ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿ ಜತೆ ಹೋಟೆಲಿನಲ್ಲಿದ್ದ ಶಾಸಕಿಗೆ ಬಿತ್ತು ಧರ್ಮದೇಟು

By Srinath
|
Google Oneindia Kannada News

ಗುವಾಹಟಿ, ಜುಲೈ 1: ಪ್ರಿಯಕರನೊಂದಿಗೆ 2 ತಿಂಗಳ ಹಿಂದೆ ಓಡಿಹೋಗಿದ್ದ ಅಸ್ಸಾಂ ಶಾಸಕಿಯನ್ನು ಆಕೆ ತಂಗಿದ್ದ ಹೋಟೆಲಿನಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಜನ ಎಕ್ಕಾಮಕ್ಕಾ ಥಳಿಸಿದ್ದಾರೆ. ಆಕೆ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಸಮಾ ಬಾರಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ, ಅಲ್ಲೇ ನಿಂತಿದ್ದ ಪ್ರಿಯತಮನಿಗೂ ಮುಖಮೂತಿ ನೋಡದೆ ಬಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರೇಮಿಗಳನ್ನು (ಕೆಳಗಿನ ಚಿತ್ರದಲ್ಲಿ ನೋಡಿ) ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

assam-congress-mla-rumee-nath-beaten-up-by-mob
in}
ಪ್ರಕರಣದ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಸ್ಸಾಂನ ಕರಿಂಗಂಜ್ ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಅಂದಹಾಗೆ ಅಸ್ಸಾಂನ ಕಾಂಗ್ರೆಸ್ ಶಾಸಕಿ ರುಮಿ ನಾಥಳೇ ಈ ಕಥಾನಾಯಕಿ. ಮೇ 27 ಈಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂದು ದಟ್ಸ್ ಕನ್ನಡ ವರದಿ ಮಾಡಿತ್ತು. 'ತನ್ನ ಉತ್ತಮ ನಡತೆಯಿಂದ ಜನರಿಗೆ ಮಾದರಿಯಾಗಬೇಕಿದ್ದ ಜನಪ್ರತಿನಿಧಿಯೇ ಹೀಗೆ ಪ್ರೀತಿ-ಪ್ರೇಮ ಅಂತ ಪಡ್ಡೆಗಳಂತೆ ಓಡಿಹೋಗಿದ್ದು ಎಷ್ಟರಮಟ್ಟಿಗೆ ಸರಿ?' ಎಂದು ಜನ ಅಂದು ಮಾತನಾಡಿಕೊಂಡಿದ್ದರು. ಮತ್ತೆ ಈಗೇನು ಈಕೆಯ ರಗಳೆ ಅಂದಿರಾ...

32 ವರ್ಷದ ಶಾಸಕಿಗೆ ಬಿತ್ತು ಸಮ ಗೂಸಾ: ಮದುವೆಯಾಗಿ 2 ವರ್ಷದ ಮುದ್ದಾದ ಮಗಳನ್ನು ಹೊಂದಿದ್ದು, ತನ್ನ ಮೊದಲ ಪತಿಗೆ ವಿಚ್ಛೇದನ ನೀಡದೆ ಎರಡನೆಯ ಮದುವೆಯಾದ ಗುರುತರ ಆರೋಪ ಪ್ರೇಮಿ ರುಮಿ ನಾಥ್ ಮೇಲಿದೆ. ಹಾಗಾಗಿ, ಆಕೆಯ ಎರಡನೇ ಪತಿ ಜಾಕಿ ಜಕೀರ್ ಮೇಲೆಯೂ ಜನ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

'ಇಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದ ಶಾಸಕಿ ರುಮಿ ನಾಥ್ ಮತ್ತು ಅವರ ಎರಡನೇ ಪತಿ ಜಾಕಿ ಜಕೀರ್ ಅವರ ಮೇಲೆ 200ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಪೂಜಾರಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಹೋಟೆಲಿನ ಮುಂದೆ ಜಮಾಯಿಸಿದ ಜನರ ದೊಡ್ಡ ಗುಂಪೊಂದು ಮೊದಲು ಘೋಷಣೆಗಳನ್ನು ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಅವರು ತಂಗಿದ್ದ ಕೊಠಡಿಯತ್ತ ಕಲ್ಲುಗಳನ್ನು ತೂರಲಾರಂಭಿಸಿದರು. ಕೆಲವರು ಕೊಠಡಿಯೊಳಕ್ಕೂ ನುಗ್ಗಿ, ಜೋಡಿಯನ್ನು ಹುಡುಕಲಾರಂಭಿಸಿದರು. ಆದರೆ ಆ ವೇಳೆಗೆ ಶಾಸಕಿ ರುಮಿ, ಪ್ರಿಯಕರನ ಜತೆ ಬಾತ್ ರೂಮಿನೊಳಕ್ಕೆ ನುಸುಳಿ, ಬಾಗಿಲು ಹಾಕಿಕೊಂಡಿದ್ದರು.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಗುಂಪು ಬಾಗಿಲನ್ನು ಮುರಿದುಹಾಕಿ, ಅವರಿಬ್ಬರನ್ನೂ ಹೊರಗೆಳೆದು ಮನಬಂದಂತೆ ಥಳಿಸಿದರು. ಶಾಸಕಿ ರುಮಿಯನ್ನು ಕೈಯಲ್ಲಿ ಹಿಡಿದು ತಳ್ಳಾಡಿದರು. ಪ್ರೇಮಿ ರುಮಿ ಕೆಳಗೆ ಬಿದ್ದಾಗ ಜನ ಆಕೆಯನ್ನು ಕಾಲಿನಿಂದ ಒದ್ದರು. ಬಸವಳಿದ ಶಾಸಕಿ ರುಮಿ ಹಾಗೇ ನೆಲಕ್ಕೆ ಒರಗಿಕೊಂಡರು. ಇದೆಲ್ಲ ಸುಮಾರು ಅರ್ಧ ಗಂಟೆ ಕಾಲ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ರುಮಿ ಅವರ ಮೊದಲ ಪತಿ ರಾಕೇಶ್ ಸಿಂಗ್, ತಮ್ಮ ಪತ್ನಿ ಒಂದು ತಿಂಗಳಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೊರ್ಖೊಲಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರುಮಿ ನಾಥ್ ಚುನಾಯಿತರಾಗಿದ್ದಾರೆ. ಇದೇ ಕ್ಷೇತ್ರದಿಂದ 2006ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಗೆಲುವು ಸಾಧಿಸಿದ್ದರು. ಪ್ರೇಮಿ ರುಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಎರಡನೇ ಮದುಯಾಗಿದ್ದಾರೆ.

English summary
An Assam MLA, Rumee Nath (32), who is married and has a two-year-old daughter, hadeloped with Jacky Zakir, a government employee, 2 months back. But Yesterday a mob found her with her lover in a hotel and beat her up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X