ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಕಡಿತ : ಬೆಂಗಳೂರಿನಲ್ಲಿ ರು. 76.39

By Prasad
|
Google Oneindia Kannada News

Petrol price reduced
ಬೆಂಗಳೂರು, ಜೂ. 29 : ಪೆಟ್ರೋಲ್ ಬೆಲೆ ಏರಿಕೆಯಿಂದ ಬಸವಳಿದಿರುವ ಜನತೆಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ ರು.2.46ರಿಂದ ರು.3.22ರವರೆಗೆ ಕಡಿತಗೊಳಿಸಲಾಗಿದ್ದು, ಜೂ.28ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರು. 76.39 ಆಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಮತ್ತು ಡಾಲರ್‌ಗೆ ಪ್ರತಿಯಾಗಿ ಇರುವ ರುಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿಯೂ ಏರಿಳಿತ ಕಂಡುಬರುತ್ತದೆ.

ಕಳೆದ ಮೇ 23ರಂದು ಪೆಟ್ರೋಲ್ ಪ್ರತಿ ಲೀಟರಿಗೆ ರು.7.54 ಏರಿಕೆ ಕಂಡನಂತರ ಬೆಲೆ ಇಳಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಜೂನ್ 3ರಂದು ಪೆಟ್ರೋಲ್ ಬೆಲೆಯನ್ನು ರು.2ನಷ್ಟು ಇಳಿಸಲಾಗಿತ್ತು. ಕೆಲ ದಿನಗಳ ಹಿಂದೆ ರು.4ರಷ್ಟು ಇಳಿಸಲಾಗುವುದು ಎಂದು ಹೇಳಲಾಗಿತ್ತಾದರೂ ಕೇವಲ ರು.2.46 ಪೈಸೆಯಷ್ಟು ಇಳಿಸಲಾಗಿದೆ.

ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿತ್ತು ಎಂದು ಪೆಟ್ರೋಲ್ ಬೆಲೆಯನ್ನು, ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಆಧಾರದ ಮೇಲೆ ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸುವ, ಸರಕಾರಿ ಸಾಮ್ಯದ ತೈಲ ಕಂಪನಿಗಳು ಹೇಳಿವೆ.

ಇತರ ನಗರಗಳಲ್ಲಿ : ಪೆಟ್ರೋಲ್ ಬೆಲೆ ಇಳಿಸಿದ ನಂತರ ದೇಶದ ಇತರ ನಗರಗಳಲ್ಲಿ ಬೆಲೆ ಇಂತಿದೆ : ದೆಹಲಿ ರು.67.78, ಮುಂಬೈ ರು.73.99, ಕೋಲ್ಕತಾ ರು.73.35, ಚೆನ್ನೈ ರು. 72.27. ಬೆಂಗಳೂರಿನ ಹೊರವಲಯದಲ್ಲಿ ಪೆಟ್ರೋಲ್ ಇನ್ನೂ ಕಡಿಮೆ ಬೆಲೆಗೆ ಸಿಗಲಿದೆ. ರಾಜ್ಯದಲ್ಲಿ ವಿಧಿಸಲಾಗುತ್ತಿರುವ ಪ್ರವೇಶ ತೆರಿಗೆಯನ್ನು ಇಳಿಸಿದರೆ, ಕರ್ನಾಟಕದ ಜನತೆಗೆ ತುಸು ನೆಮ್ಮದಿ ಸಿಗಬಹುದು. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮನಸು ಮಾಡಬೇಕಷ್ಟೆ.

English summary
Petrol price has been slashed from Rs. 2.26 to Rs. 3.22 in India based on International crude oil price and value of Rupee against the Dollar. In Bangalore, the petrol price reduction is more as VAT and entry tax is also more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X