ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾ ಆಶ್ರಮದಲ್ಲಿ ಲೋಪ; ತೀರ್ಥದಲ್ಲಿ ಮಾದಕ ದ್ರವ್ಯ

By Srinath
|
Google Oneindia Kannada News

nithyananda-bidadi-ashram-flouts-rules-yogeshwar
ಬೆಂಗಳೂರು, ಜೂನ್ 23: ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಸೇರಿದ ಬಿಡದಿಯ ಧ್ಯಾನಪೀಠಂ ಆಶ್ರಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಸಹಿತ ಹಲವು ಲೋಪಗಳು ಕಂಡುಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಪಿ ಯೋಗೀಶ್ವರ್ ಹೇಳಿದ್ದಾರೆ.

ಸಾರ್ವಜನಿಕರ ಭಾವನೆಗಳು ಮತ್ತು ಮಾಧ್ಯಮದ ವರದಿಗಳಿಗೆ ಸ್ಪಂದಿಸಿ ಸರಕಾರವು ನಿತ್ಯಾನಂದನ ಧ್ಯಾನಪೀಠಂ ಆಶ್ರಮದ ಶೋಧ ಕಾರ್ಯಾಚರಣೆಗೆ ಆದೇಶಿಸಿತ್ತು. ಅಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳ ಸಂಬಂಧ ಅಧಿಕಾರಿಗಳು ವರದಿ ಸಲ್ಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿಪಿ ಯೋಗೀಶ್ವರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿತ್ಯಾನಂದನ ಬಂಧನ, ಧ್ಯಾನಪೀಠಂ ಆಶ್ರಮದ ಶೋಧ ಕಾರ್ಯಾಚರಣೆ ಸಹಿತ ಎಲ್ಲ ಕ್ರಮಗಳು ಕಾನೂನಿನ ಇತಿಮಿತಿಯೊಳಗೇ ನಡೆದಿವೆ. ಧ್ಯಾನಪೀಠಂ ಆಶ್ರಮದ 30 ಕೊಠಾಡಿಗಳ ಬೀಗ ತೆರವಿಗೆ ನ್ಯಾಯಾಂಗ ನಿಂದನೆ ಆಗಬಹುದು ಎನ್ನುವ ಅಂಶ ಕಾರಣವಾಯ್ತು ಎಂದು ಸಚಿವ ಯೋಗೀಶ್ವರ್ ಸ್ಪಷ್ಟನೆ ನೀಡಿದರು.

ನಿತ್ಯಾನಂದ ಆಶ್ರಮದಲ್ಲಿ ತೀರ್ಥದಲ್ಲಿ ಮಾದಕ ದ್ರವ್ಯ: ಮಧುರೆ ಅಧೀನಂ ಮಠಕ್ಕೆ ಇತ್ತೀಚೆಗಷ್ಟೇ ಕಿರಿಯ ಸ್ವಾಮೀಜಿಯಾಘಿ ನೇಮಕಗೊಂಡಿರುವ ನಿತ್ಯಾನಂದ ಸ್ವಾಮಿ ವಿರುದ್ಧ ಸ್ಥಳೀಯ ಪೊಲೀಸರು ಕೋರ್ಟ್ ಆದೇಶದ ಬಳಿಕ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ. ತೀರ್ಥದಲ್ಲಿ ಮಾದಕದ್ರವ್ಯ ಸೇರಿಸಿ ಭಕ್ತರಿಗೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಈ ಸಂಬಂಧ ನಿತ್ತಯಾನಂದ ಹಾಗೂ ಇತರೆ ಇಬ್ಬರ ವಿರುದ್ಧ ಹಿಂದೂ ಮಕ್ಕಳ ಕಚ್ಚಿ ಸಂಘಟನೆಯ ಸೋಲೈಕಣ್ಣನ್ ಎಂಬುವವರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಈ ಮಧ್ಯೆ, ಬಿಡದಿಯ ಆಶ್ರಮದಲ್ಲಿ ಮಾಧ್ಯಮದವರು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತನ್ನ ವಿರುದ್ಧದ FIR ರದ್ದು ಕೋರಿ ನಿತ್ಯಾನಂದ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಸುಭಾಷ್ ಬಿ ಆದಿ ಅವರು ಈ ಆದೇಶ ನೀಡಿದ್ದು, ದೂರುದಾರರು ಮತ್ತು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಿತ್ಯಾನಂದ ಪರ ಹಿರಿಯ ವಕೀಲ ಸಿವಿ ನಾಗೇಶ್ ಕೋರ್ಟಿಗೆ ಹಾಜರಾಗಿದ್ದರು.

English summary
Nithyananda Swamy Bidadi Ashram flouts construction rules says Ramnagar district incharge minister CP Yogeshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X