ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋನಿಂದ ಕಾಗದರಹಿತವಾದ ಪೊಲೀಸ್ ಠಾಣೆ

By Mahesh
|
Google Oneindia Kannada News

Police station goes e way
ಬೆಂಗಳೂರು, ಮೇ.31 : ರಾಜ್ಯಾದ್ಯಂತ ಪೊಲೀಸ್ ಠಾಣೆಗಳು ಶೀಘ್ರದಲ್ಲೇ ಪೇಪರ್ ರಹಿತ ಕಚೇರಿ ಮಾಡುವಲ್ಲಿ ವಿಪ್ರೋ ಸಂಸ್ಥೆ ಸಫಲವಾಗಿದೆ. ಗೃಹ ಇಲಾಖೆ ಮೂರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದ್ದು, ವಿಪ್ರೋ ಟೆಕ್ನಾಲಜೀಸ್ ಕಂಪನಿ ಪೂರೈಸಿದ ಗಣಕೀಕರಣ ಕಾರ್ಯವನ್ನು ಪರಿಶೀಲಿಸಿ ಅನುಮೋದಿಸಬೇಕಿದೆ.

ಪೊಲೀಸ್ ಠಾಣೆ ಗಣಕೀರಣ ಕಾರ್ಯಕ್ಕೆ ವಿಪ್ರೊ ಸಂಸ್ಥೆಗೆ 1.96 ಕೋಟಿ ರೂಗಳನ್ನು ನೀಡಲಾಗಿದೆ. ಪೊಲೀಸ್ ಮಾಹಿತಿ ತಂತ್ರಜ್ಞಾನ ಯೋಜನೆಯ ಅನುಷ್ಠಾನವನ್ನು ಪರಾಮರ್ಶಿಸಲಿರುವ ಈ ಸಮಿತಿ ಯೋಜನೆಯ ಒಟ್ಟೂ ವೆಚ್ಚವನ್ನೂ ಪರಿಗಣಿಸಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಗಣಕೀಕರಣ ಪ್ರಕಿಯೆ ಪೂರ್ಣಗೊಂಡಿರುವ ದೃಢೀಕರಣ ಪತ್ರ ನೀಡಿದ್ದು, ದಾಖಲಾಗುವ ಎಫ್‌ಐಆರ್‌ಗಳನ್ನು ಅಧಿಕಾರಿಗಳು ಕೂಡಲೇ ಪರಿಶೀಲಿಸಲು ಗಣಕೀಕರಣ ನೆರವಾಗುತ್ತದೆ ಎಂದಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಗುಜರಾತ್ ನಂತರ ಕರ್ನಾಟಕ ಪೊಲೀಸ್ ಇಲಾಖೆಯ ಗಣಕೀಕರಣದಲ್ಲಿ ಮುಂಚೂಣಿಯಲ್ಲಿದೆ. ಇತರ ರಾಜ್ಯಗಳು ಕೇವಲ ಕ್ರೈಂ, ಕಾನೂನು ಮತ್ತು ಸಂಚಾರ ವಿಭಾಗದಲ್ಲಿ ಮಾತ್ರ ಗಣಕೀಕರಣ ಅಳವಡಿಸಿವೆ.

ರಾಜ್ಯದಲ್ಲಿ ಒಟ್ಟು 900 ಪೊಲೀಸ್ ಠಾಣೆಗಳಿದ್ದು 25 ಸಾವಿರ ಗಣಕ ಯಂತ್ರಗಳನ್ನು ಅಳವಡಿಸಲಾಗಿದೆ. 80 ಸಾವಿರ ಪೊಲೀಸ್ ಸಿಬ್ಬಂದಿಯ ಪೈಕಿ 40 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

English summary
Karnataka Police stations will soon go paperless as Wipro Technologies has completed computerisation of the home department which began six years ago. The department has set up a three-member expert committee to approve the work done, and facilitate the release of Rs1.96 crore to the software firm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X