ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಚ್ಚರನ್ನು ಚೆಂಡಾಡಲು ಬಲಿಷ್ಠ ಜರ್ಮನಿ ರೆಡಿ

By Mahesh
|
Google Oneindia Kannada News

Van Persie
ಖಾರ್ಕಿವ್, ಜೂ.13: ಮೊದಲ ಪಂದ್ಯದಲ್ಲಿ ಮಂಕು ಕವಿದಂತೆ ಆಡಿ ಡೆನ್ಮಾರ್ಕ್ ವಿರುದ್ಧ ಸೋಲು ಅನುಭವಿಸಿದ್ದ ನೆದರ್ಲೆಂಡ್ಸ್ ತಂಡಕ್ಕೆ ಟೂರ್ನಿಯ ಫೇವರಿಟ್ ಜರ್ಮನಿಯ ಸವಾಲು ಎದುರಿಸಬೇಕಿದೆ. ಜೂ.13ರ ಮಧ್ಯರಾತ್ರಿ ನಡೆಯುವ ಬಿ ಗುಂಪಿನ ಈ ಪಂದ್ಯ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡುವ ಸಾಧ್ಯತೆಯಿದೆ.

ಕಿತ್ತಳೆ ದಿರಿಸಿದ ಡಚ್ಚರು ಈ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೋಲು ಸಾಧಿಸಿದರೆ ಮಾತ್ರ ಗ್ರೂಪ್ ಆಫ್ ಡೆತ್ ಎನಿಸಿರುವ ಬಿ ಗುಂಪಿನಿಂದ ಮುಂದಿನ ಹಂತಕ್ಕೇರಲು ಸಾಧ್ಯ.

ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದರೂ ಜರ್ಮನಿ ತಂಡ ಸ್ಥಿರ ಪ್ರದರ್ಶನ ನೀಡಿದೆ.

ಆಕ್ರಮಣಕಾರಿ ತಂಡಗಳು: ಆಕ್ರಮಣಕಾರಿ ಆಟವೇ ಪ್ರಧಾನವಾಗಿ ಎರಡೂ ತಂಡಗಳು ಮುನ್ನುಗ್ಗುವುದರಿಂದ ಸಮಬಲದ ಹೋರಾಟದ ನಿರೀಕ್ಷೆಯಿದೆ. ಹಾಲೆಂಡ್ ತಂಡ ಗೋಲು ಗಳಿಕೆಯಲ್ಲಿ ವೈಫಲ್ಯ ಹೊಂದುತ್ತಿರುವುದು ಜರ್ಮನಿಗೆ ಲಾಭವಾಗಬಹುದು.

ಡಚ್ಚರಿಗೆ ಆಯ್ಕೆ ಸಮಸ್ಯೆ: ಪ್ರಿಮಿಯರ್ ಲೀಗ್ ಸ್ಟಾರ್ ರಾಬಿನ್ ವಾನ್ ಪರ್ಸಿ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿ ಬಂದರೂ ಮ್ಯಾನಜೇರ್ ಬರ್ಟ್ ವಾನ್ ಮಾರ್ವಿಜಿಕ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜರ್ಮನಿ ವಿರುದ್ಧ ವಾನ್ ಪರ್ಸಿ ಬದಲಿಗೆ ಕ್ಲಾಸ್ ಜಾನ್ ಹಂಟೆಲಾರ್ ಮೈದಾನಕ್ಕೆ ಇಳಿಯುವ ಸಾಧ್ಯತೆಯೂ ಇದೆ. ವಾನ್ ಪರ್ಸಿ ಹಾಗೂ ರಾಬೆನ್ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದಿರುವುದು ಆಯ್ಕೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳಿಸಿದೆ.

ಜರ್ಮನಿಯಲ್ಲಿ ಸ್ಟಾರ್ ಗಳ ದಂಡು : ಪೋರ್ಚುಗಲ್ ವಿರುದ್ಧ ಕೊನೆ ಹಂತದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿಸಿದ ಸ್ಟ್ರೈಕರ್ ಕ್ಲೋಸ್ ಹಾಗೂ ಗೊಮೇಜ್ ಅಂತಿಮ 11ರಲ್ಲಿ ಮುಂಪಡೆ ಆಟಗಾರರಾಗಿ ಇಳಿಯುವ ಸಾಧ್ಯತೆ ಇದೆ.

ಮಿಡ್ ಫೀಲ್ಡ್ ನಲ್ಲಿ ಜರ್ಮನಿಯ ಮೆಸುಟ್ ಓಜಿಲ್ ಹಾಗೂ ಹಾಲೆಂಡ್ ನ ವಿಂಜರ್ ಅರ್ಜೆನ್ ರಾಬೆನ್ ಕದನ ಕುತೂಹಲ ಮೂಡಿಸಿದೆ.

ಸ್ವಶ್ಸ್ ಟೈಗರ್, ಮುಲ್ಲರ್, ಪೊಡೊಲ್ ಸ್ಕಿ, ಓಜಿಲ್, ಗೊಮೆಜ್, ಕ್ರೂಸ್, ಕ್ಲೋಸ್, ಖದಿರಾ ರಂಥ ಅದ್ಭುತ ಆಟಗಾರರನ್ನು ಹೊಂದಿರುವ ಜರ್ಮನಿ ಪಡೆ ಹೆಚ್ಚಿನ ಗೋಲು ಗಳಿಸುವ ಸಾಧ್ಯತೆಯಿದೆ.

ಆದರೆ, ಡಚ್ ಪಡೆಯ ಸ್ನೈಡರ್ , ವಾನ್ ಪರ್ಸಿ, ರಾಬೆನ್, ಅಫೆಲಾಯ್ ಹಾಗೂ ಹಂಟೆಲಾರ್ ದಾಳಿಯನ್ನು ತಡೆಗಟ್ಟಲು ಜರ್ಮನಿ ನಾಯಕ ಲಾಮ್ ಅವರ ರಕ್ಷಣಾ ಪಡೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಡಿಫೆನ್ಸ್ ಬಲಿಷ್ಠಗೊಳ್ಳದಿದ್ದಲ್ಲಿ ಜರ್ಮನಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಜರ್ಮನಿ 4-2-3-1 ಹಾಗೂ ಹಾಲೆಂಡ್ 4-3-3-1 ರಚನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ನೆದರ್ಲೆಂಡ್ : ಸ್ಟೆಕೆಲೆನ್ ಬರ್ಗ್, ವಾನ್ ಡರ್ ವೆಲ್, ಹೈಟಿಂಗ, ಬೌಮಾ, ಡಿ ಜಾಂಗ್, ವಾನ್ ಬೊಮ್ಮೆಲ್, ರಾಬೆನ್, ಸ್ನೈಡರ್, ಅಫೆಲಾಯ್, ವಾನ್ ಪರ್ಸಿ

ಜರ್ಮನಿ: ನ್ಯೂರ್ ಬೊಟೆಂಗ್, ಹಮ್ಮೆಲ್ಸ್, ಬಾಸ್ಟುಬರ್, ಲಾಮ್, ಖದೀರಾ, ಸ್ವಶ್ಸ್ ಟೈಗರ್, ಮುಲ್ಲರ್, ಪೊಡೊಲ್ ಸ್ಕಿ, ಓಜಿಲ್, ಗೊಮೆಜ್, ಕ್ಲೋಸ್

English summary
The Netherlands will look to down their neighbours and fierce rivals Germany in their crucial Euro 2012 Group B match at the Metalist Stadium in Kharkiv.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X