ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯಕ್ಕೆ ಬನ್ನೇರುಘಟ್ಟ ರಸ್ತೆ ಏಕಮುಖ ಸಂಚಾರ ಇಲ್ಲ

By Srinath
|
Google Oneindia Kannada News

no-one-way-traffic-plan-on-bannerghatta-road
ಬೆಂಗಳೂರು, ಜೂನ್ 22: ಡೈರಿ ಸರ್ಕಲ್ಲಿನಿಂದ ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವುದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಕೈಬಿಟ್ಟಿದ್ದಾರೆ. ಇದರಿಂದ ಈ ರಸ್ತೆಯ ಇಕ್ಕೆಲಗಳಲ್ಲೂ ಹರಡಿಕೊಂಡಿರುವ ಐಟಿ-ಬಿಟಿ ಮಂದಿ ನಿರಾಳಗೊಂಡಿದ್ದಾರೆ.

ಹಾಗೆ ನೋಡಿದರೆ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಇಂತಹ one-way ಸಂಚಾರ ಮಾರ್ಗಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಜಾರಿಗೊಳಿಸಿದ್ದಾರೆ. ಹಲವಾರು ಕಡೆ ಇಂತಹ ಯೋಜನೆಗಳು ವಿಫಲಗೊಂಡು ಜನರ ತೀವ್ರ ಅಸಮಾಧಾನಕ್ಕೆ ತುತ್ತಾಗಿದ್ದರೆ ಕೆಲವು ಕಡೆ ಒಂದಷ್ಟು ಯಶಸ್ವಿಯಾಗಿ ಪೊಲೀಸರು ಸಮಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಬನ್ನೇರುಘಟ್ಟ ರಸ್ತೆಯೂ ಹೀಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಮತ್ತೊಂದು ಪ್ರಯೋಗಕ್ಕೆ ತುತ್ತಾಗುವ ಆತಂಕ ಟೆಕ್ಕಿಗಳಲ್ಲಿ ಮನೆಮಾಡಿತ್ತು. ಹಾಗೂ ಮೊನ್ನೆ ಮೂರು ದಿನಗಳ ಕಾಲ ಈ 'ಏಕಮುಖ' ಪ್ರಯೋಗವನ್ನು ಜಾರಿಗೊಳಿಸಲು ಪ್ರಯತ್ನಿಸಿ, ಕೊನೆಗೆ not feasible ಎಂದು ಕೈಬಿಟ್ಟಿದ್ದಾರೆ. ಅಂದಹಾಗೆ, ಬನ್ನೇರುಘಟ್ಟ ರಸ್ತೆ ಏಕಮುಖ ಸಂಚಾರ ಬೇಕೋ, ಬೇಡವೋ? ನಿಮ್ಮ ಅನುಭವವೇನು? ತಿಳಿಸಿ.

ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ದಿನಬೆಳಗಾದರೆ ಉದ್ಭವಿಸುವ ಟ್ರಾಫಿಕ್ ಜಾಮ್ ಅನ್ನು ಸುಲಲಿತಗೊಳಿಸಲು ತಾತ್ಕಾಲಿಕ ಬ್ಯಾರಿಕೇಡುಗಳನ್ನು ನಿಲ್ಲಿಸಿ, ಭಾರಿ ಸಂಖ್ಯೆಯಲ್ಲಿದ್ದ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಯತ್ನಿಸಿದರು. ಆದರೆ ಹಾಗೆ ಪ್ರಯೋಗಕ್ಕೆ ಅವರು ಆರಿಸಿಕೊಂಡಿದ್ದು ರಜಾ ಸಮಯವಾದ week-end periodನಲ್ಲಿ. ಹಾಗಾಗಿ ಟ್ರಾಫಿಕ್ ಜಾಮ್ ನಾಡಿಮಿಡಿತ ಅಳೆಯಲು ಟ್ರಾಫಿಕ್ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಇದೀಗ ಮತ್ತೆ ದ್ವಿಮುಖ ಸಂಚಾರಕ್ಕೆ ಬನ್ನೇರುಘಟ್ಟ ರಸ್ತೆ ತೆರೆದುಕೊಂಡಿದೆ.

English summary
After three days of experimentation, the Bangalore Traffic Police have concluded that the traffic bottleneck between Dairy Circle and Bannerghatta Road cannot be resolved by making B.G. Road into a one-way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X