ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಒಲಿಂಪಿಕ್ಸ್ ಗೆ ಎರಡು ಟೆನಿಸ್ ತಂಡ

By Mahesh
|
Google Oneindia Kannada News

India to send two doubles teams to London Olympics
ನವದೆಹಲಿ, ಜೂ.21: ಕೊನೆಗೂ, ಲಂಡನ್ ಒಲಿಂಪಿಕ್ಸ್ ಗೆ ಟೆನಿಸ್ ಆಡಲು ಪೇಸ್ ಹಾಗೂ ಭೂಪತಿ ಇಬ್ಬರು ಹೋಗುತ್ತಿದ್ದಾರೆ. ಆದರೆ, ಇಬ್ಬರು ಒಟ್ಟಿಗೆ ಡಬಲ್ಸ್ ನಲ್ಲಿ ಆಡುತ್ತಿಲ್ಲ. ಆಟಗಾರರ ಜೋಡಿ ಸಮಸ್ಯೆಗೆ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್(AITA) ಪರಿಹಾರ ಕಂಡು ಕೊಂಡಿದೆ.

ಲಂಡನ್ ಒಲಿಂಪಿಕ್ಸ್ 2012 ಗೆ ಎರಡು ತಂಡಗಳನ್ನು ಕಳಿಸಲಾಗುತ್ತಿದೆ. ಲಿಯಾಂಡರ್ ಪೇಯಸ್ ಹಾಗೂ ಜಗದೀಶನ್ ವಿಷ್ಣುವರ್ಧನ್, ಮಹೇಸ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರನ್ನು ಕಳಿಸಲಾಗುತ್ತಿದೆ.

ಒಲಿಂಪಿಕ್ಸ್ ಗೆ ಕಳಿಸುವ ತಂಡ ಪ್ರಕಟಿಸಲು ಗುರುವಾರ(ಜೂ.21) ಕೊನೆ ದಿನಾಂಕವಾಗಿತ್ತು. ಲಿಯಾಂಡರ್ ಪೇಸ್ ಜೊತೆ ಡಬಲ್ಸ್ ಆಡಲು ಮಹೇಶ್ ಭೂಪತಿ ಹಾಗೂ ಬೋಪಣ್ಣ ನಿರಾಕಸಿದ್ದರಿಂದ ಸಮಸ್ಯೆ ಆರಂಭವಾಗಿತ್ತು.

ಸೋಮದೇವ್ ದೇವ್ ವರ್ಮನ್ ಆಡುವುದಾಗಿ ಪೇಸ್ ಹೇಳಿದ್ದರು. ಆದರೆ ಸೋಮದೇವ್ ಅವರು ಸಂಪೂರ್ಣವಾಗಿ ಫಿಟ್ ಆಗಿರದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಗೆ ಅವಕಾಶ ಸಿಕ್ಕಿದೆ. ಸಾನಿಯಾ ಮಿರ್ಜಾಗೆ ಒಂದು ವೇಳೆ ವೈಲ್ಡ್ ಸಿಕ್ಕಿದರೆ ಆಕೆ ಮಿಶ್ರ ಡಬಲ್ಸ್ ನಲ್ಲಿ ಪೇಸ್ ಜತೆ ಆಡಲಿದ್ದಾರೆ ಎಂದು ಎಐಟಿಎ ಹೇಳಿದೆ.

ಲಿಯಾಂಡರ್ ಹಾಗೂ ಮಹೇಶ್ ಭೂಪತಿ ಇಬ್ಬರು ಭಾರತದ ಶ್ರೇಷ್ಠ ಆಟಗಾರರು ಅವರ ಸೇವೆ ಅಗತ್ಯವಿದೆ. ಡೇವಿಡ್ ಕಪ್ ನಂತೆ ಒಲಿಂಪಿಕ್ಸ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಸೋಮದೇವ್ ಅಲಭ್ಯತೆಯಿಂದ ವಿಷ್ಣುವರ್ಧನ್ ಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಎಐಟಿಎ ಅಧ್ಯಕ್ಷ ಅನಿಲ್ ಖನ್ನ ಹೇಳಿದ್ದಾರೆ.

ಸಾನಿಯಾ ಮಿರ್ಜಾ ಅವರು ಫ್ರೆಂಚ್ ಓಪನ್ ವೇಳೆಯಲ್ಲಿ ಮಹೇಶ್ ಭೂಪತಿ ಜೊತೆ ಒಲಿಂಪಿಕ್ಸ್ ನಲ್ಲಿ ಆಡಲು ಬಯಸುವುದಾಗಿ ಹೇಳಿದ್ದರು. ಆದರೆ, ಲಿಯಾಂಡರ್ ಪೇಸ್ ಜೊತೆ ಆಡಲು ನಿರಾಕರಿಸಿಲ್ಲ. ಹೀಗಾಗಿ ಯಾರು ಲಭ್ಯ ಇರುತ್ತಾರೋ ನೋಡಬೇಕು ಎಂದು ಅನಿಲ್ ಖನ್ನ ತಿಳಿಸಿದರು.

ಲಿಯಾಂಡರ್ ಪೇಸ್ ಅವರು ಒಲಿಂಪಿಕ್ಸ್ ನಿಂದ ದೂರವುಳಿಯುವುದಾಗಿ ಹೇಳಿದ ಮೇಲೆ ಎಐಟಿಎ ಈ ಪರಿಹಾರ ಕಂಡು ಕೊಂಡಿದೆ. ಮಹೇಶ್ ಭೂಪತಿ ಹಾಗೂ ಬೋಪಣ್ಣ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ.

ಆದರೆ, ನಿಯಮ ಮೀರಿರುವ ಭೂಪತಿ ಹಾಗೂ ಬೋಪಣ್ಣ ಮೇಲೆ ಕ್ರಮ ಜರುಗಿಸುವ ಬಗ್ಗೆ ಲಂಡನ್ ಒಲಿಂಪಿಕ್ಸ್ ನಂತರ ನಿರ್ಧರಿಸಲಾಗುವುದು ಎಂದು ಖನ್ನ ಹೇಳಿದ್ದಾರೆ.

ಎಐಟಿಎಗೆ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೊತೆಯಾಟದ ಮೇಲೆ ನಂಬಿಕೆ ಇನ್ನೂ ಬಂದಿಲ್ಲ. ಅದರೆ, ಕ್ರೀಡಾಸಕ್ತಿಯಿಂದ ಎರಡು ತಂಡವನ್ನು ಕಳಿಸಲು ನಿರ್ಧರಿಸಲಾಗಿದೆ. ಪೇಸ್ ಅವರು ಯುವ ಆಟಗಾರ ವಿಷ್ಣುವರ್ಧನ್ ಅವರ ಜೊತೆ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ ಎಂದು ಅನಿಲ್ ಖನ್ನ ಭರವಸೆ ವ್ಯಕ್ತಪಡಿಸಿದರು.

English summary
Finally, the crisis in Indian tennis has ended. The All India Tennis Association (AITA) has decided to send two doubles teams to London Olympics 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X