• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಕಾ ಕೋಲಾ 28000 ಕೋಟಿ ಹೂಡಿಕೆ ಏಕೆ?

By Mahesh
|

ನವದೆಹಲಿ, ಜೂ.27: ತಂಪು ಪಾನೀಯ ಕ್ಷೇತ್ರದ ದಿಗ್ಗಜ ಕೋಕಾ ಕೋಲಾ ಸಂಸ್ಥೆ ಭಾರತದಲ್ಲಿ 2020 ರೊಳಗೆ ಸುಮಾರು 5 ಬಿಲಿಯನ್ ಡಾಲರ್ (ಸುಮಾರು 28,000 ಕೋಟಿ ರು) ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಹೊಸ ಬಾಟ್ಲಿಂಗ್ ಘಟಕ ಸೋಡಾ ಘಟಕೆ ವಿಸ್ತರಣೆ ಕೋಕಾ ಕೋಲಾ ಸಂಸ್ಥೆ ಪಟ್ಟಿಯಲ್ಲಿದೆ.

ಆದರೆ, ಎಲ್ಲಾ ಬಿಟ್ಟು ಭಾರತಕ್ಕೆ ಅಷ್ಟೊಂದು ಹಣ ಹೂಡಿಕೆ ಮಾಡುತ್ತಿರುವುದಾದರೂ ಏಕೆ? ಡಾಲರ್ vs ರುಪಾಯಿ ಸಮರ ತಾರಕ್ಕೇರಿರುವ ಬೆನ್ನಲ್ಲೇ ಈ ನಿರ್ಣಯ ಏಕೆ? ಎಫ್ ಡಿಐ ಇನ್ನೂ ಚಾಲ್ತಿಗೊಳ್ಳುವ ಮೊದಲೇ ಈ ನಿರ್ಧಾರ ಎಷ್ಟರಮಟ್ಟಿಗೆ ಸರಿ? ಇದಕ್ಕೆ ಇಲ್ಲಿದೆ ಉತ್ತರ

2011ರಲ್ಲೇ 3 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಕೋಕಾ ಕೋಲಾ ಪ್ರಸ್ತಾಪಿಸಿತ್ತು. ಮಿನಿಟ್ ಮೈಡ್, ದಾಸನಿ ಹಾಗೂ ಪವರೆಡ್ ಮುಂತಾದ ಉತ್ಪನ್ನಗಳ ಮೂಲಕ ಅಟ್ಲಾಂಟಾ ಮೂಲದ ಕಂಪನಿ, ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಶೇ 20 ರಷ್ಟು ಪ್ರಗತಿ ಕಂಡಿದ್ದರೆ, ಉತ್ತರ ಅಮೆರಿಕದಲ್ಲಿ ಶೇ 2 ರಷ್ಟು ಮಾತ್ರ ಗಳಿಸಿತ್ತು.

ಈಗಲೂ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ.

2020ರೊಳಗೆ ಕೋಕಾ ಕೋಲಾ 5 ಬಿಲಿಯನ್ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದೆ. ಜಾಗತಿಕವಾಗಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಂಸ್ಥೆ ನಿರ್ಧರಿಸಿದ್ದು ಇದರ ಒಂದು ಭಾಗ ಭಾರತದಲ್ಲೂ ಹೂಡಿಕೆಯಾಗಲಿದೆ. ಟಾಪ್ 5 ದೇಶಗಳ ಸಾಲಿಗೆ ಭಾರತವೂ ಸೇರಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ ಎಂದು ಕೋಕಾ ಕೋಲಾ ಚೆರ್ಮನ್ ಹಾಗೂ ಸಿಇಒ ಮಹ್ತರ್ ಕೆಂಟ್ ಹೇಳಿದ್ದಾರೆ.

ಭಾರತವೇ ಏಕೆ? : ಈಗಲೂ ಜಾಗತಿಕವಾಗಿ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಕೋಕಾ ಕೋಲಾಗೆ ಕಠಿಣ ಪೈಪೋಟಿ ಎದುರಿಸುತ್ತಿದೆ.

ಭಾರತದಲ್ಲಿ ಕೋಕಾ ಕೋಲಾ ಶೇ 56 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಶೇ 40 ರಷ್ಟು ಪಾಲು ಪೆಪ್ಸಿಕೋ ಬಳಿ ಇದೆ.

1993ರಲ್ಲಿ ಥಮ್ಸ್ ಅಪ್, ಸ್ಥಳೀಯ ಸೋಡಾ ಬ್ರಾಂಡ್ ಗಳನ್ನು ಖರೀದಿಸಿದ ಕೋಕಾ ಕೋಲಾ ಮತ್ತೆ ಹಿಂತಿರುಗಿ ನೋಡಿಲ್ಲ, ಸ್ಪ್ರೈಟ್ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಆಗಿದೆ. ಶೇ 16.5ರಷ್ಟು ಪಾಲು ಹೊಂದಿದೆ. ಮಾಜಾ ಜ್ಯೂಸ್ ಕೆಟಗೆರಿಯಲ್ಲಿ ಮುಂಚೂಣಿಯಲ್ಲಿದೆ.

ಸೋಡಾ ಮಾರುಕಟ್ಟೆಯಲ್ಲಿ ಪೆಪ್ಸಿಕೋ ಶೇ 15ರಷ್ಟು ಪಾಲು ಹೊಂದಿದ್ದರೆ ಕೋಕ್ ಶೇ 8.8 ರಷ್ಟು ಮಾತ್ರ ಹೊಂದಿದ್ದು ಹಿಂದೆ ಬಿದ್ದಿದೆ.

ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಆರ್ಥಿಕ ಏರಿಳಿತಕ್ಕೂ ಉತ್ತರ ನೀಡಲಾಗುವುದು. ಲಾಭ ವನ್ನು ದ್ವಿಗುಣಗೊಳಿಸಲಾಗುವುದು. ಸಚಿನ್ ತೆಂಡೂಲ್ಕರ್ ಅವರಂಥ ಬ್ರಾಂಡ್ ಅಂಬಾಸಿಡರ್ ಮೂಲಕ ಇನ್ನಷ್ಟು ಪ್ರಗತಿ ಕಾಣಲು ಕೋಕಾ ಕೋಲಾ ಯೋಜಿಸಿದೆ ಎಂದು ಸಂಸ್ಥೆಯ ಭಾರತದ ಪ್ರತಿನಿಧಿಗಳು ಹೇಳಿದ್ದಾರೆ. ಸಂಸ್ಥೆ 30 ಬಿಲಿಯನ್ ಡಾಲರ್ ಹೂಡಿಕೆ ಸುದ್ದಿ ಹಬ್ಬಿದ ತಕ್ಷಣ ಮಂಗಳವಾರ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಶೇ 31 ರಷ್ಟು ಷೇರುಗಳು ಏರಿಕೆ ಕಂಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Beverages giant Coca-Cola today said it, along with its partners, will invest $5 billion (about Rs 28,000 crore) in India by 2020 on various activities, including setting up of new bottling plants. Coca Cola will invest $5 billion in India between now and 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more