ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ ಗೆ ಷೇರು ಮಾರಾಟವೇ ಪರಿಹಾರ

By Mahesh
|
Google Oneindia Kannada News

Sanjay Ceo, Kingfisher
ಮುಂಬೈ, ಜೂ.13: ಕಿಂಗ್ ಫಿಷರ್ ಆರ್ಥಿಕ ಸಮಸ್ಯೆಗೆ ಸಂಸ್ಥೆ ಒಡೆಯ ವಿಜಯ್ ಮಲ್ಯ ನಂತರ ಸಿಇಒ ಸಂಜಯ್ ಅಗರವಾಲ್ ಪರಿಹಾರ ಕಂಡುಕೊಂಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಉನ್ನತ ಅಧಿಕಾರಿಗಳ ಷೇರುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯ ಹೊರಬಿದ್ದಿದೆ.

ಕಳೆದ ರಾತ್ರಿ ಸಂಸ್ಥೆಯ ಉನ್ನತ ಅಧಿಕಾರಗಳ ಜೊತೆ ಮೂರು ಗಂಟೆಗಳ ಮಾತುಕತೆ ನಡೆಸಿದ ಸಂಜಯ್, ಸಮಸ್ಯೆ ಪರಿಹಾರವಾಗುವವರೆಗೂ ಸಂಸ್ಥೆ ತೊರೆಯಬೇಡಿ ಎಂದು ಕೇಳಿಕೊಂಡಿದ್ದಾರೆ. ಸಭೆಯಲ್ಲಿ ನಡೆದ ಮಾತುಕತೆ ಮುಖ್ಯಾಂಶ ಇಲ್ಲಿದೆ:

ಅಂತಾರಾಷ್ಟ್ರೀಯ ಸಂಸ್ಥೆಗಳು ಕಿಂಗ್ ಫಿಷರ್ ಸಂಸ್ಥೆ ಮೇಲೆ ಬಂಡವಾಳ ಹೂಡಲು ಮುಂದೆ ಬಂದಿದೆ, ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಯುಪಿಎ ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ. ಎಫ್ ಡಿಐ ಕುರಿತ ಗೊಂದಲ ಪರಿಹಾರವಾದ ತಕ್ಷಣ ವಿದೇಶಿ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ.

* ಗಲ್ಫ್, ಎಮಿರೇಟ್ಸ್ ಏರ್ ಲೈನ್ಸ್ ಆಸಕ್ತಿ ತೋರಿದೆ. ಸದ್ಯಕ್ಕೆ ವಾರಕ್ಕೊಮ್ಮೆ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಬದಲಿ ವಿಮಾನಗಳನ್ನು ಒದಗಿಸುತ್ತಿರುವ ಎಮಿರೇಟ್ಸ್, ಮುಂದೆ ಸಂಪೂರ್ಣವಾಗಿ ಕೈ ಜೋಡಿಸುವ ಸಾಧ್ಯತೆಯಿದೆ.
* ಬ್ಯಾಂಕಿನ ಸಾಲವನ್ನು ತೀರಿಸಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
* ಕಳೆದ ಐದು ತಿಂಗಳ ಸಂಬಳ ಬಾಕಿ ಕೊಡಬೇಕಾಗಿದ್ದು, ಈ ತಿಂಗಳ ಅಂತ್ಯಕ್ಕೆ ಕಂತು ಕಂತಿನಲ್ಲಿ ಸಂಬಳ ನೀಡಲಾಗುವುದು.
*TDS ನೀಡಲಾಗಿದೆ: ಮಾಧ್ಯಮಗಳ ವರದಿಯನ್ನು ನಂಬಬೇಡಿ. ಆದಾಯ ತೆರಿಗೆ ಇಲಾಖೆಗೆ TDS(tax deducted at sources) ಸಲ್ಲಿಸಲಾಗಿದೆ. 2009-10ರ ಬಾಕಿ ಮೊತ್ತ ಪಾವತಿಸಲು ಇದು ಸಹಕಾರಿಯಾಗಿದ್ದು, ಬ್ಯಾಂಕ್ ಖಾರೆ ಜಪ್ತಿ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.
* ನಿಯಮಿತ ಹಾರಾಟ: 20 ಏರ್ ಕ್ರಾಫ್ಟ್ ಹಾಗೂ 120 ಪೈಲಟ್ ಗಳೊಂದಿಗೆ ಸದ್ಯಕ್ಕೆ ಕಾರ್ಯ ನಿರ್ವಹಿಸಲಾಗುವುದು.

ಸ್ಪೈಸ್ ಜೆಟ್ ಸಿಇಒ, ಮಾರಿಟ್ಟ್ ಇಂಟರ್ ನ್ಯಾಷನಲ್, ಯುಎಸ್ ಏರ್ ವೇಸ್ ನಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಿಂಗ್ ಫಿಷರ್ ನ ಹಾಲಿ ಸಿಇಒ ಸಂಜಯ್ ಬಗ್ಗೆ ಉದ್ಯೋಗಿಗಳಿಗೆ ಸದ್ಯಕ್ಕೆ ಭರವಸೆ ಮೂಡಿದೆ. ಸಮಸ್ಯೆ ಪರಿಹಾರಕ್ಕಾಗಿ ವಿಜಯ್ ಮಲ್ಯ ಹಾಗು ಸಂಜಯ್ ಹಗಲು ರಾತ್ರಿ ತಲೆಕೆಡಿಸಿಕೊಳ್ಳುವುದು ಇನ್ನೂ ತಪ್ಪಿಲ್ಲ.

English summary
Kingfisher Airlines CEO Sanjay Aggarwal has found a new solution to crisi ridden company. Sanjay had high level meeting with top executives last day(Jun.12) in Mumbai. Sanjay reportedly hinted selling key stocks of Kingfisher
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X