ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥ್ರಿಲ್ಲರ್ ಮ್ಯಾಚ್ : ಪೋರ್ಚುಗೀಸರಿಗೆ ಮಹತ್ವದ ಜಯ

By Mahesh
|
Google Oneindia Kannada News

Euro 2012 : Portugal beat Denmark
ಲಿವಿವ್, ಜೂ.13: ಬಿ ಗುಂಪಿನ ರೋಚಕ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಮಣಿಸಿದ ಪೋರ್ಚುಗಲ್ ತಂಡ ಗೆಲುವಿನ ನಗೆ ಬೀರಿದೆ. ಪಂದ್ಯದ ಕೊನೆ 3 ನಿಮಿಷಕ್ಕೂ ಮುನ್ನ ಬದಲಿ ಆಟಗಾರ ವರೆಲಾ ಹೊಡೆದ ಅದ್ಭುತ ಗೋಲು ಮೂಲಕ ಪೋರ್ಚುಗಲ್ ಯುರೋ 2012ರಲ್ಲಿ ಮೊದಲ ಜಯ ದಾಖಲಿಸಿದೆ. ರೋನಾಲ್ಡೋ ಪಡೆ ಡೆನ್ಮಾರ್ಕ್ ಮೇಲೆ 3-2ರ ಅಂತರದಿಂದ ಗೆಲುವು ಗಳಿಸಿದೆ.

ಸುಲಭವಾಗಿ ಸಿಕ್ಕ ಒನ್ ಆನ್ ಒನ್ ಅವಕಾಶವನ್ನು ಹಾಳುಗೆಡವಿ ಪಾಪಪ್ರಜ್ಞೆಯಲ್ಲಿ ಮುಳುಗಿದ್ದ ಪೋರ್ಚುಗಲ್ ನಾಯಕ ಕ್ರಿಶ್ಚಿಯನೋ ರೋನಾಲ್ಡೋ ಕೊನೆಗೂ ನಿಟ್ಟುಸಿರುಬಿಟ್ಟಿದ್ದಾರೆ.

ಡೆನ್ಮಾರ್ಕ್ ಪರ 50ನೇ ಪಂದ್ಯವಾಡುತ್ತಿರುವ ನಿಕ್ಲಾಸ್ ಬೆಟ್ನರ್ ಅಮೋಘ ಆಟ ಪ್ರದರ್ಶಿಸಿ ಎರಡು ಅಮೂಲ್ಯ ಗೋಲು ಗಳಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಪೋರ್ಚಿಗಲ್ ಕೂಡಾ ಡ್ರಾಗೆ ತೃಪ್ತಿಪಡುವ ರೀತಿಯಲ್ಲಿ ಆಡುತ್ತಿತ್ತು.

ಪೋರ್ಚುಗಲ್ ಪರ ಪೆಪೆ, ಪೋಸ್ಟಿಗಾ ಉತ್ತಮ ಆಟ ಪ್ರದರ್ಶಿಸಿ ತಲಾ ಒಂದು ಗೋಲು ಗಳಿಸಿದರು. ಈ ಋತುವಿನಲ್ಲಿ 50ಕ್ಕೂ ಗೋಲು ಗಳಿಸಿರುವ ರೋನಾಲ್ಡೋ ಎರಡು ಮೂರು ಬಾರಿ ಗೋಲು ಗಳಿಸುವ ಅವಕಾಶದಲ್ಲಿ ವಂಚಿತರಾದರು. ಪಂದ್ಯದ ಕೊನೆ 10 ನಿಮಿಷಕ್ಕೂ ಮುನ್ನ ರೋನಾಲ್ಡೊ ಗೋಲು ಮಿಸ್ ಮಾಡಿದ್ದು ದೊಡ್ಡ ಪ್ರಮಾದವಾಗಿತ್ತು.

ಆದರೆ, ವರೆಲಾ ಗೋಲು ರೋನಾಲ್ಡೊ ತಪ್ಪನ್ನು ಮುಚ್ಚಿಬಿಟ್ಟಿತು. 34,915 ಜನ ಪ್ರೇಕ್ಷಕರ ಮುಂದೆ ತಲೆ ತಗ್ಗಿಸಿದ್ದ ರೋನಾಲ್ಡೊಗೆ ವರೆಲಾ ರಿಲೀಫ್ ನೀಡಿದರು. ಇಲ್ಲದಿದ್ದರೆ ಪೋರ್ಚುಗಲ್ ಪಾಲಿಗೆ ರೋನಾಲ್ಡೊ ವಿಲನ್ ಆಗಿ ಬಿಡುತ್ತಿದ್ದರು. 84ನೇ ನಿಮಿಷದಲ್ಲಿ ಮೈರೆಲೆಸ್ ಬದಲಿಗೆ ಕಣಕ್ಕಿಳಿದ ವರೆಲಾ 87ನೇ ನಿಮಿಷದಲ್ಲಿ ಪೋರ್ಚಿಗೀಸರಿಗೆ ಮುನ್ನಡೆ ತಂದಿತ್ತರು.

ಆದರೂ, ರೋನಾಲ್ಡೊ ತಂಡದ ನಾಯಕನಾಗಿ ತಂಡವನ್ನು ಸಂಘಟಿಸಿ, ಮುನ್ನುಗ್ಗಿಸುವಲ್ಲಿ ವೈಫಲ್ಯ ಕಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪೊರ್ಚುಗಲ್ ನಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿತ್ತು.

ಡೆನ್ಮಾರ್ಕ್ 2 - 3 ಪೋರ್ಚುಗಲ್
9(6) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 17(2)
7 ಕಾರ್ನರ್ಸ್ 6
58% ಚೆಂಡಿನ ಹಿಡಿತ 42%
13 ಫೌಲ್ಸ್ 15
2 ಆಫ್ ಸೈಡ್ 0
2 ಹಳದಿ ಕಾರ್ಡ್ 2
0 ಕೆಂಪು ಕಾರ್ಡ್ 0

ಪೋರ್ಚುಗೀಸರ ದಾಳಿಯನ್ನು ಸಮರ್ಥವಾಗಿ ತಡೆಯುವಲ್ಲಿ ಡೆನ್ಮಾರ್ಕ್ ನಾಯಕ ಅಗ್ಗರ್, ಪೌಲ್ಸನ್ ಉತ್ತಮ ಕಾರ್ಯ ನಿಭಾಯಿಸಿದರು. ಆರಂಭದಲ್ಲಿ ಡೆನ್ಮಾರ್ಕ್ ದಾಳಿ ನೇತೃತ್ವ ವಹಿಸಿದ್ದ ಕಳೆದ ಪಂದ್ಯದ ವೀರ ಕ್ರೋಹ್ನ್ ಡೆಹ್ಲಿ ಈ ಪಂದ್ಯದಲ್ಲಿ ಕೊಂಚ ಮಂಕಾದರು. ರೊಮಡೆಲ್ ಕೂಡಾ ಬದಲಿ ಆಟಗಾರನಿಗೆ ಅವಕಾಶ ಮಾಡಿಕೊಟ್ಟು ಡಗ್ ಔಟ್ ಗೆ ಹೋಗಬೇಕಾಯಿತು. ಬೆಂಟ್ನರ್ ಗೆ ಉತ್ತಮ ಸಾಥ್ ನೀಡುವ ಸ್ಟ್ರೈಕರ್ ಇದ್ದಿದ್ದರೆ ಪೋರ್ಚುಗೆಸರಿಗೆ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎನ್ನಬಹುದು.

ಭಾನುವಾರ ಜೂ. 17ರಂದು ಡೆನ್ಮಾರ್ಕ್ ತಂಡ ಬಲಿಷ್ಠ ಜರ್ಮನಿಯನ್ನು ಎದುರಿಸಲಿದ್ದು, ಪೋರ್ಚುಗೀಸ್ ತಂಡಕ್ಕೆ ನೆದರ್ಲೆಂಡ್ ಸವಾಲು ಎಸೆಯಲಿದೆ. ಜರ್ಮನಿ ಹಾಗೂ ಹಾಲೆಂಡ್ ನಡುವಿನ ಪಂದ್ಯದ ಫಲಿತಾಂಶದ ನಂತರ ಡೆನ್ಮಾರ್ಕ್ ನ ಭವಿಷ್ಯ ತಿಳಿಯಲಿದೆ. ಜರ್ಮನಿ ವಿರುದ್ಧ ಹಾಲೆಂಡ್ ಗೆದ್ದರೆ ಗುಂಪಿನ ಲೆಕ್ಕಾಚಾರ ಗೋಲು ಗಳಿಕೆಯ ಮೇಲೆ ಅವಲಂಬಿತವಾಗುವ ಸಾಧ್ಯತೆಯಿದೆ. ಒಟ್ಟಾರೆ ಡೆನ್ಮಾರ್ಕ್ ಮೇಲಿನ ಗೆಲುವು ಪೋರ್ಚುಗೀಸರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದಂತೂ ನಿಜ.

English summary
Portugal's Substitute Silvestre Varela's late thunderbolt goal boosted Portugal's hopes of reaching the Euro 2012 last-eight. Ronaldo's men beat Denmark by 3-2 in a group B thriller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X