ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಪಾತಕ್ಕಾಗಿ ಮಹಿಳೆಯರ ಪ್ರತಿಭಟನೆ

By Mahesh
|
Google Oneindia Kannada News

Abortion protest, Turkey
ಇಸ್ತಾನ್ ಬುಲ್, ಜೂ. 5: ಗರ್ಭಪಾತ ವಿರೋಧಿ ಆಂದೋಲನ ಕೇಳಿರುತ್ತೀರಾ ಆದರೆ, ಮಹಿಳೆಯರೇ ಗರ್ಭಪಾತಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಿದ್ದು ಎಲ್ಲಿಯಾದರು ಉಂಟೇ? ಎಂಬ ಪ್ರಶ್ನೆಗೆ ಟರ್ಕಿ ಮಹಿಳೆ ಉತ್ತರ ನೀಡುತ್ತಾರೆ.

ಪ್ರಧಾನಿ ತಯ್ಯಿಪ್ ಎರ್ಡೋಗಾನ್ ಅವರು ಗರ್ಭಪಾತಕ್ಕೆ ನಿರ್ಬಂಧ ಹೇರುವ ಯೋಜನೆಯನ್ನು ಪ್ರಕಟಿಸಿದ ಮೇಲೆ ಸಾವಿರಾರು ಮಹಿಳೆಯರು ಕಳೆದ ಮೂರು ದಿನದಿಂದ ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ. ಇದು ಈವರೆಗೆ ಟರ್ಕಿಯಲ್ಲಿ ನಡೆದ ಅತ್ಯಂತ ಬೃಹತ್ ಪ್ರತಿಭಟನೆ ಎಂದು ಹೇಳಲಾಗಿದೆ.

ಇಸ್ತಾಂಬುಲ್‌ನ ಕಡಿಕೋಯ್ ಜಿಲ್ಲೆಯ ಚೌಕವೊಂದರಲ್ಲಿ 20 ರಿಂದ 60 ವರ್ಷ ವಯಸ್ಸಿನ ಸುಮಾರು 3,000 ದಿಂದ 5,000 ಮಹಿಳೆಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. " My body, my choice" ಹಾಗೂ 'I am a woman not a mother, don't touch my body' ಎಂದು ಬರೆದ ಪ್ಲಕಾರ್ಡ್ ಗಳನ್ನು ಹಿಡಿದಿದ್ದ ಮಹಿಳೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಹೆಚ್ಚಿನ ಮಹಿಳೆಯರ ಜೊತೆ ಅವರ ಗಂಡಂದಿರು ಅಥವಾ ಗೆಳೆಯರು ಸಾಥ್ ನೀಡಿದ್ದಾರೆ. 'ನನ್ನ ಪ್ರಿಯತಮೆಯ ದೇಹ, ನನ್ನ ಪ್ರಿಯತಮೆಯ ಆಯ್ಕೆ' ಎಂದು ಬರೆದ ಪ್ಲಕಾರ್ಡ್ ಪುರುಷನೊಬ್ಬ ಹಿಡಿದಿದ್ದ.

ಪ್ರಧಾನಿ ರೆಸೆಪ್ ತಯ್ಯಿಪ್ ಎರ್ಡೊಗಾನ್ ಗರ್ಭಪಾತವನ್ನು 'ಕೊಲೆ' ಎಂಬುದಾಗಿ ಬಣ್ಣಿಸಿದ್ದಾರೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿದ ಗರ್ಭ ಧರಿಸಿದ ನಾಲ್ಕು ವಾರಗಳ ಬಳಿಕ ಗರ್ಭಪಾತ ಮಾಡುವುದನ್ನು ನಿಷೇಧಿಸುವ ಶಾಸನವೊಂದನ್ನು ಅವರ ಸರಕಾರ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.

'ಮಗು ಹೇರಬೇಕೋ ಬೇಡವೋ ಎಂದು ನಿರ್ಧರಿಸುವ ಹಕ್ಕು ನಮಗಿದೆ. ಇದನ್ನು ಸರ್ಕಾರ ಹೇಳಿದಂತೆ ಕೇಳಲ್ಲ ಆಗುವುದಿಲ್ಲ. ನನ್ನ ದೇಹ ನನ್ನ ಆಯ್ಕೆ' ಎಂದು ಐದು ವರ್ಷದ ಹೆಣ್ಣು ಕೂಸಿನ ತಾಯಿ ಬಹರ್ ಗುಲರ್ ಹೇಳಿದ್ದಾರೆ.

ಪ್ರಸಕ್ತ ಟರ್ಕಿಯಲ್ಲಿ ಗರ್ಭ ಧರಿಸಿದ 10 ವಾರಗಳವರೆಗೆ ಗರ್ಭಪಾತ ನಡೆಸುವುದು ಕಾನೂನು ಬದ್ಧವಾಗಿದೆ. 'ದೇಹದಲ್ಲಿರುವ ಭ್ರೂಣವನ್ನು ತೆಗೆಯಲು ಯಾರಿಗೂ ಹಕ್ಕಿಲ್ಲ' ಎಂದು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.

ಟರ್ಕಿಯಲ್ಲಿ ಸಿಸೇರಿಯನ್ ಜನನಗಳು ಹೆಚ್ಚಾಗುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಮುಸ್ಲಿಂ ಜನಾಂಗ ಅಧಿಕವಾಗಿರುವ ರಾಷ್ಟ್ರದಲ್ಲಿ ಸಿಸೇರಿಯನ್ ಆದ ಮಹಿಳೆ 2 ಅಥವಾ 3 ಮಕ್ಕಳನ್ನು ಮಾತ್ರ ಹೆರುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿದೆ.

ಅದರೆ, ಗರ್ಭಪಾತ ಪ್ರಮಾಣ ಯುರೋಪ್ ನಲ್ಲಿ ಪ್ರತಿ 1000 ಮಹಿಳೆಯರಿಗೆ ಶೇ 23ರಷ್ಟಿದ್ದರೆ,ಟರ್ಕಿಯಲ್ಲಿ ಶೇ 14.8ರಷ್ಟಿರುವುದು ಶುಭ ಸಂಗತಿ. ಗರ್ಭಪಾತ ನಮ್ಮ ಹಕ್ಕು ಎಂದು ಟರ್ಕಿ ಮಹಿಳೆಯರು ಕೂಗುತ್ತಿರುವುದು ಸದ್ಯಕ್ಕೆ ಭಾರತಕ್ಕೆ ಇನ್ನೂ ಕೇಳಿಸಿಲ್ಲ.

English summary
Turkish Woman Protest over Abortion Law proposed by PM Tayyip Erdogan. Women of all ages held banners with slogans including 'My body, my choice' and 'I am a woman not a mother, don't touch my body'. Interestingly abortion is legal in Turkey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X