ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ಕೈದಿಗಳಿಗೂ ಸಂಭೋಗ ಅವಕಾಶ ಒದಗಿಸಬೇಕು

By Srinath
|
Google Oneindia Kannada News

allow-physical-relations-in-prison-punjab-dgp-jail
ಪಂಜಾಬ್, ಜೂನ್ 7: ಹೌದು ಜೈಲಿನಲ್ಲಿ ಬಂಧಿಯಾಗುವ ಕೈದಿಗಳಿಗಾಗಿ ಸಂಭೋಗಕ್ಕೆ ಮುಕ್ತ ಅವಕಾಶ ಒದಗಿಸಬೇಕು ಎಂಬ ಉಚಿತ ಸಲಹೆ ಕೇಳೀಬಂದಿದೆ. ಯಾರಪ್ಪಾ ಇಂತಹ ಘನಂಧಾರಿ ಸಲಹೆ ಕೊಟ್ಟವರು ಎಂದು ಕಿಡಿಕಾರಬೇಡಿ. ಏಕೆಂದರೆ ಇಂತಹ ಸಲಹೆ ನೀಡಿರುವವರು ಪಂಜಾಬಿನ DGP (Jail) ಶಶಿಕಾಂತ್ ಎಂಬ ಉನ್ನತಾಧಿಕಾರಿ.

'ಜೈಲು ಬಂಧಿಗಳಿಗೆ ದೈಹಿಕ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು. 'ಅದಕ್ಕಾಗಿ' ಜೀವನ ಸಂಗಾತಿಗಳನ್ನು ಸಂಧಿಸಲು ಅವರಿಗೆ ಅವಕಾಶ ನೀಡಬೇಕು. ಸೆಕ್ಸ್ ಎಂಬುದು ಮನುಷ್ಯ ನೈಸರ್ಗಿಕ ಅಗತ್ಯ. ಹಾಗಾಗಿ, ಜೈಲುಗಳಲ್ಲಿ ಸಂಭೋಗಕ್ಕೆ ಅವಕಾಶ ನೀಡುವುದು ಮಹಾಪರಾಧವೇನೂ ಅಲ್ಲ' ಎಂದು DGP ಶಶಿಕಾಂತ್ ಸಾಹೇಬರು ಅಪ್ಪಣೆ ಕೊಟ್ಟಿದ್ದಾರೆ.

ಅಧಿಕಾರ ಸಹಜವಾಗಿ ಇಲ್ಲಿನ ಕೇಂದ್ರೀಯ ಜೈಲು ವೀಕ್ಷಣೆಗೆ ತೆರಳಿದ್ದಾಗ ಸಾಹೇಬರು ಈ ಸಲಹೆ ನೀಡಿದ್ದಾರೆ. ಜೈಲುಹಕ್ಕಿಗಳ ಸಂಗಾತಿಗಳಿಗೆ ಕಾಲನುಕಾಲಕ್ಕೆ ಸೌಕರ್ಯ ಒದಗಿಸಬೇಕು ಎಂದು ಹೇಳಿರುವ DGP ಶಶಿಕಾಂತ್ ಸಾಹೇಬರು, ಆ ಮಹತ್ಕಾರ್ಯಕ್ಕೆ ತಮ್ಮ ಕಾಣಿಕೆಯನ್ನೂ ಸಲ್ಲಿಸಿದ್ದಾರೆ. ಏನಪಾ ಅಂದರೆ ಕಪೂರ್ತಲಾ ಜೈಲು ಕೇಂದ್ರದಲ್ಲಿ ವಸತಿ ಗೃಹಗಳನ್ನೂ ನಿರ್ಮಿಸಿಕೊಟ್ಟಿದ್ದಾರೆ. ಅಂದಹಾಗೆ DGP ಶಶಿಕಾಂತ್ ಸಾಹೇಬರು ಇದೇ ಜೂನ್ 30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಮಾದಕ ವ್ಯಸನ ಮುಕ್ತ ಕೇಂದ್ರಗಳು, ಕೈದಿಗಳು ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕ ಕೇಂದ್ರಗಳನ್ನು ರಾಜ್ಯಾದ್ಯಂತ ಇರುವ 30 ಜೈಲುಗಳಲ್ಲಿ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿ, DGP ಶಶಿಕಾಂತ್ ಸಾಹೇಬರು ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ.

'ಉಳ್ಳವರು ಶಿವಾಲಯವ ಕಟ್ಟಿಸುವರಯ್ಯಾ ನಾನೇನು ಮಾಡಲಿ' ಎಂಬಂತೆ ಹಣ ಬಲ, ತೋಲ್ಬಲವಿರುವ ಕೈದಿಗಳು ದೇಶದ ಅನೇಕ ಜೈಲುಗಳಲ್ಲಿ ವಯಾಗ್ರಾ, ಕಾಂಡೋಮ್ ಗಳನ್ನು ಯಥೇಚ್ಚವಾಗಿ ಬಳಸುತ್ತಾರೆ ಎಂಬುದು ಗುಪ್ತ ಸಂಗತಿಯೇನೂ ಅಲ್ಲ.

English summary
Jail inmates should be allowed to physical relations with their life partners. Sex is a natural need of humans. There is nothing wrong in allowing sex in jail. This was the opinion of Punjab DGP (Jail) Shashikant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X