• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಚ್ಚಿನ ಮಡದಿಯನ್ನು ಮಚ್ಚಿನಿಂದ ಕೊಚ್ಚಿದ ಕುಡುಕ

By Mahesh
|

ಮೂಡಿಗೆರೆ, ಜೂ.26: ಕೌಟುಂಬಿಕ ಕಲಹಕ್ಕೆ, ಪತಿಯ ಕ್ರೌರ್ಯಕ್ಕೆ ಮಹಿಳೆಯೊಬ್ಬಳು ಮಂಗಳವಾರ(ಜೂ.26) ಅಸುನೀಗಿದ್ದಾಳೆ, ಕುಡುಕ ಪತಿ ತನ್ನ ನೆಚ್ಚಿನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾದ ಘಟನೆ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜೂ.26ರಂದು ವಿಶ್ವ ಮದ್ಯಪಾನ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸುತ್ತಿದ್ದ ಸದಸ್ಯರು ತಾಲೂಕಿನಲ್ಲಿ ಕುಡಕನೊಬ್ಬನಿಂದ ಕೊಲೆಯಾದ ಸುದ್ದಿ ತಿಳಿದು ಬೆಚ್ಚಿದ್ದಾರೆ.

30 ವರ್ಷದ ಗೃಹಿಣಿ ಸುಧಾ ಹತ್ಯೆಗೀಡಾದ ದುರ್ದೈವಿ. ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಮನೆ ಗ್ರಾಮದ ನಿವಾಸಿ ಚಂದ್ರು ತುಂಬಾ ಇಷ್ಟಪಟ್ಟು ಸುಧಾಳನ್ನು ಮದುವೆಯಾಗಿದ್ದ. 10 ವರ್ಷದಲ್ಲಿ ಪ್ರೀತಿಯ ಪ್ರತೀಕವಾಗಿ ಮೂರು ಜನ ಮುದ್ದಾದ ಮಕ್ಕಳನ್ನು ಪಡೆದಿದ್ದರು.

ಆರಂಭದಲ್ಲಿ ಸುಧಾ ಹಾಗೂ ಚಂದ್ರು ಪ್ರೀತಿ ಕಂಡು ಕಲ್ಮನೆ ಗ್ರಾಮವೇ ಬೆರಗಾಗಿತ್ತು. ಕೂಲಿ ಕೆಲಸಗಾರರಾದರು ತುಂಬಾ ಅನ್ಯೋನ್ಯವಾಗಿದ್ದರು. ಆದರೆ, ಸಹವಾಸ ದೋಷದಿಂದ ಕುಡಿತದ ಚಟ ಹಚ್ಚಿಸಿಕೊಂಡ ಚಂದ್ರು ಸಂಪೂರ್ಣ ಬದಲಾಗಿಬಿಟ್ಟ. ಪ್ರತಿದಿನ ಪತ್ನಿಯೊಂದಿಗೆ ಜಗಳವಾಡತೊಡಗಿದ. ಮದ್ಯವ್ಯಸನಿ ಪತಿಯನ್ನು ಸಂಭಾಳಿಸುವುದು ಸುಧಾಳಿಗೆ ಕಷ್ಟವಾಗತೊಡಗಿತು.

ಸೋಮವಾರ ರಾತ್ರಿ ಮದ್ಯ ಸೇವಿಸಿ ಬಂದ ಚಂದ್ರು ಎಂದಿನಂತೆ ಪತ್ನಿ ಜೊತೆ ಜಗಳ ತೆಗೆದ. ಆದರೆ, ರಾತ್ರಿ ಗಲಾಟೆ ನಂತರ ತೆಪ್ಪಗೆ ಮಲಗಿದ್ದ ಗಂಡ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ರೇಗಾಡಿದ್ದನ್ನು ಕಂಡು ಸುಧಾಳ ತಿರುಗಿಬಿದ್ದಳು. ಮಂಗಳವಾರ ಬೆಳಗ್ಗೆ ಮಚ್ಚು ಎತ್ತಿದ ಚಂದ್ರು ಅನಾಯಸವಾಗಿ ತರಕಾರಿ ಕೊಚ್ಚಿದಂತೆ ಸುಧಾಳ ಕುತ್ತಿಗೆ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಪತ್ನಿ ಬಿದ್ದಿದ್ದನ್ನು ಕಂಡ ಮೇಲೆ ಅವನಿಗೆ ತನ್ನ ತಪ್ಪಿನ ಅರಿವಾಗಿದೆ. ಕೂಡಲೇ ಮಚ್ಚಿನೊಂದಿಗೆ ಪರಾರಿಯಾಗಿದ್ದಾನೆ.

ಬೆಳಗ್ಗೆ ಮನೆ ಮುಂದೆ ಗದ್ದಲ ಕಂಡು ಎಚ್ಚರಗೊಂಡ ಮೂವರು ಮಕ್ಕಳು, ಸತ್ತು ಬಿದ್ದಿದ್ದ ತಾಯಿಯನ್ನು ಕಂಡು ಬೆಚ್ಚಿದ್ದಾರೆ. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ನೂರಾರು ಜನ ಸ್ಥಳಕ್ಕೆ ಆಗಮಿಸಿ ನಾನಾ ರೀತಿ ಮಾತನಾಡತೊಡಗಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರ ಗುಂಪನ್ನು ಚದುರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಳೂರು ಠಾಣೆ ಪೊಲೀಸರು, ಪರಾರಿಯಾದ ಆರೋಪಿ ಚಂದ್ರುವಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಪರಾರಿಯಾದ ಅಪ್ಪ, ಸತ್ತು ಬಿದ್ದ ಅಮ್ಮನನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿ ಮನೆಯಲ್ಲೇ ಉಳಿದಿದ್ದಾರೆ.

ವಿಶ್ವ ಮದ್ಯಪಾನ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ ದಿನದಂದೇ ಮದ್ಯವ್ಯಸನಿಯಿಂದ ಕೊಲೆಯಾಗಿರುವುದು ದುಃಖದ ಸಂಗತಿ. ಮದ್ಯ ವಿರೋಧಿ ಅಭಿಯಾನವನ್ನು ಇನ್ನಷ್ಟು ಬಲವಾಗಿ ತಾಲೂಕಿನಲ್ಲಿ ನಡೆಸಲಾಗುವುದು ಎಂದು ಮದ್ಯ ವ್ಯಸನಿ ಪುನರ್ವಸತಿ ಕೇಂದ್ರದ ಸ್ಥಾಪಕ ಮಗ್ಗಲಮಕ್ಕಿ ಗಣೇಶ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A drunken man kills wife for not responding to him in time. 30 year old Sudha killed on the World Anti Drug and Narcoits Day(Jun.26) in Kalmane vilage in the Baluru police station limits Mudigere Chikmagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more