ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಸ್ ಗೆ ಆಘಾತ ತಲೆಕೆಳಗಾದ ಲೆಕ್ಕಾಚಾರ

By Mahesh
|
Google Oneindia Kannada News

Czech Republic beat Greece match report
ಕೀವ್, ಜೂ.12: ಗ್ರೀಸ್ ವಿರುದ್ಧ ನಡೆದ ಎ ಗುಂಪಿನ ಪಂದ್ಯದಲ್ಲಿ ಭರ್ಜರಿ ಜೆಕ್ ರಿಪಬ್ಲಿಕ್ ವಿಜಯ ಸಾಧಿಸುವ ಮೂಲಕ ಫುಟ್ಬಾಲ್ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಪಂದ್ಯದ 6 ನಿಮಿಷದಲ್ಲಿ 2 ಗೋಲು ಗಳಿಸಿದ ಜೆಕ್ ತಂಡ ಅದ್ಭುತ ಆಟ ಪ್ರದರ್ಶಿಸಿ ಗ್ರೀಸ್ ವಿರುದ್ಧ 2-1ರ ಮಹತ್ವದ ಜಯ ಸಾಧಿಸಿದೆ.

ಜೆಕ್ ಪರ ಪಿಟ್ರ್ ಜಿರಾಸೆಕ್ ಮೊದಲ 3 ನಿಮಿಷದಲ್ಲಿ ಗೋಲು ಹೊಡೆದರು. ನಂತರ ವಾಕ್ಲಾವ್ ಪಿಲಾರ್ 6ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಗ್ರೆಸ್ ಗೆ ಆಘಾತ ನೀಡಿದರ. ಟೂರ್ನಿಯಲ್ಲಿ ಪಿಲಾರ್ ಗೆ ಇದು ಎರಡನೇ ಗೋಲಾಗಿದೆ.

ಗ್ರೀಸ್ ಗೆ ಆರಂಭದಿಂದಲೂ ಶಕುನ ಸರಿಯಾಗಿರಲಿಲ್ಲ. ಗೋಲ್ ಕೀಪರ್ ಕೊಸ್ಟಾಸ್ ಚಾಲ್ಕಿಯಾಸ್ ಸ್ನಾಯಸೆಳೆತಕ್ಕೆ ಒಳಗಾಗಿ ಹೊರ ನಡೆದರು. ರೆಫ್ರಿ ಕೂಡಾ ವಿಪರೀತವಾಗಿ ಗ್ರೀಸ್ ವಿರುದ್ಧ ನಿರ್ಣಯಗಳನ್ನು ನೀಡಿಬಿಟ್ಟರು. ಗೆಕಾಸ್ ಆಫ್ ಸೈಡ್, ಸಪ್ಲಂಜಿಡಿಸ್ ಹಳದಿ ಕಾರ್ಡ್ ನೀಡಿದ್ದು ದೊಡ್ಡ ಪ್ರಮಾದವಾಗಿದ್ದು, ಪಂದ್ಯದ ಗತಿ ಬದಲಿಸಿಬಿಟ್ಟಿತು.

ಗ್ರೀಕ್ ಪರ ಫಾನಿಸ್ ಗೆಕಾಸ್ ಮತ್ತೊಮ್ಮೆ ಉತ್ತಮ ಆಟ ಪ್ರದರ್ಶಿಸಿ 53ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಜೀವ ತಂದರು. ಆದರೆ, ಕರಗೋನಸ್, ಸಮರಾಸ್, ಸಲ್ಪಿಂಜಿಡಿಸ್ ಉತ್ತಮ ಆಟದ ನಡುವೆಯೂ ಅದೃಷ್ಟ ಹೀನವಾಗಿದ್ದ ಗ್ರೀಸ್ ತಂಡ ಚೆಕ್ ರಿಪಬ್ಲಿಕ್ ಗೆ ತಲೆ ಬಾಗಿದೆ.

ಚೆಕ್ ರಿಪಬ್ಲಿಕ್ ಈ ಗೆಲುವಿನ ಮೂಲಕ ಕ್ವಾಟರ್ ಫೈನಲ್ ಹಂತ ತಲುಪುವ ಕನಸು ಜೀವಂತವಾಗಿಸಿಕೊಂಡಿದೆ. ಎ ಗುಂಪಿನ ಲೆಕ್ಕಾಚಾರ ಮಾತ್ರ ಕುತೂಹಲ ಕೆರಳಿಸಿದೆ. ರಷ್ಯಾ ವಿರುದ್ಧ 1-4ರ ಹೀನಾಯ ಸೋಲುಂಡಿದ್ದ ಚೆಕ್ ಇವತ್ತು ಆಡಿದ ರೀತಿ ಎಲ್ಲರನ್ನು ಬೆರಗುಗೊಳಿಸಿತು.

English summary
Euro 2012 Goup A :Czech Republic's Euro 2012 campaign came alive thanks to two goals Petr Jiracek and Vaclav Pilar in the first six minutes against 2004 champions Greece. Fanis Gekas scored one for Greeks which didn't helped to save the match.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X