ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂನಿ ಕಾಲ್ಗುಣದ ಲಕ್, ಇಂಗ್ಲೆಂಡ್ ಎಂಟರ ಘಟಕ್ಕೆ

By Mahesh
|
Google Oneindia Kannada News

Lucky England stumble into quarter-finals
ಕೀವ್, ಜೂ.20: ಒಂದು ಪಂದ್ಯದ ನಿಷೇಧ ಪಡೆದು ಡಗ್ ಔಟ್ ನಲ್ಲೇ ಕಾಲ ಕಳೆದಿದ್ದ ಇಂಗ್ಲೆಂಡಿನ ಸ್ಟಾರ್ ಆಟಗಾರ ವೆಯ್ನ್ ರೂನಿ ಬಾರಿಸಿದ ಏಕೈಕ ಗೋಲಿನಿಂದ ಇಂಗ್ಲೆಂಡ್ ಕ್ವಾಟರ್ ಫೈನಲ್ಸ್ ತಲುಪಿದೆ. ಯುರೋ ಕಪ್ ನ ಗ್ರೂಪ್ ಡಿ ಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ಇಂಗ್ಲೆಂಡ್ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಅತಿಥೇಯ ಉಕ್ರೇನ್ ತಂಡ ಅನುಭವಿ ಆಟಗಾರ ನಾಯಕ ಶೆವ್ಚೆಂಕೋ ಅನುಪಸ್ಥಿತಿಯಲ್ಲಿ ಕಣಕ್ಕಿಳಿದರೂ ಪ್ರಥಮಾರ್ಧದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸಿತ್ತು. ಆದರೆ, ಇಂಗ್ಲೆಂಡ್ ಪರ ರೂನಿ, ವೆಲ್ ಬಾಕ್ ಉತ್ತಮ ಆಟ ಪ್ರದರ್ಶಿಸಿ ಉಕ್ರೇನ್ ರಕ್ಷಣಾ ಪಡೆಗೆ ಸವಾಲೆಸೆದಿದ್ದರು. ದ್ವಿತೀಯಾರ್ಧ ಆರಂಭದ ಮೂರೇ ನಿಮಿಷದಲ್ಲಿ ರೂನಿ ಹೆಡ್ ಮಾಡಿ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಕ್ವಾರ್ಟರ್ ಫೈನಲಿಗೇರುವುದು ಸ್ಪಷ್ಟವಾಯಿತು.

ಅಂತಿಮ ಎಂಟರ ಘಟ್ಟಕ್ಕೇರಬೇಕಿದ್ದರೆ ಉಕ್ರೇನ್ ಗೆ ಗೆಲುವು ತುಂಬಾ ಮುಖ್ಯವಾಗಿತ್ತು. ಆದರೆ 62ನೇ ನಿಮಿಷದಲ್ಲಿ ಮಾರ್ಕೊ ಡೆವಿಕ್ ಗೋಲು ಬಾರಿಸಲು ಪ್ರಯತ್ನಿಸಿದರೂ, ಚೆಂಡು ಗೋಲು ಬಾಕ್ಸ್ ನ ಲೈನ್ ದಾಟಿದೆ ಎಂದು ಉಕ್ರೇನ್ ಆಟಗಾರರು ಮತ್ತು ಅಭಿಮಾನಿಗಳು ವಾದ ಮಾಡಿದರು. ಆದರೆ ರಿಪ್ಲೇಯಲ್ಲಿ ಚೆಂಡು ಲೈನ್ ದಾಟಿರುವುದು ಸ್ಪಷ್ಟವಾಗಿತ್ತು.

ಗೋಲ್ ಲೈನ್ ವಿವಾದ : ಇದು ಮತ್ತೊಂದು ಗೋಲ್ ಲೈನ್ ವಿವಾದವಾಗಿ ಇತಿಹಾಸ ಪುಟ ಸೇರಿಬಿಟ್ಟಿತು. ಗೋಲು ಬಾಕ್ಸ್ ಹಿಂದಿನಿಂತ ಸಹಾಯಕ ರೆಫ್ರಿ ಈ ಗೋಲನ್ನು ಸ್ಪಷ್ಟವಾಗಿ ನೋಡುವ ಎಲ್ಲಾ ಅವಕಾಶ ಇತ್ತು. ಆದರೆ, ಇಂಗ್ಲೆಂಡ್ ಮತ್ತೊಮ್ಮೆ ಅದೃಷ್ಟದಿಂದ ಪಂದ್ಯ ಗೆದ್ದು ಬಿಟ್ಟಿತು.

2010ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ಫ್ರಾಂಕ್ ಲ್ಯಾಂಪರ್ಡ್ ಗೋಲು ಲೈನ್ ವಿವಾದದಂತೆ ಈ ವಿವಾದವೂ ಫೀಫಾಗೆ ಎಚ್ಚರಿಕೆ ಗಂಟೆಯಾಗಿದೆ. ಲ್ಯಾಂಪರ್ಡ್ ಗೋಲು ಹೊಡೆದಿಲ್ಲ ಎಂದು ಫೀಫಾ ನಿಯಮದ ಪ್ರಕಾರ ರೆಫ್ರಿ ಘೋಷಿಸಿದ್ದರು. ನಂತರ ಗೋಲ್ ಲೈನ್ ತಂತ್ರಜ್ಞಾನ ಬದಲಾವಣೆಗೊಳಿಸಲಾಗಿತ್ತು. ಆದರೆ, ಉಕ್ರೇನ್ ಗೆ ಅದೃಷ್ಟವಾಗಲಿ, ತಂತ್ರಜ್ಞಾನವಾಗಲಿ ನೆರವಿಗೆ ಬರಲಿಲ್ಲ.

ಭಾನುವಾರ ನಡೆಯಲಿರುವ ಕ್ವಾರ್ಟರ್ ಫೈನಲಿನಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಆಡಲಿದೆ. ಸಹ ಆತಿಥೇಯತ್ವ ವಹಿಸಿದ್ದ ಉಕ್ರೇನ್ ಟೂರ್ನಿಯಿಂದ ಹೊರಬಿದ್ದು ಸ್ವದೇಶದ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿದೆ.

ಇಂಗ್ಲೆಂಡ್ 1 - 0 ಉಕ್ರೇನ್
5(4) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 11(5)
6 ಕಾರ್ನರ್ಸ್ 10
13 ಫೌಲ್ಸ್ 12
0 ಆಫ್ ಸೈಡ್ 0
2 ಹಳದಿ ಕಾರ್ಡ್ 3
0 ಕೆಂಪು ಕಾರ್ಡ್ 0

ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಶೆವ್ಚೆಂಕೋ ಕೂಡಾ ಗಾಯದ ಸಮಸ್ಯೆಯಿಂದ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಯರ್ಮಲೆಂಕೋ, ನಜಾರೆಂಕೋ ಉತ್ತಮ ಆಟವಾಡಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

English summary
England has scraped into the quarter-finals of Euro 2012 here after a goal-line refereeing blunder helped them to a 1-0 win over Ukraine which sent the co-hosts crashing out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X