ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಚರ್ಚಲ್ಲಿ ವಿದೇಶಿಯರಿಗೆ ಡ್ರೆಸ್ ಕೋಡ್

By Prasad
|
Google Oneindia Kannada News

Dress code for foreigners at St Philomena Church in Mysore
ಮೈಸೂರು, ಜೂ. 7 : ಅನೇಕ ಹಿಂದೂ ದೇವಸ್ಥಾನಗಳಲ್ಲಿ ಗಂಡಸರು ಅಂಗಿ ಧರಿಸುವುದನ್ನು, ಹೆಂಗಸರು ಚೂಡಿದಾರ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಗುರುದ್ವಾರಾಗಳಲ್ಲಿ ಮೊಣಕಾಲು ಕಾಣುವಂತೆ ಉಡುಪು ಧರಿಸಿ ಬರುವುದು ನಿಷಿದ್ಧ. ಈಗ ಮೈಸೂರಿನ ಚರ್ಚ್ ಕೂಡ ವಿದೇಶಿಯರಿಗಾಗಿ ಡ್ರೆಸ್ ಕೋಡ್ ರೂಪಿಸಲಿದೆ.

ಮೈಸೂರಿನಲ್ಲಿರುವ ಐತಿಹಾಸಿಕ ಸೇಂಟ್ ಫಿಲೋಮಿನಾ ಚರ್ಚಿಗೆ ವಿದೇಶಿಯರು ಸೇರಿದಂತೆ ಸಹಸ್ರಾರು ಪ್ರವಾಸಿಗರು ಪ್ರತಿದಿನ ಬರುತ್ತಾರೆ. ಆದರೆ, ವಿದೇಶಿಯರು ಅಸಭ್ಯವಾಗಿ ಉಡುಪು ಧರಿಸಿ ಬರುವುದರ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲು ಚರ್ಚ್‌ನ ಆಡಳಿತ ವರ್ಗ ಮುಂದಾಗಿದೆ.

"ಇದು ಪ್ರಾರ್ಥನಾ ಸ್ಥಳ, ಹೇಗೆಂದ ಹಾಗೆ ಉಡುಪು ಧರಿಸಿ ಬರಲು ಇದೇನು ಮಾರುಕಟ್ಟೆಯಲ್ಲ" ಎಂದು ಡ್ರೆಸ್ ಕೋಡ್‌ಗೆ ಅನುಮತಿ ನೀಡಿರುವ ಮೈಸೂರಿನ ಬಿಷಪ್ ಅವರು ಅಸಹ್ಯವಾಗಿ ಉಡುಪಿ ಧರಿಸಿ ಬರುತ್ತಿರುವ ವಿದೇಶಿಯರ ಬಗ್ಗೆ ಖಾರವಾಗಿ ನುಡಿದಿದ್ದಾರೆ. ಚರ್ಚ್‌ಗಳಲ್ಲಿ ಡ್ರೆಸ್ ಕೋಡ್ ರೂಪಿಸುತ್ತಿರುವುದು ಇದೇ ಮೊದಲು.

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಕಾರದೊಂದಿಗೆ 1936ರಲ್ಲಿ ನಿರ್ಮಿತವಾದ ಈ ಐತಿಹಾಸಿಕ ರೋಮನ್ ಕ್ಯಾಥೊಲಿಕ್ ಚರ್ಚಿಗೆ ದಿನಂಪ್ರತಿ 4 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಿದೇಶಿಯರು ಮೈದೋರುವಂತೆ ಅಸಭ್ಯವಾಗಿ ಡ್ರೆಸ್ ಧರಿಸಿ ಬರುತ್ತಿರುವುದು ಸ್ಥಳೀಯ ನಿವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಹಾಗೆಯೆ, ಚರ್ಚಿನಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಸಾರ್ವಜನಿಕವಾಗಿ ಅಪ್ಪಿಕೊಳ್ಳುವುದು ಮತ್ತು ತುಟಿಗೆ ತುಟಿ ಒತ್ತಿ ಮುತ್ತು ನೀಡುವುದು ಕೂಡ ಅನೇಕರ ಆಕ್ಷೇಪಕ್ಕೆ ಕಾರಣವಾಗಿತ್ತು.

ಭಕ್ತಾದಿಗಳ ಪ್ರತಿಕ್ರಿಯೆಗೆ ಸ್ಪಂದಿಸಿರುವ ಚರ್ಚ್‌ನ ಪಾದ್ರಿ ಕೆ.ಎ. ವಿಲಿಯಂ ಅವರು, "ವಿದೇಶಿಯರ ಅಸಭ್ಯ ದಿರಿಸುಗಳ ಬಗ್ಗೆ ಮತ್ತು ಅಸಹ್ಯ ವರ್ತನೆಗಳ ಬಗ್ಗೆ ಅನೇಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಚರ್ಚ್‌ನ ಸಮಿತಿ ಸದಸ್ಯರು ಮತ್ತು ಮೈಸೂರಿನ ಹಿರಿಯ ಧರ್ಮಾಧಿಕಾರಿಗಳ ಜೊತೆ ಚರ್ಚಿಸಿದ ನಂತರ ಡ್ರೆಸ್ ಕೋಡ್ ರೂಪಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ. ಡ್ರೆಸ್ ಕೋಡ್ ಇದ್ದರೂ ಅಸಭ್ಯವಾಗಿ ದಿರಿಸು ಧರಿಸಿ ಬರುವವರನ್ನು ಚರ್ಚಿನಿಂದ ಹೊರಹೋಗಲು ಸೂಚಿಸಲಾಗುವುದು ಎಂದು ಚರ್ಚ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೇರಿ ಅವರು ತಿಳಿಸಿದ್ದಾರೆ.

ಹಿಂದೂ ದೇವಸ್ಥಾನದಲ್ಲಿಯೂ ಉಡುಪು ನೀತಿ ಬೇಕೆ? : ಡ್ರೆಸ್ ಕೋಡನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಕೆಲ ಮಠಗಳು ಇತ್ತೀಚಿನ ದಿನಗಳಲ್ಲಿ ಇದನ್ನು ಸಡಿಲಿಸಿವೆ. ಗರ್ಭ ಗುಡಿ ಪ್ರವೇಶಿಸಲು ಯಾರನ್ನೂ ಬಿಡದಿದ್ದ ಕೆಲ ದೇವಸ್ಥಾನಗಳು ಕೈ ಬೆಚ್ಚಗಾಗಿಸಿದರೆ ನೇರವಾಗಿ ಗರ್ಭಗುಡಿ ಪ್ರವೇಶಿಸಿ ಆರತಿ ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಡುತ್ತಿವೆ. ಇನ್ನು ಅನೇಕ ದೇವಸ್ಥಾನಗಳಲ್ಲಿ ಯುವತಿಯರು ಜೀನ್ಸ್ ಧರಿಸಿ ಬಂದರೂ ಅಷ್ಟೇ, ಮಿನಿ ಧರಿಸಿ ಬಂದರೂ ಅಷ್ಟೇ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿವೆ. ಕರ್ನಾಟಕದ ಕೆಲ ಮಠಗಳನ್ನು ಹೊರತುಪಡಿಸಿದರೆ ಯಾವ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಅನ್ನುವುದು ಇಲ್ಲವೇ ಇಲ್ಲ. ಹಿಂದೂ ದೇವಸ್ಥಾನಗಳಲ್ಲಿಯೂ ಡ್ರೆಸ್ ಕೋಡ್ ತರಬೇಕೆ?

English summary
Historical St Philomena church in Mysore has decided to bring dress code for foreign tourists in view of complaints received about indecent dressing by foreigners. Mysore Bishop has said church is a place of worship and not market. Should this be implemented in Hindu temples too?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X