ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ 2012: ಪೋಲೆಂಡ್ ವಿರುದ್ಧ ಗ್ರೀಸ್ ಮೇಲುಗೈ

By Mahesh
|
Google Oneindia Kannada News

ವಾರ್ಸಾ, ಜೂ.8: ಯುರೋ 2012 ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪೋಲೆಂಡ್ ತಂಡ, 2004ರ ಚಾಂಪಿಯನ್ ಗ್ರೀಸ್ ತಂಡವನ್ನು ಎದುರಿಸಲಿದೆ. ಫೀಫಾ ಪಟ್ಟಿಯಲ್ಲಿ ಕಡಿಮೆ ಶ್ರೇಯಾಂಕ ಹೊಂದಿರುವ ಪೋಲೆಂಡ್ ಗೆ ತವರಿನ ಬೆಂಬಲ, ನಾಯಕ ಜಾಕುಬ್ 'ಕೂಬಾ' ಬ್ಲಾಸ್ಜ್ಸ್ ಸಿಜ್ಕೊವ್ ಸ್ಕಿ, ರಾಬರ್ಟ್ ಲೆವನ್ದೋಸ್ಕಿ ಹಾಗೂ ಲುಕಾಸ್ಜ್ ಪಿಸ್ಜ್ ಕಸ್ಜೆಕ್ ಆಟದ ಮೂಲಕ ಎಂಟರ ಘಟ್ಟದ ಕನಸು ಕಾಣುತ್ತಿದೆ. ಎರಡನೇ ಪಂದ್ಯದಲ್ಲಿ ರಷ್ಯಾ ವಿರುದ್ಧ ಜೆಕ್ ಗಣರಾಜ್ಯ ಜೂ.9 ರ ಮಧ್ಯರಾತ್ರಿ 12.15ಕ್ಕೆ ನಡೆಯಲಿದೆ.

ರಣತಂತ್ರ: ಪೋಲೆಂಡ್ ಹೋರಾಟ ಮನೋಭಾವ 4-2-3-1 ರಚನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಡುಡ್ಕಾ ರಕ್ಷಣಾ ಪಡೆ ಹಾಗೂ ಮಿಡ್ ಫೀಲ್ಡ್ ಎರಡೂ ಕಡೆ ಕಾಣಿಸಿಕೊಳ್ಳಲಿದ್ದಾರೆ. ಪೊಲಾಂಸ್ಕಿ ಮಿಡ್ ಫೀಲ್ಡ್ ನಲ್ಲಿ ಆಧಾರವಾಗಲಿದ್ದಾರೆ. ಮುಂಪಡೆಯಲ್ಲಿ ಲೆವಡೊವ್ ಸ್ಕಿ, ರೈಬಸ್, ಕೂಬಾ ಹಾಗೂ ಒಬ್ರನಿಯಾಕ್ ಆಡಲಿದ್ದಾರೆ. ನಾಯಕ ಕೂಬಾ ಹಾಗೂ ಒಬ್ರಾನಿಯಾಕ್ ಆಟದ ಮೇಲೆ ಪಂದ್ಯ ನಿಂತಿದೆ. ಬೊಮಿಸ್ಕ್, ಪೆರ್ಕೂಸ್, ವಾಸ್ಲ್ಲೆಸ್ಕಿ ಹಾಗೂ ಪಿಸ್ಜ್ ಕೆಸ್ಜೆಕ್ ಉತ್ತಮ ರಕ್ಷಣಾ ಪಡೆಯಾಗಲಿದ್ದಾರೆ.

ಗ್ರೀಸ್ ತಂಡ 4-3-3-1 ರಚನೆಯೊಂದಿಗೆ ಕಣಕ್ಕಿಳಿಯಲಿದೆ. ನಾಯಕ ಮಿಡ್ ಫೀಲ್ಡರ್ ಗಿರ್ಗೊಸ್ ಕರಗೌನಿಸ್ ಜೊತೆಗೆ ಗಳಾದ ಗಿಯೊರ್ ಗೊಸ್ ಫೊಟಕಿಸ್, ಕೊಸ್ತಾಸ್ ಕಟ್ಸೌರನಿಸ್, ಗ್ರಿಗೊರಿಸ್ ಮಾಕೊಸ್ ಮಿಡ್ ಫೀಲ್ಡ್ ಕಾಯ್ದುಕೊಳ್ಳಲಿದ್ದಾರೆ. ಥಿಯೊಫನಿಸ್ ಎಕಾಸ್, ಜಿಯೊರ್ ಗಿಯಸ್ ಸಮಾರಸ್ ಹಾಗೂ ಡಿಮಿಟ್ರಿಸ್ ಸಲ್ಪಿಂಗಿಡಿಸ್ ಮುಂಪಡೆ ಯೊಂದಿಗೆ ಗ್ರೀಸ್ ಕಣಕ್ಕಿಳಿಯಲಿದೆ. ಕೊಸ್ಟಾಸ್ ಚಾಲ್ಕಿಯಸ್ ಗೋಲ್ ಕೀಪರ್ ಆಗಿ, ಜಿಯೊರ್ ಗಿಯಾಸ್ ಜವೆಲ್ಲಸ್, ವಸಿಲಿಸ್ ಟೊತೊ ಸಿಡಿಸ್, ಅವರಾಮ್ ಪಪಡೊಪೌಲೊಸ್, ಸ್ಟೇಲೊಯೊಸ್ ಮೇಲ್ ಜೊಸ್ ರಕ್ಷಣಾ ಪಡೆ ಯಲ್ಲಿ ಆಡಲಿದ್ದಾರೆ.

ತಂಡಗಳ ಬಲ: ಪೋಲೆಂಡ್ ಕೊಚ್ ಸ್ಮುಡ ಅವರು ಆರ್ಟುರ್ ಬೊರುಕ್ ಬದಲಿಗೆ ವೊಜ್ಸಿಕ್ ಸ್ಕೆಸ್ನಿಯನ್ನು ಗೋಲ್ ಕೀಪರ್ ಆಗಿ ಕಣಕ್ಕಿಳಿಸುವುದು ಹೆಚ್ಚಿನ ಬಲನೀಡಲಿದೆ. ಸ್ಕೆಸ್ನಿಗೆ ಆರ್ಸೆನಲ್ ಜೊತೆ ಆಡಿದ ಅನುಭವ ಉಪಯೋಗಕ್ಕೆ ಬರಲಿದೆ. ಉಳಿದಂತೆ, ಡೊರ್ಟ್ಮುಂಡ್ ನ ತ್ರಿವಳಿಗಳಾದ ಕೂಬಾ, ಲೆವಾಂಡೋವ್ ಸ್ಕಿ ಹಾಗೂ ಪಿಸ್ಜ್ ಜೆಕ್ ಆಟದ ಮೇಲೆ ಪೋಲೆಂಡ್ ಭವಿಷ್ಯ ನಿರ್ಧಾರವಾಗಲಿದೆ. ಒಬ್ರಾನಿಯಾಕ್ ಸಿಡಿದರೆ ಗೋಲುಗಳಿಗೆ ಭರವಿರುವುದಿಲ್ಲ.

ಯುರೋ 2012: ತಂಡಗಳು | ವೇಳಾಪಟ್ಟಿ | ಗುಂಪು | ಫಲಿತಾಂಶ|

ಗ್ರೀಸ್ ಕೂಡಾ ಆಕ್ರಮಣಕಾರಿ ಆಟವನ್ನು ಮುಂದುವರೆಸಲಿದೆ. ಎಕಾಸ್, ಕರಕೌನಿಸ್ ಅನುಭವದ ಮೇಲೆ ಗ್ರೀಸ್ ಅವಲಂಬಿತವಾಗಿದೆ.ಸಮಾರಸ್ ಹಾಗೂ ಡಿಮಿಟ್ರಿಸ್ ಸಲ್ಪಿಂಗಿಡಿಸ್ ಕೂಡಾ ಉತ್ತಮ ಆಟ ನೀಡುವ ಮೂಲಕ ನಾಯಕನಿಗೆ ಆಸರೆಯಾಗಲಿದ್ದಾರೆ.

ತಂಡಗಳ ನ್ಯೂನತೆ: ಪೋಲೆಂಡ್ ಕೂಡಾ ರಕ್ಷಣಾ ಪಡೆ ಮೇಲ್ನೊಟಕ್ಕೆ ಉತ್ತಮವಾಗಿ ಕಂಡರೂ ಉತ್ತಮ ಎದುರಾಳಿಗಳ ಮೇಲೆ ಕೈ ಚೆಲ್ಲಿ ನಿಲ್ಲುವ ನಿದರ್ಶನಗಳಿದೆ. ಚಾಲ್ಕಿಸ್ ಗೋಲ್ ಕೀಪಿಂಗ್ ಮೇಲೆ ಪೋಲ್ಯಾಂಡ್ ಆಟ ನಿಂತಿದೆ. ಗ್ರೀಸ್ ಆಕ್ರಮಣಕಾರಿ ಆಟವೇ ಮುಳುವಾಗಬಲ್ಲದು, ಮಿಡ್ ಫೀಲ್ಡ್ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಿಡ್ ಫೀಲ್ಡ್ ಒಡೆದು ಮುನ್ನುಗ್ಗುವ ಮಂತ್ರವನ್ನು ಪೋಲ್ಯಾಂಡ್ ಕೂಡಾ ಜಪಿಸುತ್ತಿದೆ.

ಕೋಚ್ ಸ್ಮುಡ ಜರ್ಮನಿಯ ಡಾರ್ಟುಂಡ್ ನಲ್ಲಿನ ತಂತ್ರಗಳನ್ನು ಇಲ್ಲಿ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಆಟಗಾರರ ಮೇಲೆ ಕಠಿಣ ನಿಯಮಗಳನ್ನು ಹೇರಿರುವ ಸ್ಮುಡಗೆ ಗ್ರೀಸ್ ವಿರುದ್ಧ ಭಾರಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ಯೋಜನೆಯಿದೆ. ಆದರೂ, ಮೊದಲ ಪಂದ್ಯದಲ್ಲಿ ಗ್ರೀಸ್ ಮೇಲುಗೈ ಸಾಧಿಸುವ ಲಕ್ಷಣಗಳಿದೆ. ಜೂ.8 ರಂದು ಭಾರತೀಯ ಕಾಲಮಾನ ಪ್ರಕಾರ 9.30ಕ್ಕೆ ರಾತ್ರಿ ನಿಯೋ ಸ್ಫೋರ್ಟ್ ನಲ್ಲಿ ತಪ್ಪದೇ ಪಂದ್ಯ ವೀಕ್ಷಿಸಿ.. ಯುರೋ ಕಪ್ 2012 ನಿಲ್ಲಿಸುವಂತೆ ಬೆತ್ತಲೆ ಪ್ರತಿಭಟನೆ ನಡೆಸುತ್ತಿರುವ ಫೆಮೆನ್ ಮಹಿಳಾ ಸಂಘಟನೆಗಳ ದಾಳಿ ನಡೆಸಿದರೂ ಅಚ್ಚರಿಯೇನಿಲ್ಲ.

English summary
Euro 2012 : Euro 2012 will start with a bang on June 8 as host Poland take on Euro 2004 Champions Greece in the opening encounter. Greece hope to repeat the heroics of 2004 and begin the Euro 2012 with the good note. Poland rely on home advantage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X