ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳವೆ ಬಾವಿಯಿಂದ ಹೊರ ಬಿದ್ದ ಮಗು ಮಾಹಿ ಇನ್ನಿಲ್ಲ

By Mahesh
|
Google Oneindia Kannada News

Trapped Baby Mahi pulled out of borewell after 84 hours
ಬೆಂಗಳೂರು, ಜೂ.24: ಸತತವಾಗಿ 86ಕ್ಕೂ ಅಧಿಕ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಕೊನೆಗೂ ಭಾನುವಾರ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿತು. ಆದರೆ, ಮಗು ಬದುಕುಳಿಯಲಿಲ್ಲ.

ಅಂತೂ ಕೊಳವೆ ಬಾವಿಯೊಳಗೆ ಸಿಲುಕಿದ್ದ ಬಾಲಕಿ ಮಾಹಿಯನ್ನು ಹೊರಕ್ಕೆ ತೆಗೆಯಲಾಗಿತ್ತು. ಮಾಹಿ ದೇಹ ಸ್ಥಿತಿಯ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಸಮೀಪದ ಆರ್ಮಿ ಆಸ್ಪತ್ರೆಗೆ ಮಾಹಿಯನ್ನು ಸೇರಿಸಲಾಗಿತ್ತು. ಆದರೆ, ಮಾಹಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಸುಮಾರು 70 ಅಡಿ ಆಳದ ಕೊಳವೆ ಬಾವಿಯೊಳಗೆ ಅಕಸ್ಮಾತಾಗಿ ಬಿದ್ದಿದ್ದ ಮಾಹಿ ಉಪಾಧ್ಯಾಯ್ ಳನ್ನು ರಕ್ಷಿಸಲು ಬುಧವಾರದಿಂದ ಕಾರ್ಯಾಚರಣೆ ನಡೆದಿತ್ತು. ಭೂ ಸೇನೆ ದಳ, ಅಗ್ನಿಶಾಮಕದಳ ಸತತ ಪ್ರಯತ್ನದ ನಂತರ ಮಗುವನ್ನು ರಕ್ಷಿಸಿದ್ದಾರೆ. ESI ಆರ್ಮಿ ಆಸ್ಪತ್ರೆಯಲ್ಲಿ ಮಾಹಿಗೆ ಚಿಕಿತ್ಸೆ ನೀಡದ್ದು ಪ್ರಯೋಜನಕ್ಕೆ ಬಾರಲಿಲ್ಲ.

ಸುಮಾರು 86 ಗಂಟೆಗಳ ಕಾಲ 70 ಅಡಿ ಆಳದ ಕೊಳವೆ ಬಾವಿಯೊಳಗಿದ್ದ ನಾಲ್ಕು ವರ್ಷದ ಬಾಲಕಿ ಮಾಹಿಯನ್ನು ಭಾನುವಾರ ಮಧ್ಯಾಹ್ನದ ವೇಳೆಗೆ ರಕ್ಷಣಾ ತಂಡ ಮೇಲಕ್ಕೆತ್ತಿದ್ದಾಗ ಇದ್ದ ಸಂಭ್ರಮ ಮಾಯವಾಗಿ ಈಗ ಎಲ್ಲೆಡೆ ಸೂತಕದ ಛಾಯೆ ಆವರಿಸಿದ್ದಾರೆ.

ಸುಮಾರು ಮುರ್ನಾಲ್ಕು ದಿನಗಳಿಂದ ರಕ್ಷಣಾ ತಂಡ ಸತತ ಪ್ರಯತ್ನ ಪಟ್ಟಿದ್ದು ಕೊನೆಗೂ ಫಲ ನೀಡಲಿಲ್ಲ. ಮಾಹಿ ನಡುವೆ ಅಡ್ಡವಾಗಿದ್ದ ಕಲ್ಲೊಂದನ್ನು ಕೊರೆಯಲು ರಕ್ಷಣಾ ತಂಡಕ್ಕೆ ಎರಡು ದಿನ ಬೇಕಾಯಿತು. ಹೀಗಾಗಿ ಮಾಹಿಯನ್ನು ರಕ್ಷಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.

ಜೂನ್ 20ರಂದು ಮಾಹಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಅಕಸ್ಮಾತ್ ಆಗಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಅಗ್ನಿಶಾಮಕದಳ ರಕ್ಷಣಾ ಕಾರ್ಯ ಆರಂಭಿಸಿದ್ದರು. ನಂತರ ಭೂ ಸೇನೆ ಕಮ್ಯಾಂಡೋಗಳು ಬಾಲಕಿಯನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಬಾಲಕಿಗೆ ಪೈಪ್ ಮೂಲಕ ಆಮ್ಲಜನಕವನ್ನು ಒದಗಿಸಲಾಗಿತ್ತು. ಆದರೆ ಮೊದಲ ಎರಡು ದಿನ ಸ್ವಲ್ಪ ಮಾತನಾಡುತ್ತಿದ್ದ ಬಾಲಕಿ ಕಡೆಯಿಂದ ಬಳಿಕ ಯಾವುದೇ ಮಾಹಿತಿ ಬರುತ್ತಿರಲಿಲ್ಲ. ಸಿಸಿಟಿವಿಯಲ್ಲೂ ಬಾಲಕಿಯ ಚಲನವಲನದ ಬಗ್ಗೆ ಮಾಹಿತಿ ದಾಖಲಾಗಿರಲಿಲ್ಲ.

ರಕ್ಷಣಾ ಕಾರ್ಯದಲ್ಲಿ ಸೇನೆ, ಅಗ್ನಿಶಾಮಕ ದಳ, ಪೊಲೀಸ್, ಗುರ್ಗಾಂವ್ ಅರೆ ಮಿಲಿಟರಿ ಪಡೆ, ಆರೋಗ್ಯ ಮತ್ತು ಕಂದಾಯ ಇಲಾಖೆ ಹಾಗೂ ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಗಳ ಆರೋಗ್ಯ ಸ್ಥಿತಿ ಬಗ್ಗೆ ತನಗೆ ಯಾವುದೇ ಮಾಹಿತಿ ಸಿಗದೆ ಮಾಹಿಯ ತಾಯಿ ಸೋನಿಯಾ ದುಃಖತಪ್ತರಾಗಿದ್ದರು. ಆದರೆ, ಈಗ ಮಗುವನ್ನು ರಕ್ಷಿಸಿದ ಸುದ್ದಿ ಕೇಳಿದ ಕೆಲ ಸಮಯದ ನಂತರ ಸಾವಿನ ಸುದ್ದಿ ಹೊರಬಂದಿದ್ದು, ಮಾಹಿ ಪೋಷಕರಿಗೆ ಆಘಾತವಾಗಿದೆ.

English summary
The four-year-old girl Mahi, who was trapped inside a narrow, 70-feet borewell for 86 hours since Wednesday, was finally lifted out by the rescuers. The rescue team rushed the baby girl Mahi to near by Army hospital for Medical assistance. The baby declared dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X