ಬುಸ್ಕೆಟ್ಸ್, ಸಿಲ್ವಾ, ಕ್ಸಾವಿ, ಇನಿಯಾಸ್ಟಾ-ಟೊರೆಸ್

ಇಟಲಿ: ಬುಫನ್-ಅಬಾಟೆ, ಚೆಲ್ಲನಿ, ಬೊನುಚ್ಚಿ, ಬಲ್ಜರೆಟ್ಟಿ, ಮಾರ್ಚಿಸಿಯೊ, ಪಿರ್ಲೋ, ಮಾಜ್ಜಿಯೊ, ಮಾಂಟೊಲಿವೋ, ಬಲೋಟೆಲ್ಲಿ, ಕಸ್ಸಾನೊ

English summary
The Euro 2012 finals will be a battle between the defending champions Spain and former World Champions Italy. But the match can be compared between the teams most influential players, in this case, Andrea Pirlo of Italy against Spain's 'fantastic four' in Xavi Hernandez, Andres Iniesta, Xabi Alonso and David
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X