ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿ ಗೆಲುವು ತಡೆದು ನಗೆ ಬೀರಿದ ಕ್ರೊವೇಷಿಯಾ

By Mahesh
|
Google Oneindia Kannada News

Euro 2012 : Croatia1-1 Italy
ಪೊಝನನ್, ಜೂ.14: ಯುರೋ ಕಪ್ ನ ಸಿ ಗುಂಪಿನ ಇಟಲಿ ತಂಡದ ಗೆಲುವಿನ ಆಸೆಗೆ ಕ್ರೊವೇಷಿಯಾ ತಣ್ಣೀರೆರಚಿದೆ. ಮತ್ತೊಮ್ಮೆ ಇಟಲಿ ಮುನ್ನಡೆ ಪಡೆದ ನಂತರ ಡ್ರಾ ಗೆ ತೃಪ್ತಿಪಡುವ ಸ್ಥಿತಿ ಪುನರಾವರ್ತನೆಗೊಂಡಿದೆ. ಕ್ರೊವೇಷಿಯಾ ಹೋರಾಟಕಾರಿ ಆಟ ಪ್ರದರ್ಶಿಸಿ ಡ್ರಾ ನೊಂದಿಗೆ ಸಿ ಗುಂಪಿನ ಅಗ್ರಸ್ಥಾನ ಕಾಯ್ದುಕೊಂಡಿದೆ.

ಎರಡು ಡ್ರಾ ಪಂದ್ಯಗಳ ನಂತರ ಇಟಲಿ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಮೇಲೆ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮೊದಲ ಪಂದ್ಯ ಡ್ರಾ ಸ್ಪೇನ್ ಗುರುವಾರ ಮಧ್ಯರಾತ್ರಿ ನಂತರದ ಪಂದ್ಯದಲ್ಲಿ ಐರ್ಲೆಂಡ್ ಗೆದ್ದು, ಚೆಕ್ ವಿರುದ್ಧ ಡ್ರಾ ಮಾಡಿಕೊಂಡರೆ ಇಟಲಿ ಹಾದಿ ಕಷ್ಟವಾಗಲಿದೆ. ಒಟ್ಟಾರೆ ಕ್ರೊವೇಷಿಯಾ ತಂಡ ಒಂದು ಕಾಲನ್ನು ಮುಂದಿನ ಹಂತದಲ್ಲಿ ಇಟ್ಟಿದೆ.

ಕ್ರೋಷಿಯಾದ ಪರ ಮತ್ತೊಮ್ಮೆ ಮೊದಲ ಪಂದ್ಯದ ಹೀರೋ ಮಂಜೋವಿಕ್ ಮತ್ತೊಮ್ಮೆ ಕ್ರೋಷಿಯಾ ಪಾಲಿಗೆ ಆಪದ್ಭಾಂಧವರಾದರು. ಇಟಲಿಗೆ ಕಡೆಗೆ ಪಂದ್ಯವಾಲುತ್ತಿದ್ದಾಗ ಪಂದ್ಯದ 72ನೇ ಮಾರಿಯೋ ಮಾಂಜೋವಿಕ್ ಭರ್ಜರಿ ಗೋಲು ಬಾರಿಸಿಬಿಟ್ಟರು.

ನಿರೀಕ್ಷಿತ ರಣತಂತ್ರ ಮುಳುವಾಯಿತೇ? : ಪಂದ್ಯದ ಮೊದಲಾರ್ಧದಲ್ಲಿ ಮಾರಿಯೋ ಬಾಲೊಟೆಲ್ಲಿಯನ್ನು ಮುಖ್ಯ ಸ್ಟ್ರೈಕರ್ ಆಗಿ ಬಳಸಿದ ಇಟಲಿ ಕೊನೆ ಕ್ಷಣದಲ್ಲಿ ಬಾಲೊಟೆಲ್ಲಿ ಬದಲಿಗೆ ಡಿ ನಾಥಲೆಯನ್ನು ಇಳಿಸುವುದು ಮತ್ತೆ ಪುನಾರಾವರ್ತನೆಗೊಂಡಿತು. ಬಾಲೊಟೆಲ್ಲಿ ಪಂದ್ಯದ ಮೊದಲ ಹತ್ತು ನಿಮಿಷ ಗೋಲು ಗಳಿಸುವ ಉತ್ತಮ ಪ್ರಯತ್ನ ಮಾಡಿದರು.

ಆಂಡ್ರಿಯಾ ಪರ್ಲೋ ಮತ್ತೊಮ್ಮೆ ಉತ್ತಮ ಆಟ ಪ್ರದರ್ಶಿಸಿ ಟೂರ್ನಿಯ ಉತ್ತಮ ಫ್ರೀ ಕಿಕ್ ಗೋಲು ಹೊಡೆದರು(39ನೇ ನಿಮಿಷ). ಉಳಿದಂತೆ ಪಂದ್ಯದುದ್ದಕ್ಕೂ ಅಂಟಾನಿಯೋ ಕಸ್ಸಾನೋ ಮತ್ತೆ ಮಿಂಚಿದರು. ಗೋಲ್ ಕೀಪರ್ ಬುಫನ್ ಒಂದೆರಡು ಆತಂಕದ ಕ್ಷಣಗಳನ್ನು ಎದುರಿಸಿದರೂ ಸಮರ್ಥ ಪ್ರದರ್ಶನ ನೀಡಿದರು.

English summary
Czech's Mario Mandzukic's second-half equaliser earned Croatia a vital draw against Italy which leave Group C wide open. Croatia with four points in Poznan would clinch their last-eight spot following an impressive opening 3-1 win against Republic of Ireland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X