ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಭಾರೀ ಮುಖಭಂಗ

|
Google Oneindia Kannada News

Siddaramaiah
ಬೆಂಗಳೂರು, ಮೇ 31: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾರೀ ಮುಖಭಂಗ ಅನುಭವಿಸಿದ್ದಾರೆ. ತನ್ನ ಪರಮಾಪ್ತ ಸಿ ಎಂ ಇಬ್ರಾಹಿಂ ಅವರಿಗೆ ವಿಧಾನಪರಿಷತ್ ಟಿಕೆಟ್ ಕೊಡಿಸುವಲ್ಲಿ ಸಿದ್ದು ವಿಫಲರಾಗಿದ್ದು, ಕೊನೇ ಕ್ಷಣದವರೆಗೂ ಸಿದ್ದು ನಡೆಸಿದ ಶ್ರಮ ಫಲ ಕೊಡಲೇ ಇಲ್ಲ, ಇತ್ತ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.

ಮೋಟಮ್ಮ, ಇಕ್ಬಾಲ್ ಅಹಮದ್ ಸರಡಗಿ, ಗೋವಿಂದರಾಜ್ ಮತ್ತು ಎಂ ಆರ್ ಸೀತಾರಾಮ್ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.

ಇಬ್ರಾಹಿಂಗೆ ವಿಧಾನಪರಿಷತ್ ಟಿಕೆಟ್ ಕೊಡಿಸಲು ಸಿದ್ದು ದೆಹಲಿ ಮಟ್ಟದಲ್ಲಿ ಭಾರೀ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಬುಧವಾರ ( ಮೇ 30) ದೆಹಲಿಗೆ ತೆರಳಿ ಮತ್ತೆ ಲಾಭಿ ನಡೆಸಲು ಪ್ರಯತ್ನಿಸಿದ್ದರೂ ಹೈಕಮಾಂಡ್ ಪರಮೇಶ್ವರ್ ಅವರಿಗೆ ಮಾತ್ರ ದೆಹಲಿಗೆ ಬುಲಾವ್ ನೀಡಿತ್ತು. ರಾಜ್ಯ ನಾಯಕರ ಯಾವುದೇ ಒತ್ತಡಕ್ಕೆ ಸೊಪ್ಪು ಹಾಕದ ಹೈಕಮಾಂಡ್ ತನ್ನ ಪಟ್ಟಿಯನ್ನು ಅಂತಿಮಗೊಳಿಸಿದೆ.

ಈ ಮಧ್ಯೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಹೊಣೆಯನ್ನು ದೇವೇಗೌಡರಿಗೆ ವಹಿಸಿದೆ. ಪಕ್ಷದ ಮೂಲಗಳ ಪ್ರಕಾರ ಐವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಸಿ ನಾರಾಯಾಣ ಸ್ವಾಮಿ, ಬಸವರಾಜ್ ಪಾಟೀಲ್ ಯತ್ನಾಳ್, ಅಫ್ಸರ್, ಸೂರ್ಯನಾರಾಯಣ ರೆಡ್ಡಿ ಹಾಗೂ ಮನೋಹರ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಆಡಳಿತ ಬಿಜೆಪಿ ಆರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅವರೆಂದರೆ, ವಿಮಲಾಗೌಡ, ಡಿ ಎಸ್ ವೀರಯ್ಯ, ಭಾನುಪ್ರಕಾಶ್, ರಘುನಾಥ್ ಮಲ್ಯಾಪುರೆ, ಸೋಮಪ್ಪ ಬೇವಿನಮರದ ಮತ್ತು ಯಡಿಯೂರಪ್ಪ ಆಪ್ತ ಬಿ ಜೆ ಪುಟ್ಟಸ್ವಾಮಿ.

English summary
Congress finalized its candidates list for MLC election 2012. Oppisition leader Siddaramaiah faced civiar set back as he fails to get the ticket to his close C M Ibhrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X