ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡದಿ ನಿತ್ಯಾನಂದನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ

|
Google Oneindia Kannada News

Nityananda Swamiji
ಬೆಂಗಳೂರು, ಜೂ 11: ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಬೀದಿ ನಾಯಿಗಳಿಗೆ ಸಂತಾನ ಆಗದಂತೆ ಇಂಜಕ್ಷನ್ ನೀಡುತ್ತದೆ. ಹಾಗೆಯೇ ಡೋಂಗಿ ಸ್ವಾಮಿ ನಿತ್ಯಾನಂದನಿಗೆ ಸಂತಾನ ಆಗದಂತೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ನಿರ್ಮಾಪಕರಾದ ಮುನಿರತ್ನಂ ನಾಯ್ದು ಲೇವಡಿ ಮಾಡಿದ್ದಾರೆ.

ಕಾವಿ ಹಾಕಿದವರೆಲ್ಲಾ ಸ್ವಾಮೀಜಿಗಳಲ್ಲ, ನಮ್ಮ ಹಿಂದೂ ಮತ್ತು ಕನ್ನಡ ಸಂಸ್ಕೃತಿಗೆ ನಿತ್ಯಾನಂದನಿಂದ ಬಹು ದೊಡ್ಡ ಗಂಡಾಂತರವಿದೆ. ನಿತ್ಯನ ಆಶ್ರಮದಲ್ಲಿ ನಡೆಯಬಾರದ ದಂಧೆಗಳು ನಡೆಯುತ್ತಿವೆ ಸರಕಾರ ಈ ಬಗ್ಗೆ ಸೂಕ್ತ, ದಿಟ್ಟ ನಿರ್ಧಾರ ತುರ್ತಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಮುನಿರತ್ನಂ ಸರಕಾರವನ್ನು ಆಗ್ರಹಿಸಿದ್ದಾರೆ.

ಹಿಂದೂ ಸಂಪ್ರದಾಯಕ್ಕೆ ವಿರುದ್ದವಾಗಿ ಹೆಣ್ಣು ಮಕ್ಕಳನ್ನು ಅಲ್ಲಿ ಬಳಸಿಕೊಳ್ಳಲಾಗುತ್ತದೆ. ಮಾಡಬಾರದ ಅಕ್ರಮಗಳು ನಿತ್ಯನ ಆಶ್ರಮದಲ್ಲಿ ನಡೆಯುತ್ತಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಅಧಿಕಾರಿಗಳು, ಪೊಲೀಸರು ಮತ್ತು ಸರಕಾರ ಇನ್ನಾದರೂ ನಿತ್ಯಾನಂದನನ್ನು ತನ್ನ ವಶಕ್ಕೆ ತೆಗೆದುಕೊಳ್ಳದಿದ್ದರೆ ಇಡೀ ಸಮಾಜ ತಲೆತಗ್ಗಿಸುವಂತ ಕಾರ್ಯಗಳು ಆತ ಮುಂದುವರಿಸಿ ಕೊಂಡುಹೋಗುತ್ತಾನೆ ಎಂದು ಮುನಿರತ್ನಂ ಸರಕಾರವನ್ನು ಎಚ್ಚರಿಸಿದ್ದಾರೆ.

ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ದೊಡ್ಡ ಸ್ಥಾನವಿದೆ. ಮಹಿಳಾ ಭಕ್ತಾದಿಗಳನ್ನು ತನ್ನ ಯಾವ ಕೆಲಸಕ್ಕಾಗಿ ಆತ ಬಳಸಿಕೊಳ್ಳುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈತನನ್ನು ಈ ಕೂಡಲೇ ಬಂಧಿಸಿ ಗಡೀಪಾರು ಮಾಡುವುದೇ ಸರಿಯಾದ ಕ್ರಮ ಎಂದು ಮುನಿರತ್ನಂ ಜನಶ್ರೀ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಮ್ಮ ರಾಜ್ಯದ ಧಾರ್ಮಿಕ ಮುಖಂಡರು ನಿತ್ಯಾನಂದನ ವಿರುದ್ದ ಹೋರಾಟಕ್ಕೆ ಇಳಿಯಬೇಕಾಗಿದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಪ್ರಶ್ತ್ನೆ ನಿತ್ಯಾನಿಂದ ಇದಕ್ಕೆ ಧಕ್ಕೆಯಾಗುತ್ತಿದೆ. ಹಾಗಾಗಿ ಈ ಕೂಡಲೇ ಧಾರ್ಮಿಕ ಮುಖಂಡರು ಈತನ ವಿರುದ್ದ ಹೋರಾಟಕ್ಕೆ ದುಮುಖ ಬೇಕಾಗಿದೆ.

ನನ್ನ ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳಿಗೆ ಅವಮಾನ ಆಗಿದೆ ಎಂದು ಹಿಂದೂಪರ ಸಂಘಟನೆಗಳು, ಸ್ವಾಮೀಜಿಗಳು ಹೋರಾಟಕ್ಕೆ ಇಳಿದರು. ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ತಪ್ಪು ಕಾಣಿಕೆ ಹಾಕಿಸಲಾಯಿತು. ಈಗ ನಿತ್ಯಾನಂದನಿಂದ ಹಿಂದೂ ಸಂಸ್ಕೃತಿಗೆ ಅವಮಾನ ಆಗುತ್ತಿದ್ದರೂ ಯಾಕೆ ಸ್ವಾಮೀಜಿಗಳು ಮೌನವಾಗಿದ್ದಾರೆ.

ಯಾಕೆ ಸ್ವಾಮೀಜಿಗಳಿಗೆ ಈಗ ಹಿಂದೂ ಸಂಸ್ಕೃತಿಗೆ ನಿತ್ಯಾನಂದನಿಂದ ಅಪಾಯ ಕಾದಿದೆ ಎಂದು ಅನಿಸುವುದಿಲ್ಲವೇ. ಯಾಕೆ ಸ್ವಾಮೀಜಿಗಳು ಈಗ ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿಲ್ಲ ಎಂದು ಪರೋಕ್ಷವಾಗಿ ಉಡುಪಿ ಪೇಜಾವರ ಮತ್ತು ಶಿರೂರು ಸ್ವಾಮೀಜಿಗಳಿಗೆ ಮುನಿರತ್ನಂ ಸವಾಲೆಸೆದಿದ್ದಾರೆ.

English summary
Congress Corporator and Producer Munirathnam Naidu said Government immediately take serious action against Nityananda Swamy. He is also asked why the Swamijis are silent on this issue now?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X