ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ: ಇಂಗ್ಲೆಂಡ್ ಸಿಂಹಗಳ ಬಾಲ ಕತ್ತರಿಸಿದ ಇಟಲಿ

By Mahesh
|
Google Oneindia Kannada News

Italy beat England on penalties
ಕೀವ್, ಜೂ. 25: ಯುರೋ 2012ನ ಕೊನೆಯ ಕ್ವಾಟರ್ ಫೈನಲ್ ಅತ್ಯಂತ ರೋಚಕವಾಗಿ ಅಂತ್ಯ ಕಂಡಿದೆ. ಇಂಗ್ಲೆಂಡ್ ಸಿಂಹಗಳನ್ನು ಪಂದ್ಯದುದ್ದಕ್ಕೂ ಕಟ್ಟಿ ಹಾಕಿದ ಅಜ್ಜುರಿಗಳು ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದ ಇಟಲಿ ತಂಡ ಸೆಮಿಫೈನಲ್ ತಲುಪಿದೆ.

ಪಂದ್ಯದ (90 + 30 ಹೆಚ್ಚುವರಿ ನಿಮಿಷ) 120 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಿಸಲು ಉಭಯ ತಂಡಗಳು ವಿಫಲರಾದರೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಪೆನಾಲ್ಡಿ ಶೂಟೌಟ್ ನಲ್ಲಿ ಇಂಗ್ಲೆಂಡನ್ನು 4-2ರಿಂದ ಪರಾಭವಗೊಳಿಸಿದ ಇಟಲಿ ಯುರೋ ಕಪ್ 2012ರ ಸೆಮಿಫೈನಲಿಗೆ ಪ್ರವೇಶಿಸಿದೆ. ಸೆಮಿಫೈನಲ್ಸ್ ನಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಎದುರಿಸಲಿದೆ.

ಮೊದಲಿಗೆ ಇಟಲಿಯ ಮರಿಯೊ ಬಲೊಟೆಲ್ಲಿ, ಪಿರ್ಲೋ, ನೊಸೆರಿನೋ ಗೋಲು ಗಳಿಸಿದ್ದರು. ಇಂಗ್ಲೆಂಡ್ ಪರ ರೂನಿ, ಜೆರಾಲ್ಡ್ ಗೋಲು ದಾಖಲಿಸಿ 2-1 ಮುನ್ನಡೆ ತಂದುಕೊಟ್ಟಿದ್ದರು. ಆದರೆ, ಇಟಲಿಯ ಅನುಭವಿ ಗೋಲ್ ಕೀಪರ್ ನಾಯಕ ಬುಫನ್ ಅವರು ಒಂದು ಸೇವ್ ಮಾಡಿ ಪಂದ್ಯವನ್ನು ಇಟಲಿಯತ್ತ ತಿರುಗಿಸಿಬಿಟ್ಟರು.

ಇಂಗ್ಲೆಂಡ್ ಪರವಾಗಿ ಅಸ್ಲೆ ಯಂಗ್ ಮತ್ತು ಅಸ್ಲೆ ಕೊಲ್ ಗೋಲು ಬಾರಿಸಲು ವಿಫಲರಾದ ಬಳಿಕ ಅಲೆಸಾಂಡ್ರೊ ಡಿಮಂಟಿ ಬಾರಿಸಿದ ಗೋಲಿನಿಂದ ಇಟಲಿ ತಂಡ ಗೆಲುವಿನ ನಗೆ ಬೀರಿದೆ.

ಇಟಲಿಗೆ ಗೋಲು ಬಾರಿಸುವ ಹೆಚ್ಚಿನ ಅವಕಾಶವಿತ್ತು. ಡೇನಿಯಲ್ ಡೆ ರೊಸಿ ಇಟಲಿ ಪರ ಗೋಲು ಬಾರಿಸಲು ಅವಕಾಶವನ್ನು ಪಡೆದಿದ್ದರು. ಆದರೆ ಇದರಲ್ಲಿ ಯಶಸ್ವಿಯಾಗಲಿಲ್ಲ. ಇದರ ಬಳಿಕ ಅಂಟೋನಿಯೊ ನೊರ್ಕೆನೊ ಬಾರಿಸಿದ ಗೋಲು ಆಫ್ ಸೈಡ್ ನಿಂದಾಗಿ ಇಟಲಿ ಪಾಲಿಗೆ ದಕ್ಕಲಿಲ್ಲ. ಇಂಗ್ಲೆಂಡ್ ಆಟಗಾರರು ಇಟಲಿಯ ರಕ್ಷಣಾ ವಲಯದ ಮೇಲೆ ದಾಳಿ ಮಾಡಿದರು. ಆದರೆ ಇಟಲಿ ಗೋಲು ಕೀಪರ್ ಗಿಗಿ ಬಫೋನ್ ಕೆಲವು ಗೋಲುಗಳನ್ನು ಉಳಿಸಿ ಇಂಗ್ಲೆಂಡಿಗೆ ಹಿನ್ನಡೆಯುಂಟು ಮಾಡಿದರು.

ನಿಗದಿತ ಅವಧಿ ಬಳಿಕ ಗಾಯಾಳು ಸಮಯ ಮತ್ತು ಹೆಚ್ಚುವರಿ ಸಮಯದಲ್ಲಿ ಕೂಡ ಎರಡು ತಂಡಗಳಿಗೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ನಿರ್ಧರಿಸಬೇಕಾಯಿತು. ಆದರೆ ಇಂಗ್ಲೆಂಡಿಗೆ ಕೇವಲ ಎರಡು ಗೋಲು ಬಾರಿಸಲು ಮಾತ್ರ ಯಶಸ್ವಿಯಾಯಿತು.

ಕೈಕಟ್ಟ ಇಂಗ್ಲೆಂಡ್ ರಣತಂತ್ರ: ಆರಂಭದಿಂದಲೇ ಚೆಂಡಿನ ಮೇಲಿನ ಹಿಡಿತ ಪಡೆಯುವಲ್ಲಿ ಇಂಗ್ಲೆಂಡ್ ತಂಡ ವಿಫಲವಾಯಿತು. ವೆಲ್ ಬ್ಯಾಕ್ ಹಾಗೂ ರೂನಿ ಇಬ್ಬರು ಮ್ಯಾಚೆಂಸ್ಟರ್ ಯುನೈಟೆಡ್ ಆಟಗಾರರು ಯಾವುದೇ ಜೊತೆಯಾಟ ತೋರಲಿಲ್ಲ. ಹಿಂದಿನ ದಿನ ಸ್ಪೇನ್ ತಂಡ 900ಕ್ಕೂ ಅಧಿಕ ಪಾಸ್ ಗಳನ್ನು ನೀಡಿ ಹೊಂದಾಣಿಕೆ ಆಟದ ಮೂಲಕ ದಾಖಲೆ ಮೆರೆದಿದ್ದ ಕ್ಲಿಪ್ಪಿಂಗ್ಸ್ ನೋಡಿದ್ದರೆ ಇಂಗ್ಲೆಂಡ್ ಗೆ ಈ ದುರ್ಗತಿ ಬರುತ್ತಿರಲಿಲ್ಲ.

ಜೆರಾಲ್ಡ್ ಮಿಡ್ ಫೀಲ್ಡ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಗೋಲು ಗಳಿಸಲು ವಿಫಲವಾಗಿರುವ ಪಾರ್ಕರ್ ಮುಳುವಾದರು. ಕೋಲ್, ಟೆರಿ ರಕ್ಷಣಾ ಪಡೆಯಲ್ಲಿ ಉತ್ತಮ ಪ್ರದರ್ಶನ ತೋರದೆ ಹೋಗಿದ್ದರೆ ಇಟಲಿ ಭಾರಿ ಅಂತರದಿಂದ ಜಯ ದಾಖಲಿಸಿಬಿಡುತ್ತಿತ್ತು.

ಅಂತಿಮವಾಗಿ ಪೆನಾಲ್ಟಿ ಶೂಟೌಟ್ ವಿಷಯಕ್ಕೆ ಬಂದರೆ, ರೂನಿ, ಜೆರಾಲ್ಡ್ ಉತ್ತಮ, ಯಂಗ್ ಉತ್ತಮ ಆಯ್ಕೆ. ಆದರೆ,ಆತ್ಮವಿಶ್ವಾಸವಿರದ ಕೋಲ್ ಬದಲಿಗೆ ಉತ್ತಮ ಲಯದಲ್ಲಿದ್ದ ಯುವ ಆಟಗಾರ ಕರೊಲ್ ಗೆ ಅವಕಾಶ ನೀಡಬಹುದಿತ್ತು. ವೆಲ್ ಬಾಕ್ ಕೂಡಾ ಉತ್ತಮ ಫಾರ್ಮ್ ನಲ್ಲಿದ್ದರು. ಆದರೆ, ಇಂಗ್ಲೆಂಡ್ ಪೆನಾಲ್ಟಿ ಶೂಟೌಟ್ ನಲ್ಲಿ ತಪ್ಪು ಎಸೆಗುವುದನ್ನು ಮುಂದುವರೆಸಿ ಪಂದ್ಯ ಸೋತಿದೆ.

English summary
Italy beat England 4-2 on penalties after their Euro 2012 quarter-final in Kiev failed to produce a goal after 120 minutes. The Italians won through to a semi-final against Germany in Warsaw on Thursday(Jun.28)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X