ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಐಎಡಿಬಿ ಹಗರಣ: ಯಡಿಯೂರಪ್ಪ ಮೇಲೆ ಚಾರ್ಜ್ ಶೀಟ್

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಮೇ.31: ಕೆಐಎಡಿಬಿ ಹಗರಣದಲ್ಲಿ ಜಾಮೀನು ಪಡೆದು ಆರಾಮವಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಹಾಗೂ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಗುರುವಾರ(ಮೇ.31) ಸಣ್ಣ ಶಾಕ್ ತಗುಲಿದೆ.

ಕೆಐಎಡಿಬಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಹೊತ್ತಿರುವ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಲೋಕಾಯುಕ್ತ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ.

ದೋಷಾರೋಪ ವರದಿಯಲ್ಲಿ ಹೇಳಿರುವಂತೆ, 23 ಎಕರೆ ಉದ್ಯಮಿ ಅಲಂಪಾಷಾ ಅವರಿಗೆ ನೀಡಲಾಗಿತ್ತು. ಇದರಲ್ಲಿ KIADBಗೆ ಸೇರಿದ 20 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಕೈಗಾರಿಕಾ ಭೂಮಿಗೆ ತೆರಿಗೆ ಮನ್ನಾ ಮಾಡಿ, ಯಡಿಯುರಪ್ಪ ಅವರು ತಮ್ಮ ಅಪ್ತರಿಗ ಹಂಚಿಕೆ ಮಾಡಿದ್ದಾರೆ.

ಸಿಎಂ ಆಗಿದ್ದ ಯಡಿಯೂರಪ್ಪ ಅಂದಿನ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಭೂಮಿಯನ್ನು ಅಕ್ರಮವಾಗಿ ಭೂಮಿಯನ್ನು ಪಡೆದಿದ್ದಾರೆ. ಈ ಪ್ರಕರಣದಲ್ಲಿ ಹಾಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಆರೋಪಿಯನ್ನಾಗಿಸಬೇಕು ಎಂದು ಉದ್ಯಮಿ ಅಲಂಪಾಷಾ ದೂರು ಸಲ್ಲಿಸಿದ್ದರು.

ಸುಮಾರು ಆರು ತಿಂಗಳ ಹಿಂದಿನ ಅರ್ಜಿಯನ್ನು ಕೈಗೆತ್ತಿಕೊಂಡ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ ದೋಷಾರೋಪಣ ಪಟ್ಟಿಯನ್ನು ಸ್ವೀಕರಿಸಿದೆ. ಆದರೆ, ಹಾಲಿ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಲೋಕಾಯುಕ್ತ ಪೊಲೀಸರು ಸಮ್ಮತಿ ಸೂಚಿಸದೆ, ಪಟ್ಟಿಯಿಂದ ನಿರಾಣಿ ಹೆಸರು ಕೈ ಬಿಟ್ಟಿದೆ.

ಜೂನ್ 8ಕ್ಕ ಮುಂದಿನ ವಿಚಾರಣೆ ನಡೆಯಲಿದ್ದು, ಮುರುಗೇಶ್ ನಿರಾಣಿ ಅವರ ಹೆಸರನ್ನು ಕೂಡಾ ಚಾರ್ಚ್ ಶೀಟ್ ನಲ್ಲಿ ಸೇರಿಸುವಂತೆ ಕೋರಿ ಉದ್ಯಮಿ ಅಲಂಪಾಷಾ ಅವರು ಮತ್ತೊಂದು ಮನವಿಯನ್ನು ಕೋರ್ಟಿನಲ್ಲಿ ಸಲ್ಲಿಸಲಿದ್ದಾರೆ.

ಕೆಐಎಡಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಸುಬ್ರಮಣ್ಯ ನಾಯ್ಡು, ಕಟ್ಟಾ ಜಗದೀಶ್ ಹಾಗೂ ಇಟಾಸ್ಕಾ ಸಂಸ್ಥ ಎಂಡಿ ಶ್ರೀನಿವಾಸ್ ಅವರು ಹೈಕೋರ್ಟ್ ನಿಂದ ಮಧ್ಯಂತರ ಮತ್ತು ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ 1ನೇ ಶನಿವಾರ ಹಾಗೂ 3ನೇ ಶನಿವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಕಚೇರಿಗೆ ಹಾಜರಾಗಿ ಸಹಿ ಹಾಕುತ್ತಿದ್ದಾರೆ.

English summary
Former CM BS Yeddyurappa and former minister Katta Subramanya Naidu have been chargesheeted by Lokayukta police in KIADB land scam case. Yeddyurappa allegedly illegaly de notified 23 acres of KIADB land
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X