ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನ ಆಶ್ರಮದಲ್ಲಿ ಸಿಕ್ತು ಕಾಂಡೋಮ್,ಗಾಂಜಾ,ಮದ್ಯ

|
Google Oneindia Kannada News

Condom, Liquor found in Nityananda Ashram
ಬೆಂಗಳೂರು, ಜೂ 12: ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠದಲ್ಲಿ ಶೋಧಾನಾ ಕಾರ್ಯ ಭರದಿಂದ ಸಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿತ್ತು ಎನ್ನುವುದಕ್ಕೆ ಪ್ರಬಲ ಸಾಕ್ಷಿ ಎನ್ನುವಂತೆ ಶೋಧ ಕಾರ್ಯದ ವೇಳೆ ಆಶ್ರಮದಲ್ಲಿ ಕಾಂಡೋಮ್, ಡಿವಿಡಿಗಳು, ಎಂಪಿತ್ರೀ ಸಿಡಿಗಳು, ಗಾಂಜಾ ಮತ್ತು ಮದ್ಯದ ಬಾಟಲಿಗಳು ಸಿಕ್ಕಿವೆ.

ಮುಖ್ಯಮಂತ್ರಿ ಸದಾನಂದ ಗೌಡ ಅವರ ಆದೇಶದ ಮೇರೆಗೆ ಮಂಗಳವಾರ ( ಜೂ 12) ಬೆಳಗ್ಗೆಯಿಂದ ಆಶ್ರಮದಲ್ಲಿ ಶೋಧನಾ ಕಾರ್ಯ ನಡೆಯುತ್ತಿದ್ದು, ದಾಖಲೆಗಳನ್ನು ನಾಶ ಪಡಿಸಿದ ಕುರುಹುಗಳು ಸಿಕ್ಕಿದೆ. ರುದ್ರಾಕ್ಷಿ ಮಾಲೆಗಳು, ಮದ್ಯದ ಪಾಕೆಟ್, ಹಲವು ತಮಿಳು ಸಿನಿಮಾ ಮ್ಯಾಗಜಿನ್ ಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ನಿತ್ಯಾನಂದನ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ನಂತರ ಸಿಎಂ ಗೌಡ ಬಿಡದಿ ಆಶ್ರಮಕ್ಕೆ ಬೀಗ ಮುದ್ರೆ ಹಾಕಲು ಆದೇಶ ನೀಡಿದ್ದರು. ಆದೇಶದ ಹಿನ್ನಲೆಯಲ್ಲಿ ನಿತ್ಯಾ ಆಶ್ರಮ ವಾಸಿಗಳು ಸೋಮವಾರ (ಜೂ 11) ಆಶ್ರಮವನ್ನು ತೊರೆಯಲು ಆರಂಭಿಸಿದ್ದರು.

ಆ ವೇಳೆ ನಿತ್ಯಾ ಅನುಯಾಯಿಗಳು ಅಲ್ಲಿರುವ ದಾಖಲೆಗಳನ್ನು ನಾಶ ಮಾಡಲು ಯತ್ನಿಸಿದ್ದರು. ಈ ನಡುವೆ ಸರಕಾರ ಆದೇಶ ನೀಡಿದ್ದರೂ ಅಧಿಕಾರಿಗಳು ಆದೇಶ ತಮ್ಮ ಕೈಸೇರಿಲ್ಲ ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಶ್ರೀರಾಮ್ ರೆಡ್ಡಿ ಮತ್ತು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನುಪಮ್ ಅಗರವಾಲ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಎಫ್ಐಆರ್ ರದ್ದಿಗೆ ನಿತ್ಯಾ ಮನವಿ: ನಿತ್ಯಾನಂದನ ವಿರುದ್ದ ಹೊರಡಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಿತ್ಯಾ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಬಿಡದಿ ಪೊಲೀಸರು ನಿತ್ಯಾ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

English summary
Condom, Drugs, Liquor bottle, MP 3 CD's found in Nityananda Ashram, Bidadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X