ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದ್ ವಿಶ್ವನಾಥನ್ ವಿಶ್ವ ಚೆಸ್ ಚಾಂಪಿಯನ್

By Prasad
|
Google Oneindia Kannada News

ಮಾಸ್ಕೋ, ಮೇ. 30 : ಇಸ್ರೇಲ್‌ನ ಬೋರಿಸ್ ಗೆಲ್‌ಫ್ಯಾಂಡ್ ವಿರುದ್ಧ ಜಯ ಸಾಧಿಸುವ ಮುಖಾಂತರ ಭಾರತದ ಚೆಸ್ ದಿಗ್ಗಜ ಆನಂದ್ ವಿಶ್ವನಾಥನ್ ಅವರು ಐದನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದಾರೆ. ನಾಲ್ಕು ಪಂದ್ಯಗಳ ಟೈ ಬ್ರೆಕರ್‌ನಲ್ಲಿ ಬೋರಿಸ್ ವಿರುದ್ಧ ಆನಂದ್ ಅವರು 2.5-1.5 ಅಂತರದಿಂದ ಗೆಲುವು ಸಾಧಿಸಿದರು.

ಮಾಸ್ಕೋದ ಟ್ರೆಟ್ಯಾಕೋವ್ ಗ್ಯಾಲರಿಯಲ್ಲಿ ಬುಧವಾರ ನಡೆದ ಚೆಸ್ ಚಾಂಪಿಯನ್‌ಶಿಪ್‌ನ rapid ಚೆಸ್ ಟೈಬ್ರೇಕರ್‌ನಲ್ಲಿ ಅಂತಿಮ ಪಂದ್ಯವನ್ನು ಡ್ರಾ ಮಾಡಿಕೊಂಡ ಆನಂದ್ ವಿಶ್ವನಾಥನ್ ಮತ್ತೆ ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಧರಿಸಿದರು. ಹಿಂದೆ ಅವರು 2000, 2007, 2008 ಮತ್ತು 2010ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.

12 ಪಂದ್ಯಗಳ ಚಾಂಪಿಯನ್‌ಶಿಪ್‌ನಲ್ಲಿ ಗ್ರಾಂಡ್ ಮಾಸ್ಟರ್‌ಗಳಾದ ಆನಂದ್ ಮತ್ತು ಬೋರಿಸ್ 6 ಪಂದ್ಯಗಳನ್ನು ಗೆದ್ದು ಸಮಬಲ ತೋರಿದ್ದರಿಂದ ಟೈಬ್ರೇಕರ್ ಇಡಲಾಗಿತ್ತು. ಟೈಬ್ರೆಕರ್‌ನಲ್ಲಿ ಮೊದಲ ಪಂದ್ಯ ಡ್ರಾ ಆಗಿದ್ದರೂ, ಎರಡನೇ ಪಂದ್ಯದಲ್ಲಿ ಬಿಳಿ ಪಾನ್‌ಗಳೊಂದಿಗೆ ಆಡಿದ ಆನಂದ್ ಗೆದ್ದು ಮುನ್ನಡೆ ಸಾಧಿಸಿದ್ದರು. ಮೂರನೇ ಪಂದ್ಯ ಡ್ರಾ ಆಗಿತ್ತು. ಅಂತಿಮ ಹಂತದಲ್ಲಿ ಮನಸಿನ ಯುದ್ಧವನ್ನು ಗೆದ್ದ ಆನಂದ್ ತಾವು ವಿಶ್ವದ ನಂ.1 ಆಟಗಾರ ಎಂದು ಮತ್ತೆ ಸಾಬೀತುಪಡಿಸಿದರು.

ಟೈಬ್ರೇಕರ್‌ನ ಮೊದಲ ಪಂದ್ಯ 33 ನಡೆಗಳಲ್ಲಿ ಡ್ರಾ ಆಗಿ ಕೊನೆಗೊಂಡಿತು. ಎರಡನೇ ಮಹತ್ವದ ಪಂದ್ಯದಲ್ಲಿ 77 ನಡೆಗಳಲ್ಲಿ ಆನಂದ್ ಅವರು ಬೋರಿಸ್ ವಿರುದ್ಧ ಜಯ ಸಾಧಿಸಿದರು. ಮುಂದಿನ ಎರಡು ಪಂದ್ಯಗಳು ಹೆಚ್ಚಿನ ಆತಂಕಕ್ಕೆ ಎಡೆಮಾಡಲಿಲ್ಲ. ಈ ಚಾಂಪಿಯನ್‌ಶಿಪ್ ಅನ್ನು ಗೆಲ್ಲುವ ಮುಖಾಂತರ 42 ವರ್ಷದ ವಿಶ್ವನಾಥನ್ ಆನಂದ್ ಅವರು ಮೂರನೇ ಬಾರಿ ಅವರು ತಮ್ಮ ವಿಶ್ವ ಚಾಂಪಿಯನ್ ಪಟ್ಟುವನ್ನು ಕಾಪಾಡಿಕೊಂಡಿದ್ದಾರೆ.

ಈ ಗೆಲುವು ವಿಶ್ವನಾಥನ್ ಆನಂದ್ ಅವರಿಗೆ 2.55 ಮಿಲಿಯನ್ ಡಾಲರ್ ಒಟ್ಟು ಮೊತ್ತದಲ್ಲಿ 1.4 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವಾಗಿ ತಂದುಕೊಟ್ಟಿದೆ. ಉಳಿದ ಹಣ ಬೋರಿಸ್ ಗೆಲ್‌ಫ್ಯಾಂಡ್ ಅವರಿಗೆ ದೊರೆಯಲಿದೆ. 2008ರಲ್ಲಿ ಅವರು ವ್ಲಾಡಿಮಿರ್ ಕ್ರಾಮ್ನಿಕ್ ಮತ್ತು 2010ರಲ್ಲಿ ಅವರು ವೆಸೆಲಿನ್ ಟೊಪಾಲೊವ್ ಅವರನ್ನು ಸೋಲಿಸಿದ್ದರು.

English summary
Grandmaster Anand Viswanathan of India has won World Chess Championship for the 5th time beating Boris Gelfand of Israel in Moscow on Wednesday, May 30, 2012. Anand beat Gelfand 2.5-1.5 in rapid chess tie-breaker at the Tretyakov Gallery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X