ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ವಿಕೆಟ್: ಸುರೇಶ್ ಕುಮಾರ್ ರಾಜೀನಾಮೆ

By Srinath
|
Google Oneindia Kannada News

bjp-minister-s-suresh-kumar-tenders-resignation
ಬೆಂಗಳೂರು, ಜೂನ್ 23: ಬಿಜೆಪಿಯ ಹಿರಿಯ ಮುಖಂಡ, ಮಿಸ್ಟರ್ ಕ್ಲೀನ್ ಇಮೇಜಿನ, ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಬೆಳಗ್ಗೆ ದಿಢೀರನೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸದಾನಂದ ಗೌಡರಿಗೆ ತಲುಪಿಸಿದ್ದಾರೆ.

ಅತ್ಯಂತ ಸಜ್ಜನ, ಆರ್ ಎಸ್ ಎಸ್ ನಿಷ್ಠಾವಂತ ಎನಿಸಿಕೊಂಡಿರುವ ಸುರೇಶ್ ಕುಮಾರ್ ಅವರ ರಾಜೀನಾಮೆ ನೀಡಿದ್ದಾರೆ. ಆರ್ ಎಂವಿ ಬಡಾವಣೆಯಲ್ಲಿ ಅಕ್ರಮವಾಗಿ ಜಿ ಕೆಟಗರಿಯಲ್ಲಿ ಬಿಡಿಎ ನಿವೇಶನವನ್ನು ಪಡೆದಿರುವ ದೂರಿಗೆ ಸಂಬಂಧಿಸಿದಂತೆ ಈ ರಾಜೀನಾಮೆ ಸಲ್ಲಿಸಿದ್ದಾರೆ.

4,000 ಚದರಡಿಯ ಈ ನಿವೇಶನದ ಇಂದಿನ ಮಾರುಕಟ್ಟೆ ಮೌಲ್ಯ 4 ಕೋಟಿ ರುಪಾಯಿ. ಅವರು ಈ ಹಿಂದೆ 10 ಲಕ್ಷ ರುಪಾಯಿ ನೀಡಿ ನಿವೇಶನ ಖರೀದಿಸಿದ್ದಾರೆ. ಭಾಸ್ಕರ್ ಎಂಬ RTI ಕಾರ್ಯಕರ್ತರು ಸಚಿವ ಸುರೇಶ್ ವಿರುದ್ಧ ದೂರು ಸಲ್ಲಿಸಿದ್ದರು. ಅಕ್ರಮ ನಿವೇಶನ ಆರೋಪದ ವಿವರ

ಲೋಕಾಯುಕ್ತಕ್ಕೆ ನನ್ನ ಆಸ್ತಿ ವಿವರದಲ್ಲಿ ಎಲ್ಲ ವಿವರ ನೀಡಿದ್ದೇನೆ. ನಾನೊಬ್ಬ ಪ್ರಮಾಣಿಕ ಸಚಿವ. ನನ್ನ ವಿರುದ್ಧ ಅಂತಹ ಆರೋಪ ಬಂದಾಗ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದೇನೆ. ಆರೋಪ ಮುಕ್ತನಾಗುವವರೆಗೂ ಸಚಿವ ಪದವಿ ಬೇಡವೆಂದು ಮುಖ್ಯಮಂತ್ರಿಗೆ ತಿಳಿಸಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ವಿವಾದಿತ ನಿವೇಶನವನ್ನು ವಾಪಸು ಮಾಡುವುದಾಗಿಯೂ ಅವರು ಇದೇ ವೇಳೆ ಪ್ರಕಟಿಸಿದ್ದಾರೆ.

ಈಗಾಗಲೇ ಸಚಿವರುಗಳ ರಾಜೀನಾಮೆಯಿಂದ ಬಸವಳಿದಿರುವ ಬಿಜೆಪಿ ಮತ್ತು ತತ್ಫಲವಾಗಿ ಈಗಾಗಲೇ 20ಕ್ಕೂ ಹೆಚ್ಚು ಸಚಿವ ಖಾತೆಗಳನ್ನು ಹೊತ್ತಿರುವ ಸದಾನಂದ ಗೌಡರಿ ಹೆಗಲಿಗೆ ಈಗ ಮತ್ತೆರಡು ಮಹತ್ವದ ಖಾತೆಗಳು ಹೆಗಲೇರಿವೆ.

English summary
Karnataka BJP Minister S Suresh Kumar tenders resignation today (June 23)following allegations of violating BDA rules, G category site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X