ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್ಚೆಂಡು : ಜರ್ಮನಿ ದಾಳಿ vs ಸಿಸಿಲಿಯನ್ ರಕ್ಷಣೆ

By Mahesh
|
Google Oneindia Kannada News

Euro 2012: Semi-Final Preview: Germany vs Italy
ವಾರ್ಸಾ , ಜೂ.28: ಯುರೋ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಮೂರು ಬಾರಿ ಚಾಂಪಿಯನ್ ಜರ್ಮನಿ ಮೊಟ್ಟಮೊದಲ ಬಾರಿಗೆ ಇಟಲಿಯನ್ನು ಮಣಿಸಲು ಪಣತೊಟ್ಟಿದೆ. ಜರ್ಮನಿಯ ದಾಳಿ ಹಾಗೂ ಇಟಲಿಯ ಖ್ಯಾತ ಸಿಸಿಲಿಯನ್ ಡಿಫೆನ್ಸ್ ನಡುವಿನ ಹೋರಾಟ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಕುತೂಹಲದ ವಿಷಯ ಎಂದರೆ, ಜರ್ಮನಿ ಇದುವರೆವಿಗೂ ಇಟಲಿಯನ್ನು ಮಣಿಸಲು ಸಾಧ್ಯವಾಗಿಲ್ಲ. ಗುರುವಾರ ಮಧ್ಯರಾತ್ರಿ ಯುರೋ ಕಪ್ ಸೆಮಿಫೈನಲ್‌ನಲ್ಲಿ ಇಟಲಿಯನ್ನು ಮಣಿಸಲು ಜರ್ಮನಿ ಮತ್ತೆ ಪ್ರಯತ್ನಿಸಲಿದೆ.

ಇಟಲಿಯ ವಿರುದ್ಧ ಈವರೆಗಿನ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಗೆಲ್ಲಲು ಜರ್ಮನಿ ವಿಫಲವಾಗಿದೆ. ಪ್ರದರ್ಶನ ಪಂದ್ಯಗಳಲ್ಲಿ ಹೊರತುಪಡಿಸಿದರೆ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಇಟಲಿ ತಂಡ ಈ ತನಕ ಜರ್ಮನಿಗೆ ತಲೆಬಾಗಿಲ್ಲ ತಾನು ಎದುರಿಸಿರುವ ಏಳು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಇಟಲಿ ತಂಡ ಜರ್ಮನಿ ವಿರುದ್ಧ 3ರಲ್ಲಿ ಜಯಿಸಿದೆ. 4ರಲ್ಲಿ ಡ್ರಾ ಸಾಧಿಸಿದೆ.

ಫಿಫಾ ವಿಶ್ವಕಪ್‌ನ 5 ಪಂದ್ಯಗಳಲ್ಲಿ 3 ಬಾರಿ ಇಟಲಿಗೆ ಜರ್ಮನಿ ಶರಣಾಗಿದೆ. 2 ಪಂದ್ಯ ಡ್ರಾ ಆಗಿದೆ. 23 ಪ್ರದರ್ಶನ ಪಂದ್ಯಗಳಲ್ಲಿ 7ರಲ್ಲಿ ಜರ್ಮನಿ ಗೆಲುವಿನ ನಗೆ ಬೀರಿದೆ. ಇಟಲಿ 11ರಲ್ಲಿ ಜಯಿಸಿದೆ. 5ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿದೆ.

ಆದರೆ, ಜರ್ಮನಿ ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿದೆ. ಯುರೋ ಕಪ್‌ನಲ್ಲಿ ಅತಿ ಹೆಚ್ಚು 9 ಗೋಲುಗಳನ್ನು ದಾಖಲಿಸಿದೆ. ಜರ್ಮನಿಯು ಇತ್ತೀಚೆಗೆ ಸತತ 15 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಹೀಗಾಗಿ ಇಟಲಿ ವಿರುದ್ಧ ಜರ್ಮನಿ ಜಯ ದಾಖಲಿಸುವ ಸಾಧ್ಯತೆ ಹೆಚ್ಚು ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

2012ರ ಯುರೋ ಕಪ್ ನಲ್ಲಿ ಹಾಟ್ ಫೇವರಿಟ್ ಎನಿಸಿಕೊಂಡಿರುವ ಜರ್ಮನಿ ಗ್ರೂಪ್ ಹಂತದಲ್ಲಿ ಅಜೇಯವಾಗಿ ಉಳಿದಿದೆ. ಮೊದಲ ಬಾರಿಗೆ ಯುರೋ ಕಪ್‌ನ ಸೆಮಿ ಫೈನಲ್‌ನಲ್ಲಿ ಸೆಣಸಾಡಲಿದೆ. ಯುರೋ ಕಪ್‌ನಲ್ಲಿ ಇಟಲಿಗೆ ಜರ್ಮನಿ ಮಣಿದಿಲ್ಲ.

ಪಂದ್ಯಶ್ರೇಷ್ಠರು: 2012ರ ಯುರೋ ಕಪ್‌ನಲ್ಲಿ ಪೋರ್ಚುಗಲ್ ಮತ್ತು ಗ್ರೀಸ್ ವಿರುದ್ಧದ ಪಂದ್ಯದಲ್ಲಿ ಮೆಸುಟ್ ಓಜಿಲ್, ಹಾಲೆಂಡ್ ವಿರುದ್ಧ ಮರಿಯೋ ಗೋಮೆಜ್ ಡೆನ್ಮಾರ್ಕ್ ವಿರುದ್ಧ ಲುಕಸ್ ಪೊಡೊಲ್ಸ್‌ಕಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಟಲಿ: ಕ್ಯಾಸ್ಸಾನೊ ಐರ್ಲೆಂಡ್ ವಿರುದ್ಧ, ಪಿರ್ಲೊ ಕ್ರೊವೇಷಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.ಆದರೆ, ಬಲೊಟೆಲ್ಲಿ ಮೇಲೆ ಪಂದ್ಯದ ಭವಿಷ್ಯ ನಿಂತಿದೆ.

ರಣತಂತ್ರ: ಜರ್ಮನಿ ತಂಡ ಗ್ರೀಸ್ ಮೇಲೆ ಆಡಿದ ‍XI ಉಳಿಸಿಕೊಳ್ಳಲಿದೆ. 1-5-4-1 ರಚನೆ ಮೂಲಕ ದಾಳಿ ಮಾಡಲಿದೆ. ಕ್ಲೋಸ್ ಅಥವಾ ಗೊಮೆಜ್ ಮುಂಪಡೆಯಲ್ಲಿದ್ದರೆ, ಓಜಿಲ್, ಖದಿರಾ, ಶ್ನೈಸ್ಟೈಗರ್,ಮುಲ್ಲರ್, ಪೊಡೊಲ್ ಸ್ಕಿ ಮಿಡ್ ಫೀಲ್ಡ್ ಕಾಯಲಿದ್ದಾರೆ. ರಕ್ಷಣಾ ಪಡೆಯಲ್ಲಿ ಲಾಮ್ ಆಟ ಮಹತ್ವದ್ದಾಗಿದೆ.

ಇಟಲಿ ತಂಡ ಡಿ ನಟಾಲಿ ಹಾಗೂ ಬಲೊಟೆಲ್ಲಿಯನ್ನು ಒಟ್ಟಿಗೆ ಕಣಕ್ಕಿಳಿಸಿ ಅಚ್ಚರಿ ಮೂಡಿಸುವ ಸಾಧ್ಯತೆಯೂ ಇದೆ. ಮಿಡ್ ಫೀಲ್ಡ್ ನಲ್ಲಿ ಪಿರ್ಲೊ, ಕಸ್ಸಾನೋ, ಡಿ ರೊಸ್ಸಿ ಆಟ ಮುಖ್ಯವಾಗಿದೆ. ಇಟಲಿ ಕೂಡಾ 1-4-1-4-1 ರಚನೆ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎರಡ ಕಡೆ ಗೋಲ್ ಕೀಪರ್ ಗಳ ಪಾತ್ರ ಹಿರಿದಾಗಿದ್ದು ನ್ಯೂಮರ್ ಹಾಗೂ ಬುಫನ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನಿರೀಕ್ಷಿಸಲಾಗಿದೆ.

ಜರ್ಮನಿ : ನ್ಯೂಮರ್, ಬೊಟಿಂಗ್, ಹಮ್ಮೆಲ್ಸ್, ಬ್ಯಾಸ್ಟುಬರ್, ಲಾಮ್, ಖದೀರಾ, ಶ್ವೈನ್ಸ್ ಟೈಗರ್, ಪೊಡೊಲಸ್ಕಿ, ಓಜಿಲ್, ಕ್ಲೋಸ್, ಮುಲ್ಲರ್
ಇಟಲಿ : ಬುಫನ್, ಅಬೆಟ್, ಬರ್ಜಗಿಲ್, ಬೊನೊಚ್ಚಿ, ಬಲಜರೆಟ್ಟಿ, ಮಾರ್ಚಿಸಿಯೊ, ಪಿರ್ಲೊ, ನಸೆರಿನೊ, ಮೊಟ್ಟ, ಬಲೊಟೆಲ್ಲಿ, ಕಸ್ಸಾನೋ

English summary
The National Stadium in Warsaw is set to host its last match of Euro 2012 as an in-form Germany side will battle against dark horses Italy in the semi-finals on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X