ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಆರ್ ಕಾಂಗ್ರೆಸ್ : ಶ್ರೀರಾಮುಲು ಹೊಸ ಪಕ್ಷ

By Prasad
|
Google Oneindia Kannada News

BSR Congress : Srimulu's new party name
ಬೆಂಗಳೂರು, ಜೂ. 16 : ಆಂಧ್ರಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದೇ ತಡ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿಯ ನಿಕಟವರ್ತಿಯಾಗಿರುವ ಮಾಜಿ ಸಚಿವ ಬಿ ಶ್ರೀರಾಮುಲು ಕೂಡ ತಮ್ಮ ಪಕ್ಷವನ್ನು ಬಿಎಸ್ಆರ್ ಕಾಂಗ್ರೆಸ್ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಉತ್ತರ ಕರ್ನಾಟಕದ ಬಸವಕಲ್ಯಾಣದಿಂದ 54 ದಿನಗಳ ಕಾಲ 921 ಕಿ.ಮೀ. ಪಾದಯಾತ್ರೆ ಮಾಡಿ ಬೆಂಗಳೂರಿಗೆ ಆಗಮಿಸಿರುವ ಶ್ರೀರಾಮುಲು ಅವರು ರಾಜ್ಯ ಚುನಾವಣಾ ಆಯೋಗದಲ್ಲಿ ಪಕ್ಷದ ಹೊಸ ಹೆಸರನ್ನು ನೊಂದಾವಣಿ ಮಾಡಿಸಿಕೊಂಡಿದ್ದಾರೆ. ಏಪ್ರಿಲ್ 24ರಂದು ಬಸವಕಲ್ಯಾಣದಿಂದ ಶ್ರೀರಾಮುಲು ಪಾದಯಾತ್ರೆ ಆರಂಭಿಸಿದ್ದರು. ಶ್ರೀರಾಮುಲು ಅವರ ಹೊಸ ಪಕ್ಷದಲ್ಲಿನ ಬಿಎಸ್ಆರ್ ಅಂದರೆ ಬಡವ, ಶ್ರಮಿಕ, ರೈತರ ಪಕ್ಷ.

ಪಾದಯಾತ್ರೆ ಮುಗಿಸುವ ಹೊತ್ತಿಗೆ ರಾಜ್ಯ ಸರಕಾರ ಪತನದ ಹಂತದಲ್ಲಿ ತಲುಪಿರುತ್ತದೆ ಎಂದು ಶ್ರೀರಾಮುಲು ಅವರು ಪಾದಯಾತ್ರೆ ಆರಂಭ ಮಾಡುವ ಮುನ್ನ ಹೇಳಿದ್ದರು. ಈಗ ಪಾದಯಾತ್ರೆ ಮುಗಿಸಿರುವ ಹುಮ್ಮಸ್ಸಿನಲ್ಲಿರುವ ಶ್ರೀರಾಮುಲು ಅವರು, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಉಳಿದ ಪಕ್ಷಗಳನ್ನು ಧೂಳಿಪಟ ಮಾಡಿದಂತೆ ಕರ್ನಾಟಕದಲ್ಲಿ ಕೂಡ ಬಿಎಸ್ಆರ್ ಕಾಂಗ್ರೆಸ್ ಕೂಡ ಉಳಿದ ಪಕ್ಷಗಳನ್ನು ನಿರ್ನಾಮ ಮಾಡಲಿದೆ ಎಂದು ಆತ್ಮವಿಶ್ವಾಸದಿಂದ ನುಡಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ : ತಮ್ಮ ಪಾದಯಾತ್ರೆಯ ಕೊನೆಯ ದಿನವಾದ ಜೂನ್ 17ರಂದು ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶ್ರೀರಾಮುಲು ಅವರು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಬಂದು ಸೇರುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಹೊಸ ಪಕ್ಷಕ್ಕೆ ನೊಂದಾಯಿಸಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀರಾಮುಲು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ಇತ್ತೀಚೆಗೆ ಶ್ರೀರಾಮುಲು ಪಕ್ಷ ಸೇರಿರುವ ಖ್ಯಾತ ಚಿತ್ರ ನಟಿ ರಕ್ಷಿತಾ ಕೂಡ ಭಾಗವಹಿಸಲಿದ್ದಾರೆ.

ರೆಡ್ಡಿಗಳು ಏನು ಮಾಡಲಿದ್ದಾರೆ? : ಎಲ್ಲ ರೀತಿಯಲ್ಲೂ ಹೊಡೆತ ತಿನ್ನುತ್ತಿರುವ ರೆಡ್ಡಿ ಬ್ರದರ್ಸ್ ಈ ಸಂದರ್ಭದಲ್ಲಿ ಏನು ಮಾಡಲಿದ್ದಾರೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕರುಣಾಕರ ರೆಡ್ಡಿಯನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಅಧಿಕೃತವಾಗಿ ಇರುವ ಸೋಮಶೇಖರ ರೆಡ್ಡಿ, ಸಂಸದೆ ಸ್ಥಾನ ಕಳೆದುಕೊಂಡಿರುವ ಶ್ರೀರಾಮುಲು ತಂಗಿ ಜೆ. ಶಾಂತಾ, ಕಂಪ್ಲಿ ಶಾಸಕ ಸುರೇಶ್ ಬಾಬು ಮುಂತಾದವರು ಶ್ರೀರಾಮುಲುವನ್ನು ಬಹಿರಂಗವಾಗಿ ಬೆಂಬಲಿಸುತ್ತ ಬಂದಿದ್ದಾರೆ. ಇವರೆಲ್ಲ ಜೂ.17ರ ಸಮಾವೇಶಕ್ಕೆ ಬರಲಿದ್ದಾರಾ?

ಇವರಲ್ಲಿ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಅವರಿಬ್ಬರ ಹೆಸರು, ಜನಾರ್ದನ ರೆಡ್ಡಿ ಜಾಮೀನಿಗಾಗಿ ಹೈದರಾಬಾದ್ ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣದಲ್ಲಿ ಕೇಳಿಬಂದಿದೆ. ಅವರು ಶ್ರೀರಾಮುಲುವನ್ನು ಬೆಂಬಲಿಸಿದರೂ, ಲಂಚ ಪ್ರಕರಣದಲ್ಲಿ ಆರೋಪಿಗಳಾಗಿದ್ದರೂ ಕರ್ನಾಟಕ ಬಿಜೆಪಿ ಮಾತ್ರ ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೈಕಟ್ಟಿ ಕುಳಿತಿದೆ. ಅವರ ವಿರುದ್ಧ ವಿಚಾರಣೆ ನಡೆಸುವ ಅಥವಾ ಕ್ರಮ ತೆಗೆದುಕೊಳ್ಳುವ ಚಿಂತನೆಯನ್ನೂ ನಡೆಸಿಲ್ಲ.

English summary
Former health minister B. Sriramulu has registered his new party as BSR Congress. He has exuded confidence that his new party would destroy other parties in Karnataka like YSR Congress did in Andhra Pradesh. Sriramulu's padayatra will conclude in Bangalore on June 17 at Freedom Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X