ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಹಾಕಿ ತಂಡದಲ್ಲಿ ಕರ್ನಾಟಕದ ಕಲಿಗಳು

By Mahesh
|
Google Oneindia Kannada News

Karnataka Players in Olympics team
ನವದೆಹಲಿ, ಜೂ.12: ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತೀಯ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಗೋಲ್‌ಕೀಪರ್ ಭರತ್ ಚೆಟ್ರಿ ನಾಯಕನಾಗಿ ಆಯ್ಕೆಯಾಗಿದ್ದಾರೆ. 8 ಬಾರಿ ಚಾಂಪಿಯನ್ ಆಗಿರುವ ಭಾರತ ತಂಡದಲ್ಲಿ ಐದು ಜನ ಕರ್ನಾಟಕದ ಆಟಗಾರರು ಇರುವುದು ವಿಶೇಷ.

ನಾಯಕ ಭರತ್ ಚೆಟ್ರಿ, ಇಗ್ನೇಶ್ ಟಿರ್ಕಿ, ವಿಆರ್ ರಘುನಾಥ್, ಎಸ್.ಕೆ.ಉತ್ತಪ್ಪ ಹಾಗೂ ಎಸ್.ವಿ. ಸುನಿಲ್ ಭಾರತವನ್ನು ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಭಾರತ ತಂಡ ಬಿ ಗುಂಪಿನಲ್ಲಿ ಜರ್ಮನಿ, ನೆದರ್‌ಲೆಂಡ್, ದಕ್ಷಿಣ ಕೊರಿಯ, ನ್ಯೂಝಿಲೆಂಡ್ ಹಾಗೂ ಬೆಲ್ಜಿಯಂನೊಂದಿಗಿದೆ. ಆಸ್ಟ್ರೇಲಿಯ, ಗ್ರೇಟ್‌ಬ್ರಿಟನ್, ಸ್ಪೇನ್, ಪಾಕಿಸ್ತಾನ, ಅರ್ಜೆಂಟೀನಾ ಹಾಗೂ ದಕ್ಷಿಣ ಆಫ್ರಿಕಾ ಇತರ ಪ್ರಮುಖ ತಂಡಗಳಾಗಿದೆ.

ಭಾರತ ಜು.30 ರಂದು ರಿವರ್‌ಬ್ಯಾಂಕ್‌ನಲ್ಲಿ ನೆದರ್‌ಲೆಂಡ್ ವಿರುದ್ಧ ಆಡುವ ಮೂಲಕ ಲಂಡನ್ ಒಲಿಂಪಿಕ್ ಅಭಿಯಾನವನ್ನು ಆರಂಭಿಸಲಿದೆ. ಆ.1 ರಂದು ನ್ಯೂಝಿಲೆಂಡ್, ಆ.3 ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ, ಆ.4 ದಕ್ಷಿಣಕೊರಿಯಾ ಹಾಗೂ ಆ.7 ಬೆಲ್ಜಿಯಂನ ವಿರುದ್ಧ ಆಡಲಿದೆ. ಎಲ್ಲಾ ಪಂದ್ಯಗಳನ್ನು ಹಳದಿ ಚೆಂಡಿನಲ್ಲಿ ನೀಲಿ ಕೃತಕ ಟರ್ಫ್‌ನಲ್ಲಿ ಆಡಲಾಗುತ್ತದೆ. ಪಿಚ್‌ನಲ್ಲಿ ಪಿಂಕ್ ರನ್‌ವೇಗಳು ಇರುತ್ತವೆ.

ಲಂಡನ್ ಒಲಿಂಪಿಕ್ಸ್‌ಗೆ ಭಾರತದ ಹಾಕಿ ತಂಡ ಗೋಲ್‌ಕೀಪರ್‌ಗಳು: ಭರತ್ ಚೆಟ್ರಿ (ನಾಯಕ) ಹಾಗೂ ಪಿಆರ್ ಶ್ರೀಜೇಶ್.

ಡಿಫೆಂಡರ್‌ಗಳು: ವಿಆರ್ ರಘುನಾಥ್, ಇಗ್ನೇಸ್‌ಟರ್ಕಿ, ಸಂದೀಪ್ ಸಿಂಗ್.

ಮಿಡ್ ಫೀಲ್ಡರ್‌ಗಳು: ಸರ್ದಾರ್ ಸಿಂಗ್ (ಉಪನಾಯಕ), ಕೊಥಾಜಿತ್‌ಸಿಂಗ್, ಗುರ್ಬಜ್ ಸಿಂಗ್, ಬೀರೇಂದ್ರ ಲಾಕ್ರ, ಮನ್‌ಪ್ರೀತ್‌ಸಿಂಗ್.

ಫಾರ್ವರ್ಡ್‌ಗಳು:
ಎಸ್.ವಿ. ಸುನಿಲ್, ಗುರ್ವಿಂದರ್‌ಸಿಂಗ್ ಚಾಂಡಿ, ಸರ್ವನ್‌ಜಿತ್ ಸಿಂಗ್, ಶಿವೇಂದ್ರ ಸಿಂಗ್, ಡ್ಯಾನಿಶ್ ಮುಜ್ತಾಬ, ತುಷಾರ್ ಖಂಡೇಕರ್, ಧರ್ಮವೀರ್ ಸಿಂಗ್, ಎಸ್.ಕೆ.ಉತ್ತಪ್ಪ.

ತಂಡದ ಅಧಿಕಾರಿಗಳು: ಮೈಕಲ್ ನಾಬ್ಸ್ (ಮುಖ್ಯ ಕೋಚ್), ಮುಹಮ್ಮದ್ ರಿಯಾಝ್ (ಕೋಚ್), ಕ್ಲೀಯರೆನ್ಸ್ ಲೋಬೋ (ಕೋಚ್), ಡೇವಿಡ್ ಜಾನ್ (ಫಿಜಿಯೋ), ಶ್ರೀಕಾಂತ್ ಅಯ್ಯಂಗಾರ್ (ಮ್ಯಾನೇಜರ್), ಹರಿಶಂಕರ್ ನಾರಾಯಣನ್(ವೀಡಿಯೊ ವಿಮರ್ಶಕ).

English summary
India today named a 16-member hockey squad, to be led by goalkeeper Bharat Chetri, for next month's London Olympics, ending days of speculation but as expected without any major surprises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X