ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾವ್! ಪೆಟ್ರೋಲ್ ಬೆಲೆಯಲ್ಲಿ ಮತ್ತೆ ಇಳಿಕೆ ಸಾಧ್ಯತೆ

By Prasad
|
Google Oneindia Kannada News

Petrol price may be cut by Rs. 2
ನವದೆಹಲಿ, ಜೂ. 12 : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಹದಿನೈದು ದಿವಸಗಳಲ್ಲಿ ಇಳಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಮತ್ತೆ ಇಳಿಕೆಯಾಗುವ ಸಂಭವನೀಯತೆಯಿದೆ. ಜೂನ್ 2ರಂದು 2 ರು. ಇಳಿಸಿದ ನಂತರ ಈಗ ಮತ್ತೆ ಲೀಟರಿಗೆ 2 ರು. ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.

ಮೇ 23ರಂದು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಲೀಟಲಿಗೆ 7.54 ರು.ನಷ್ಟು ಪೆಟ್ರೋಲ್ ಬೆಲೆಯನ್ನು ಏರಿಸಿದ್ದವು. ಇದರ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಬೆಲೆ ಏರಿಕೆಯನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ಕರೆದಿದ್ದ ಮೇ 31ರ ಭಾರತ್ ಬಂದ್ ಕರೆಗೆ ಭಾರತದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನಂತರ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದಿದ್ದ ಸರಕಾರ ಪೆಟ್ರೋಲ್ ಬೆಲೆ ಇಳಿಕೆಗೆ ಒಪ್ಪಿಗೆ ನೀಡಿತ್ತು ಮತ್ತು ಸಿಂಗಪುರದಲ್ಲಿ ಕಚ್ಚಾ ತೈಲದ ಬೆಲೆ, ಅದೇ ಸಮಯದಲ್ಲಿ ಇಳಿಕೆ ಕಂಡಿತ್ತು. ಆದ್ದರಿಂದ ಪೆಟ್ರೋಲ್ ಬೆಲೆ ಇಳಿಸದೆ ತೈಲ ಕಂಪನಿಗಳಿಗೆ ವಿಧಿ ಇರಲಿಲ್ಲ. ರುಪಾಯಿ ಕೂಡ ಡಾಲರ್ ವಿರುದ್ಧ ಸ್ಥಿರತೆ ಕಂಡುಕೊಂಡಿದ್ದರಿಂದ ಜೂನ್ 2ರಂದು ಪೆಟ್ರೋಲ್ ಬೆಲೆಯನ್ನು 2 ರು.ನಷ್ಟು ಇಳಿಸಲಾಗಿತ್ತು.

ಪ್ರತಿ ಹದಿನೈದು ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ರುಪಾಯಿ ಬೆಲೆಯ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ತೈಲ ಕಂಪನಿಗಳು ಏರಿಸುವ ಅಥವಾ ಇಳಿಸುವ ನಿರ್ಧಾರ ತೆಗೆದುಕೊಳ್ಳುತ್ತವೆ. ಜೂನ್ 2ರಂದು ಪೆಟ್ರೋಲ್ ಬೆಲೆ ಇಳಿಸಿದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಪೆಟ್ರೋಲ್ ಬೆಲೆ 116 ಡಾಲರ್ ಇತ್ತು. ಈಗ ಅದು ಬ್ಯಾರಲ್ಲಿಗೆ 108 ಡಾಲರ್‌ಗೆ ಬಂದು ತಲುಪಿದೆ. ಇದೇ ಪೆಟ್ರೋಲ್ ಬೆಲೆ ಇಳಿಸಲು ಕಾರಣ.

ಪೆಟ್ರೋಲ್ ಬೆಲೆ ಇಳಿಕೆಯ ಹಿಂದೆ ಡೀಸೆಲ್ ಬೆಲೆ ಏರಿಸುವ ಹುನ್ನಾರವೂ ಇದೆ ಎಂಬ ಮಾತು ಕೇಳಿಬಂದಿದೆ. ಪೆಟ್ರೋಲ್ ಬೆಲೆ ಪರಿಷ್ಕರಣೆಯ ಅಧಿಕಾರ ಸರಕಾರ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಬಿಟ್ಟುಕೊಟ್ಟಿದೆ. ಆದರೆ, ಡೀಸೆಲ್ ಬೆಲೆ ಪರಿಷ್ಕರಣೆಯ ಅಧಿಕಾರವನ್ನು ಸರಕಾರ ಇನ್ನೂ ತನ್ನಲ್ಲೇ ಉಳಿಸಿಕೊಂಡಿದೆ.

English summary
In view of reduction of crude oil price in the international market, state owned oil companies are contemplating cutting Petrol price by Rs. 2 per litre. Oil companies had increased rate by Rs. 7.54 on May 23. Later decreased by Rs. 2 on June 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X