ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಎಳೇ ಮಗು ಸ್ವಾಮಿ; ಧಾರ್ಮಿಕ ಉಗ್ರನಲ್ಲ

By Srinath
|
Google Oneindia Kannada News

 Massachusetts Institute of Technology
ಬೆಂಗಳೂರು, ಜೂನ್ 17: ಬಿಡದಿಯ ಧ್ಯಾನಪೀಠಂ ಆಶ್ರಮದ ನಿತ್ಯಾನಂದ ಸ್ವಾಮಿಯನ್ನು ಇತ್ತ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಸ್ವಾಮೀಜಿಗಳು 'ಧಾರ್ಮಿಕ ಭಯೋತ್ಪಾದಕ' ಎಂದು ಜರಿಯುತ್ತಿದ್ದರೆ ಅತ್ತ ನಿತ್ಯಾನಂದನ ಶಿಷ್ಯಂದಿರು ಆತನನ್ನು 'ಎಳೆಯ ಮಗು' ಎಂದು ಲೊಚಲೊಚನೆ ಮುದ್ದುಮಾಡಿದ್ದಾರೆ.

ಯಾವ angleನಿಂದ ನಿತ್ಯಾನಂದ ಮಹಾಪ್ರಭುಗಳು ಎಳೆಯ ಮಗುವಿನ ಹಾಗೆ ಕಂಡುಬಂದಿದ್ದಾರೋ ಸಾಕ್ಷಾತ್ ಕಾಮಿಸ್ವಾಮಿಯೇ ಹೇಳಬೇಕು. ಆದರೆ ಹಾಗೆ ಹೇಳಿರುವುದು ಮುಗ್ಧ, ಅಮಾಯಕ ಪ್ರಜೆಗಳಲ್ಲ. ಬದಲಿಗೆ ನಾಡಿನ ಪ್ರಜ್ಞಾವಂತ ಮಂದಿ ಹೀಗೆಂದಿದ್ದಾರೆ.

'ನಮ್ ನಿತ್ಯಾನಂದ ಸ್ವಾಮಿಗಳು baby ಹಾಗೆ. ಅವರನ್ನು ಹಾಗೇ ಬಿಟ್ಟುಬಿಡಿ, please' ಎಂದು ಯುವ ಶಿಷ್ಯೋತ್ತಮಳು ಹೇಳಿದ್ದಾಳೆ. ಈಕೆಯ ಪಾಂಡಿತ್ಯ ವಸಿ ನೋಡಿ. ಈಕೆ MIT ಎಂಬ ವಿಶ್ವಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ಅದೂ ಯಾವ ವಿಷಯದಲ್ಲಿ ಅಂದ್ರಾ? ಐಟಿ-ಬಿಟಿ ಇತಿಹಾಸಕ್ಕೆ ಸೇರಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ನ್ಯಾನೊ ಟೆಕ್ನಾಲಜಿ ಎಂಬ ಭವಿಷ್ಯದ ಟೆಕ್ನಾಲಜಿ ವಿಷಯದಲ್ಲಿ ಈಕೆ ವಿಜ್ಞಾನಿ. ಇರಲಿ ಆಕೆ ಏನೇ ಹೇಳಿರಲಿ. ಕನಿಷ್ಠ ಆಕೆಯ ಈ ಓದಿಗಾದರೂ ಮರ್ಯಾದೆ ಕೊಡೋಣ ಬಿಡಿ.

ಬಹಳಷ್ಟು ಮಂದಿಗೆ ಸ್ಪೆಲ್ಲಿಂಗು/ಉಚ್ಛಾರಣೆಯೂ ಕಷ್ಟವೆನಿಸುವ Massachusetts Institute of Technology ಎಂಬ ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಈ ಮಹಾಸಾಧ್ವಿಯು 'ನನ್ನ ಸ್ವಾಮಿಯನ್ನು ಬುಟ್ಟುಬಿಡಿ' ಎಂದು ಮೊನ್ನೆ ಮೈಸೂರು ಜೈಲು ಬಳಿ ಅಬ್ಬೇಪಾರಿಯಾಗಿ ಸಿಕ್ಕಿಸಿಕ್ಕವರ ಬಳಿಯೆಲ್ಲಾ ಅಂಗಾಲಾಚುತ್ತಿದ್ದಳು.

ಇದ್ಯಾವುದೋ ಕೇಸಿರಬೇಕು ಎಂದು ಕೊಂಡು ಸುಮ್ಮನಾಗೋಣ ಅಂದುಕೊಂಡರೆ ಅಯಮ್ಮನಿಗೇ ಆನ್ಕೊಂಡು ಮತ್ತೊಬ್ಬ ಯುವತಿ ನಿಂತಿದ್ದರು. ಆಯಮ್ಮಾ ಅಶ್ವಿನಿ ದೇವತೆ! ಅರ್ಥಾತ್ ವೈದ್ಯೆ. ಅಯಮ್ಮನದೂ ಅದೇ ವರಾತ 'ನನ್ನ ದೇವ್ರನ್ನು ಬಿಟ್ಟುಬಿಡಿ' ಅಂತ.

ಹಾಗೆ ಮೈಸೂರು ಜೈಲಿನ ಮುಂದೆ ಠಳಾಯಿಸುತ್ತಿದ್ದ ಶಿಷ್ಯೋತ್ತಮರು ಇನ್ನೂ ಅನೇಕಾನೇಕ. ಟೆಕ್ಕಿಗಳು, ಚಾರ್ಟರ್ಡ್ ಅಕೌಂಟೆಂಟುಗಳು, ಕಾರ್ಪೊರೇಟ್ ಕಂಪನಿಗಳ ದೊಡ್ಡ ಕುಳಗಳು, ವೈದ್ಯರು, ವಿಜ್ಞಾನಿಗಳು, ಇಂಜಿನಿಯರುಗಳು. ನಾಡಿನ education fraternityಯೇ ಅಲ್ಲಿ ಉದ್ಭವಿಸಿತ್ತು ಎಂದು ಖುದ್ದು IGP ಭಾಸ್ಕರ ರಾವ್ ಅವರೇ ಗುಟ್ಟಾಗಿ ಹೇಳಿದ್ದಾರೆ.
ಇದೆಲ್ಲದರ ಹೊರತಾಗಿ 'ಅಮ್ಮಾ ಅಚಲಾ, ಅಮ್ಮಾ ರಂಗನಾಯಕಿಗಳು ಇನ್ನೆಷ್ಟೋ...!'

English summary
Swamy Nithyananda is a baby, please spare him- pleaded (at Mysore jail, last week) a young woman scientist and a graduate in nanotechnology from the prestigious Massachusetts Institute of Technology (MIT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X