ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ: ಡಬ್ಬಲ್ ಹ್ಯಾಟ್ರಿಕ್ ತಾರೆ, ದಾಖಲೆಗಳು

By Mahesh
|
Google Oneindia Kannada News

Euro 2012 Interesting facts
ಯುರೋಪಿನ ಅತಿ ದೊಡ್ಡ ಫುಟ್ಬಾಲ್ ಟೂರ್ನಿ ಈ ಬಾರಿ ಪೋಲೆಂಡ್ ಹಾಗೂ ಉಕ್ರೇನ್ ನಲ್ಲಿ ಆಯೋಜನೆಗೊಂಡಿದೆ. 23 ದಿನಗಳ ಈ ಫುಟ್ಬಾಲ್ ಹಬ್ಬದಲ್ಲಿ 16 ದೇಶಗಳು ಪಾಲ್ಗೊಳ್ಳುತ್ತಿದ್ದು, ರೋಚಕ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಆರಂಭಿಕ ಪಂದ್ಯದಲ್ಲಿ ಅತಿಥೇಯ ಪೋಲೆಂಡ್ ತಂಡ ಗ್ರೀಸ್ ವಿರುದ್ಧ ಡ್ರಾನಲ್ಲಿ ಅಂತ್ಯವಾದರೂ ಪ್ರೇಕ್ಷಕರಿಗೆ ರಸದೌತಣ ನೀಡಿತು. ಯುರೋ ಕಪ್ ಇತಿಹಾಸ, ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ, ಯುರೋ ವಿಶೇಷತೆ ಬಗ್ಗೆ ಒಂದು ಪಕ್ಷಿ ನೋಟ ಇಲ್ಲಿದೆ.

* ಯುರೋ 2012ರಲ್ಲಿ 16 ತಂಡಗಳು ಪಾಲ್ಗೊಂಡಿದ್ದು, ಹಾಲಿ ಚಾಂಪಿಯನ್ ಸ್ಪೇನ್ ಹಾಗೂ ಜರ್ಮನಿ ಈ ಬಾರಿಯ ಫೇವರೀಟ್ ತಂಡಗಳೆನಿಸಿದೆ.

* ಯುರೋ ಕಪ್ ಅನ್ನು 1960 ಹಾಗೂ 64ರಲ್ಲಿ ಯುಇಎಫ್ಎ ಯುರೋಪಿಯನ್ ನ್ಯಾಷನಲ್ ಕಪ್ ಎಂದು ಕರೆಯಲಾಗುತ್ತಿತ್ತು. 1968ರ ನಂತರ ಯುರೋ ಕಪ್ ಎಂಬ ಹೆಸರು ಸ್ಥಿರವಾಯಿತು.

* UEFA ಟೂರ್ನಿಗಳಲ್ಲಿ ಜರ್ಮನಿ ಅತ್ಯಧಿಕ ಪಂದ್ಯ(38) ಗಳನ್ನಾಡಿ ಅಗ್ರಸ್ಥಾನದಲ್ಲಿದೆ. ನೆದರ್ಲೆಂಡ್ 32 ಪಂದ್ಯ ಹಾಗೂ ಸ್ಪೇನ್ 30 ಪಂದ್ಯಗಳನ್ನಾಡಿದೆ.

* ಫ್ರೆಂಚ್ ಸ್ಟಾರ್ ಮಿಕೆಲ್ ಪ್ಲಾಟಿನಿ ಯುರೋ ಇತಿಹಾಸದಲ್ಲಿ ಅತ್ಯಧಿಕ ಗೋಲು ಹೊಡೆದ ಆಟಗಾರ ಎನಿಸಿದ್ದು, 9 ಗೋಲು ದಾಖಲಿಸಿದ್ದರು.

* ಒಂದು ಯುರೋ ಟೂರ್ನಿಯಲ್ಲೂ ಕೂಡಾ 1984ರಲ್ಲಿ ಪ್ಲಾಟಿನಿ ಹೊಡೆದ 9 ಗೋಲುಗಳಿ ಇಂದಿಗೂ ಅತ್ಯಧಿಕ ಎನಿಸಿದೆ. ಪ್ಲಾಟಿನಿ ಆಟದಿಂದ ಫ್ರಾನ್ಸ್ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಪ್ರಶಸ್ತಿ ಗಳಿಸಿತ್ತು.

* ಟೂರ್ನಿಯೊಂದರಲ್ಲಿ ಡಬ್ಬಲ್ ಹ್ಯಾಟ್ರಿಕ್ ಹೊಡೆದ ಸಾಧನೆ ಕೂಡಾ ಪ್ಲಾಟಿನಿ ಹೆಸರಿನಲ್ಲಿದೆ. 1984ರಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧಿಸಿದ್ದರು.

* ಉಳಿದಂತೆ ಹ್ಯಾಟ್ರಿಕ್ ಗೋಲು ದಾಖಲಿಸಿದವರಲ್ಲಿ 2008ರಲ್ಲಿ ಡೇವಿಡ್ ವಿಲ್ಲಾ(ಸ್ಪೇನ್) ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಅದಕ್ಕೂ ಮುನ್ನ ಪ್ಯಾಟ್ರಿಕ್ ಕ್ಲುವೆರ್ಟ್(ನೆದರ್ಲೆಂಡ್ಸ್), ಸೆರ್ಗಿಯೋ ಕೊನ್ಸೆಕೊ(ಪೋರ್ಚುಗಲ್), ಮಾರ್ಕೋ ವಾನ್ ಬಾಸ್ಟೆನ್(ನೆದರ್ಲೆಂಡ್), ಮಿಕೆಲ್ ಪ್ಲಾಟಿನಿ(ಫ್ರಾನ್ಸ್), ಕ್ಲಾಸ್ ಅಲ್ಫೊಸ್ (ಜರ್ಮನಿ) ಹಾಗೂ ಡಿಟರ್ ಮುಲ್ಲರ್ (ಜರ್ಮನಿ) ಪಟ್ಟಿಯಲ್ಲಿದ್ದಾರೆ.

* ಸ್ಥಳೀಯ ಕೋಚ್ ನೆರವಿಲ್ಲದೆ ಜರ್ಮನಿಯ ಕೋಚ್ ಒಟ್ಟೋ ರೆಹಗೆಲ್ ನೆರವಿನಿಂದ ಕಪ್ ಗೆದ್ದ ಕೀರ್ತಿಗೆ ಗ್ರೀಸ್ ಪಾತ್ರವಾಗಿದೆ. 2004ರಲ್ಲಿ ಗ್ರೀಸ್ ಈ ಸಾಧನೆ ಮಾಡಿತ್ತು.

* ಅತಿಥೇಯ ತಂಡ ಫೈನಲ್ ತಲುಪಿ ಸೋಲು ಅನುಭವಿಸಿದ ಸಾಧನೆ ಪೋರ್ಚುಗಲ್ ಹೆಸರಿನಲ್ಲಿದೆ. 2004ರಲ್ಲಿ ಗ್ರೀಸ್ ವಿರುದ್ಧ ಪೋರ್ಚುಗಲ್ ಅಂತಿಮ ಹಣಾಹಣಿಯಲ್ಲಿ ಸೋಲು ಕಂಡಿತ್ತು.

* 1968ರಲ್ಲಿ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ವಿರುದ್ಧ ನಡೆದ ಕ್ವಾಲಿಫೈಯರ್ ಪಂದ್ಯವನ್ನು ಅತ್ಯಧಿಕ ಪ್ರೇಕ್ಷಕರು ವೀಕ್ಷಿಸಿದ ದಾಖಲೆ ಹೊಂದಿದೆ. ಅಂದಾಜು 130,711 ಜನ ಈ ಪಂದ್ಯವನ್ನು ವೀಕ್ಷಿಸಿದ್ದರು.

* ಸ್ಪೇನ್ ಹಾಲಿ ನಾಯಕ, ಗೋಲ್ ಕೀಪರ್ ಐಕಾರ್ ಕಾಸಿಲ್ಲಾಸ್ ಅತ್ಯಧಿಕ ಪಂದ್ಯವಾಡಿದ ಹಾಲಿ ಆಟಗಾರ ಎನಿಸಿದ್ದಾರೆ. ಕ್ಯಾಸಿಲ್ಲಾಸ್ 129 ಪಂದ್ಯದಲ್ಲಿ ಆಡಿದ್ದಾರೆ.

* ಯುರೋ 2012ರಲ್ಲಿ ಅತಿಥೇಯ ತಂಡ ಪೋಲೆಂಡ್ ಅತಿ ಕಡಿಮೆ ಫೀಫಾ ವಿಶ್ವ ಶ್ರೇಯಾಕ(65) ಹೊಂದಿರುವ ತಂಡ ಎನಿಸಿದೆ.

* ಅತಿಥೇಯ ಉಕ್ರೇನ್ ತಂಡಕ್ಕೆ ಇದು ಮೊಟ್ಟಮೊದಲ ಯುರೋಪಿಯನ್ ಚಾಂಪಿಯನ್ ಶಿಪ್ ಆಗಿದೆ.

* ಯುರೋ 2012ರ ಸ್ಟಾರ್ ಆಟಗಾರರು: ರಾಬಿನ್ ವಾನ್ ಪರ್ಸಿ, ನೆದರ್ಲೆಂಡ್ (ಆರ್ಸೆನಲ್), ಟೊಮಸ್ ರೊಸಿಚ್ಕಿ, ಜೆಕ್ ರೆಪಬ್ಲಿಕ್ (ಆರ್ಸೆನಲ್), ಡೆನಿಯಲ್ ಅಗ್ಗರ್, ಡೆನ್ಮಾರ್ಕ್ (ಲಿವರ್ ಪೂಲ್), ಬಾಸ್ಟಿಯನ್ ಸ್ವೆನ್ಸ್ ಟೈಗರ್, ಜರ್ಮನಿ(ಬಯರ್ನ್ಸ್ ಮ್ಯೂನಿಚ್), ಕ್ರಿಸ್ಟಿಯಾನೋ ರೋನಾಲ್ಡೊ, ಪೋರ್ಚುಗಲ್ (ರಿಯಲ್ ಮ್ಯಾಡ್ರಿಡ್), ಆಂಡ್ರೆಸ್ ಇನಿಯಾಸ್ಟಾ, ಸ್ಪೇನ್(ಬಾರ್ಸಿಲೋನಾ), ಕರೀಂ ಬೆನ್ಜೆಮಾ, ಫ್ರಾನ್ಸ್ (ರಿಯಲ್ ಮ್ಯಾಡ್ರಿಡ್), ಆಂಡ್ರಿ ಶ್ವೆಚೆಂಕೋ, ಉಕ್ರೇನ್(ಡೈನಮೋ ಕಿವೀವ್)

English summary
Euro 2012 a 23 day long tournament featuring 16 countries is kicked off with host Poland taking on Greece. Here is the interesting facts and figures about the prestigious tournament
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X